Temple Tour: ವ್ಯಾಸ ಮತ್ತು ಕಣ್ವ ಮಹರ್ಷಿಗಳಿಂದ ಪೂಜಿಸಲ್ಪಟ್ಟ ಕೆಂಗಲ್ ಹನುಮಂತರಾಯ ಮಂದಿರವಿದು
ಸುಮಾರು 800 ವರ್ಷಗಳ ಇತಿಹಾಸವುಳ್ಳ ಕೆಂಗಲ್ ಹನುಮಂತರಾಯ ವ್ಯಾಸ ಮತ್ತು ಕಣ್ವ ಮಹರ್ಷಿಗಳಿಂದ ಪೂಜೆ ಪಡೆದಿದ್ದಾನೆ. ಸಾಮಾನ್ಯವಾಗಿ ಹನುಮನ ಆಲಯ ದಕ್ಷಿಣ ಅಥವಾ ಪಶ್ಚಿಮಾಭಿಮುಖವಾಗಿ ಇರುವುದು ವಾಡಿಕೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸುತ್ತಮುತ್ತ ಅಯ್ಯನ ಗುಡಿ ಅಂದರೆ ಎಲ್ಲರು ನಿಂತ ಸ್ಥಳದಿಂದಲೇ ಕೈ ಎತ್ತಿ ಮುಗಿಯುತ್ತಾರೆ. ಕಾರಣ ಜನರಿಗೆ ಆ ಮಂದಿರದ ಮೇಲೆ, ಅಲ್ಲಿ ಪೂಜಿಸಲ್ಪಡುತ್ತಿರುವ ಶಕ್ತಿಯ ಮೇಲೆ ಅಂತದ್ದೊಂದು ಭಕ್ತಿ ಭಾವವಿದೆ. ಜನಸಾಮಾನ್ಯರಿಗೆ ಅಯ್ಯನ ಗುಡಿ ಅಂದರೆ ಇದು ಯಾವ ಮಂದಿರ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಕೆಂಗಲ್ ಅಂದರೆ ಆ ಹನುಮಂತರಾಯನ ಚಿತ್ರಣ ಕಣ್ಮುಂದೆ ಬರುತ್ತದೆ. ಸುಮಾರು 800 ವರ್ಷಗಳ ಇತಿಹಾಸವುಳ್ಳ ಕೆಂಗಲ್ ಹನುಮಂತರಾಯ ವ್ಯಾಸ ಮತ್ತು ಕಣ್ವ ಮಹರ್ಷಿಗಳಿಂದ ಪೂಜೆ ಪಡೆದಿದ್ದಾನೆ. ಸಾಮಾನ್ಯವಾಗಿ ಹನುಮನ ಆಲಯ ದಕ್ಷಿಣ ಅಥವಾ ಪಶ್ಚಿಮಾಭಿಮುಖವಾಗಿ ಇರುವುದು ವಾಡಿಕೆ. ಆದರೆ ಕೆಂಗಲ್ನಲ್ಲಿ ಮಾತ್ರ ಆಂಜನೇಯ ಉತ್ತರಾಭಿಮುಖವಾಗಿ ನಿಂತಿದ್ದಾನೆ. ಅಷ್ಟೇ ಅಲ್ಲ ಕಾಲ ಕ್ರಮೇಣ ಈಶಾನ್ಯ ದಿಕ್ಕಿನತ್ತ ತಿರುಗುತ್ತಾ ಮಾರುತಿ ಭಕ್ತರನ್ನು ಆಶ್ಚರ್ಯ ಚಕಿತರನ್ನಾಗಿಸಿದ್ದಾನೆ.
Latest Videos