Recipe of the day: ಬ್ರೆಡ್ ರೋಲ್; ಸರಳ ವಿಧಾನದಲ್ಲಿ ಮನೆಯಲ್ಲೇ ಮಾಡಿ ಸವಿಯಿರಿ

Recipe of the day: ಬ್ರೆಡ್ ರೋಲ್; ಸರಳ ವಿಧಾನದಲ್ಲಿ ಮನೆಯಲ್ಲೇ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Sep 28, 2021 | 11:36 AM

ಬ್ರೆಡ್​ ರೋಲ್​ ಅನ್ನು​​ 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಬ್ರೆಡ್​ ರೋಲ್​ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಹೊರಗಿನ ತಿಂಡಿಗಳನ್ನು ತಿನ್ನುವುದನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು, ಬೇಲ್​ ಪುರಿ, ಮಸಾಲ್​ ಪುರಿ, ಬ್ರೆಡ್​ ರೋಲ್​ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಬ್ರೆಡ್​ ರೋಲ್​ ಅನ್ನು​​ 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಬ್ರೆಡ್​ ರೋಲ್​ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಬ್ರೆಡ್ ರೋಲ್ ಮಾಡಲು ಬೇಕಾಗುವ ಸಾಮಾಗ್ರಿಗಳು ಬ್ರೆಡ್, ಗರಂ ಮಸಾಲ, ದನಿಯಾ ಪುಡಿ, ಕರಿ ಮೆಣಸಿನ ಪುಡಿ, ಅರಿಶಿಣ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ಉಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಅಡುಗೆ ಎಣ್ಣೆ.

ಬ್ರೆಡ್ ರೋಲ್  ಮಾಡುವ ವಿಧಾನ
ಮೊದಲು ಬೇಯಿಸಿದ ಆಲೂಗಡ್ಡೆ ಪುಡಿ ಮಾಡಿ ಅದಕ್ಕೆ, ಉಪ್ಪು, ಗರಂ ಮಸಾಲ, ದನಿಯಾ ಪುಡಿ, ಕರಿ ಮೆಣಸಿನ ಪುಡಿ, ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಹಸಿ ಮೆಣಸಿನಕಾಯಿ, ಶುಂಠಿ, ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಅರಿಶಿಣ ಪುಡಿ, ಕರಿ ಮೆಣಸಿನ ಪುಡಿ ಹಾಕಿ. ಬಳಿಕ ಆಲೂಗಡ್ಡೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈಗ ಬ್ರೆಡ್ ನೀರಿಗೆ ಅದ್ದಿ ನಂತರ ಅದರ ಮಧ್ಯೆ ಆಲೂಗಡ್ಡೆ ಮಿಶ್ರಣ ಹಾಕಿ. ನಂತರ ಎಣ್ಣೆಯಲ್ಲಿ ಕರಿಯಿರಿ.

ಇದನ್ನೂ ಓದಿ:
ಮಲೆನಾಡು ಸ್ಪೆಷಲ್ ಎಡಿಮಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Recipe of the day: ಖಾರ ನಿಪ್ಪಟ್ಟು ಮಾಡುವ ಸರಳ ವಿಧಾನ ತಿಳಿದುಕೊಳ್ಳಿ