ಯಶ್​ಗೆ ಭೀಮನ ಪಾತ್ರ, ಪ್ರಶಾಂತ್​ ನೀಲ್​ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್​ಗೆ ಲಕ್ಷಾಂತರ ವೀವ್ಸ್​

ಭೀಮನ ಪಾತ್ರದಲ್ಲಿ ಯಶ್​ ನಟಿಸಲಿದ್ದು, ಅದಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಹಾಗೂ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಈ ನಕಲಿ ಟ್ರೇಲರ್​ನಲ್ಲಿ ತಿಳಿಸಲಾಗಿದೆ. ಇದು ಲಕ್ಷಾಂತರ ವೀವ್ಸ್​ ಪಡೆದುಕೊಳ್ಳುತ್ತಿದೆ.

ಯಶ್​ಗೆ ಭೀಮನ ಪಾತ್ರ, ಪ್ರಶಾಂತ್​ ನೀಲ್​ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್​ಗೆ ಲಕ್ಷಾಂತರ ವೀವ್ಸ್​
ಯಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 26, 2021 | 1:11 PM

‘ರಾಕಿಂಗ್​ ಸ್ಟಾರ್’​ ಯಶ್​ ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಎಲ್ಲರಲ್ಲೂ ಕೌತುಕ ಇದೆ. ಸದ್ಯ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. 2022ರ ಏಪ್ರಿಲ್​ 14ರಂದು ಈ ಚಿತ್ರ ರಿಲೀಸ್​ ಆಗಲಿದೆ. ಸದ್ಯ ಕೊನೆ ಹಂತದ ಕೆಲಸಗಳು ನಡೆಯುತ್ತಿವೆ. ನಿರ್ದೇಶಕ ಪ್ರಶಾಂತ್​ ನೀಲ್​ ಕಸುಬುದಾರಿಕೆಯ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ. ಹಾಗಾದರೆ ‘ಕೆಜಿಎಫ್​ 2’ ಬಳಿಕ ಯಶ್​ ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ? ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೂ ಮುನ್ನವೇ ‘ಭೀಮ’ ಸಿನಿಮಾದ ಟ್ರೇಲರ್​ಗೆ ಯೂಟ್ಯೂಬ್​ನಲ್ಲಿ​ ಲಕ್ಷಾಂತರ ವೀವ್ಸ್​ ಸಿಗುತ್ತಿದೆ. ಇದೊಂದು ನಕಲಿ ಸಿನಿಮಾ ಮತ್ತು ನಕಲಿ ಟ್ರೇಲರ್​ ಎಂಬುದು ಗಮನಿಸಬೇಕಾದ ಅಂಶ!

ಯಾವುದಾದರೂ ಹೊಸ ಸಿನಿಮಾ ಘೋಷಣೆ ಆದಾಗ ಅದರ ಫ್ಯಾನ್​ ಮೇಡ್​ ಪೋಸ್ಟರ್, ಟೀಸರ್​, ಟ್ರೇಲರ್​ಗಳು ಯೂಟ್ಯೂಬ್​ನಲ್ಲಿ ಸದ್ದು ಮಾಡುವುದು ಸಹಜ. ಅವುಗಳನ್ನು ಕಂಡು ಕೆಲವೊಮ್ಮೆ ಚಿತ್ರತಂಡದವರು ಕೂಡ ಬೆನ್ನುತಟ್ಟಿದ ಉದಾಹರಣೆ ಇದೆ. ಆದರೆ ಈಗ ವೈರಲ್​ ಆಗುತ್ತಿರುವ ‘ಭೀಮ’ ಎಂಬ ಸಿನಿಮಾ ಘೋಷಣೆಯೇ ಆಗಿಲ್ಲ. ಅಸಲಿಗೆ ಅಂತಹ ಪ್ಲ್ಯಾನ್​ ಕೂಡ ಇಲ್ಲ. ಆದರೆ ಯೂಟ್ಯೂಬ್​ನಲ್ಲಿ ಇಂಥದ್ದೊಂದು ಕಾಲ್ಪನಿಕ ಚಿತ್ರದ ಟ್ರೇಲರ್​ ಎಡಿಟ್​ ಮಾಡಿ ಹರಿಬಿಡಲಾಗಿದೆ.

ಭೀಮನ ಪಾತ್ರದಲ್ಲಿ ಯಶ್​ ನಟಿಸುತ್ತಾರೆ. ಅದಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಈ ನಕಲಿ ಟ್ರೇಲರ್​ನಲ್ಲಿ ತಿಳಿಸಲಾಗಿದೆ. ಯಶ್​ ನಟಿಸಿದ ಖಾಸಗಿ ಕಂಪನಿಯ ಜಾಹೀರಾತಿನ ಕೆಲವು ತುಣುಕುಗಳನ್ನು ಬಳಸಿಕೊಂಡು ಈ ಟ್ರೇಲರ್​ ಎಡಿಟ್​ ಮಾಡಲಾಗಿದೆ. ಹೆಡ್ಡಿಂಗ್​ನಲ್ಲಿ ‘ಭೀಮ ಅಫೀಶಿಯಲ್​ ಟ್ರೇಲರ್​’ ಎಂದು ಬರೆಯಲಾಗಿದೆ. ಆದರೆ ಅದರ ಡಿಸ್ಕ್ರಿಪ್ಷನ್​ನಲ್ಲಿ ಹೋಗಿ ನೋಡಿದರೆ ಮಾತ್ರ ಈ ಟ್ರೇಲರ್​ ಹಿಂದಿನ ಅಸಲಿಯತ್ತು ಏನು ಎಂಬುದು ಗೊತ್ತಾಗುತ್ತದೆ. ಇದೊಂದು ಕಾಲ್ಪನಿಕ ಪ್ರಾಜೆಕ್ಟ್​ನ ನಕಲಿ ಟ್ರೇಲರ್​ ಎಂಬುದನ್ನು ಸ್ಪಷ್ಟವಾಗಿ ಬರೆಯಲಾಗಿದೆ.

ಸದ್ಯ ಈ ನಕಲಿ ಸಿನಿಮಾದ ನಕಲಿ ಟ್ರೇಲರ್​ ಕಂಡು ಅಭಿಮಾನಿಗಳು ಫಿದಾ ಆಗಿರುವುದು ನಿಜ. ಪ್ರಶಾಂತ್​ ನೀಲ್​ ಮತ್ತು ಯಶ್​ ಕಾಂಬಿನೇಷನ್​ನಲ್ಲಿ ನಿಜವಾಗಿಯೂ ಇಂಥ ಒಂದು ಸಿನಿಮಾ ಮೂಡಿಬರಲಿ ಎಂದು ಅನೇಕರು ಆಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

‘ಸಿಲ್ಲಿ ಲಲ್ಲಿ ಸೀರಿಯಲ್​ನಲ್ಲಿ ಯಶ್​ ನಟಿಸಿದ್ರು, ಇಂದು ಐಕಾನ್​ ಆಗಿದ್ದಾರೆ’: ಹಾಸ್ಯ ನಟ ಮಿತ್ರ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ