AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ಬಿಟೌನ್​ನಲ್ಲಿ ರಾಕಿಂಗ್ ಸ್ಟಾರ್ ಹವಾ; ಯಶ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

Yash: ಬಿಟೌನ್​ನಲ್ಲಿ ರಾಕಿಂಗ್ ಸ್ಟಾರ್ ಹವಾ; ಯಶ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

TV9 Web
| Updated By: shivaprasad.hs|

Updated on: Sep 28, 2021 | 3:53 PM

Share

Mumbai: ಇತ್ತೀಚೆಗಷ್ಟೇ ಸ್ಯಾಂಡಲ್​ವುಡ್ ನಟ ಯಶ್, ಮುಂಬೈಗೆ ತೆರಳಿದ್ದರು. ಅಲ್ಲಿ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.

ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಮುಂಬೈಗೆ ತೆರಳಿದ್ದರು. ಅಲ್ಲಿ ಬಾಲಿವವುಡ್ ಸೆಲೆಬ್ರಿಟಿಗಳಂತೆಯೇ ಯಶ್​ಗೆ ಅಭಿಮಾನಿಗಳಿಂದ ಭರಪೂರ ಸ್ವಾಗತ ಸಿಕ್ಕಿತ್ತು. ಅಲ್ಲದೇ ಅಭಿಮಾನಿಗಳು ರಾಕಿಂಗ್ ಸ್ಟಾರ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಕೆಜಿಎಫ್ ಖ್ಯಾತಿಯ ಯಶ್, ಬಾಲಿವುಡ್​ನಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವುದಕ್ಕೆ ಇದು ಹೊಸ ಸಾಕ್ಷಿ ಎಂದು ಅಭಿಮಾನಿಗಳು ಸಂತಸಪಟ್ಟುಕೊಂಡಿದ್ದಾರೆ. ಯಶ್ ಎಲ್ಲಾ ಅಭಿಮಾನಿಗಳಿಗೂ ಸಾವಧಾನವಾಗಿ ಪೋಸ್ ನೀಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ತಮ್ಮ ಬೌನ್ಸರ್ ಫ್ಯಾನ್ಸ್ ಅವರನ್ನು ದಾರಿ ಮಾಡಿಕೊಡಲು ಬದಿಗೆ ಸರಿಸಿದ್ದಕ್ಕೂ ಯಶ್, ಕ್ಷಮೆ ಕೇಳಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಯಶ್ ಜಾಹಿರಾತೊಂದರ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದರು ಎನ್ನಲಾಗಿದೆ.

ಪ್ರಸ್ತುತ ಯಶ್ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು 2022ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಇದರ ಹೊರತಾಗಿ ಯಶ್ ತಮ್ಮ ಮುಂದಿನ ಚಿತ್ರವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ದಕ್ಷಿಣ ಭಾರತದ, ಬಾಲಿವುಡ್​ನ ಹಲವು ಖ್ಯಾತ ನಿರ್ದೇಶಕರೊಂದಿಗೆ ಅವರ ಹೆಸರು ಕೇಳಿ ಬರುತ್ತಿದ್ದರೂ, ಇನ್ನೂ ಯಾವುದೂ ಅಂತಿಮವಾದಂತಿಲ್ಲ. ಆದ್ದರಿಂದಲೇ ಅಭಿಮಾನಿಗಳು ಅವರ ಮುಂದಿನ ಚಿತ್ರದ ಘೋಷಣೆಗೆ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:

ಯಶ್​ಗೆ ಭೀಮನ ಪಾತ್ರ, ಪ್ರಶಾಂತ್​ ನೀಲ್​ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್​ಗೆ ಲಕ್ಷಾಂತರ ವೀವ್ಸ್​

ಯಶ್​ಗೆ ರಾಕಿಂಗ್ ಸ್ಟಾರ್​ ಬಿರುದು ಬಂದಿದ್ದು ಹೇಗೆ? ಮಿತ್ರ ಕೊಟ್ರು ಉತ್ತರ

‘ಜೀವನವನ್ನು ವಿಶೇಷವಾಗಿಸಿದ್ದೀಯಾ, ನಮ್ಮ ನಗುವಿಗೆ ನೀನೇ ಕಾರಣ’; ಮಗಳು ಆಯ್ರಾ ಬಗ್ಗೆ ರಾಧಿಕಾ-ಯಶ್ ವಿಶೇಷ ಮಾತು