‘ಸಿಲ್ಲಿ ಲಲ್ಲಿ ಸೀರಿಯಲ್​ನಲ್ಲಿ ಯಶ್​ ನಟಿಸಿದ್ರು, ಇಂದು ಐಕಾನ್​ ಆಗಿದ್ದಾರೆ’: ಹಾಸ್ಯ ನಟ ಮಿತ್ರ

ಮೊದಲು ಕಿರುತೆರೆಯಲ್ಲಿ ನಟಿಸಿ, ನಂತರ ಸಿನಿಮಾದಲ್ಲಿ ಮಿಂಚಿದವರು ನಟ ಯಶ್​. ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಕೂಡ ಯಶ್​ ಅಭಿನಯಿಸಿದ್ದರು ಎಂಬುದನ್ನು ಹಾಸ್ಯ ನಟ ಮಿತ್ರ ಮೆಲುಕು ಹಾಕಿದ್ದಾರೆ.

ನಟ ಯಶ್​ ಅವರು ಇಂದು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಆದರೆ ಸಿನಿಮಾಗಳಲ್ಲಿ ಮಿಂಚುವುದಕ್ಕಿಂತ ಮೊದಲು ಅವರು ಕಿರುತೆರೆಯಲ್ಲಿ ನಟಿಸಿದ್ದರು. ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಆ ಪೈಕಿ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಕೂಡ ಒಂದು. ಆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆ ದಿನಗಳನ್ನು ಹಾಸ್ಯ ನಟ ಮಿತ್ರ ಅವರು ನೆನಪು ಮಾಡಿಕೊಂಡಿದ್ದಾರೆ. ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಅವರು ಯಶ್​, ಗಣೇಶ್​ ಬಗ್ಗೆ ಮಾತನಾಡಿದ್ದಾರೆ.

‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಜಾಣೇಶ್​ ಎಂಬ ಪಾತ್ರದ ಮೂಲಕ ಮಿತ್ರ ಗುರುತಿಸಿಕೊಂಡಿದ್ದರು. ಬಳಿಕ ಅವರು ಕೂಡ ಚಿತ್ರರಂಗದಲ್ಲಿ ಫೇಮಸ್​ ಆದರು. ಹೀರೋ ಆಗಿಯೂ ನಟಿಸಿದರು. ಅಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದ ಯಶ್​ ಇಂದು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಕ್ಕೆ ಮಿತ್ರ ಖುಷಿಪಡುತ್ತಿದ್ದಾರೆ. ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್​ ಒಪ್ಪಿಕೊಳ್ಳಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆಯೂ ಭಾರಿ ಕೌತುಕ ಮನೆ ಮಾಡಿದೆ.

ಇದನ್ನೂ ಓದಿ:

ಸೌತ್ ಹೀರೋಗಳಲ್ಲಿ ಅಲ್ಲು ಅರ್ಜುನ್​ ನಂ.1, ಯಶ್​ಗೆ 5ನೇ ಸ್ಥಾನ; ಇದು ಯಾವ​ ಹಣಾಹಣಿ?

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

Click on your DTH Provider to Add TV9 Kannada