‘ನಮ್ ನಡುವೆ ಯಾರೇ ತಂದಿಟ್ರೂ ನಾವ್​ ಚೆನ್ನಾಗಿ ಇರ್ತೀವಿ’: ಕಿಚ್ಚನ ಬಗ್ಗೆ ದುನಿಯಾ ವಿಜಿ ಮಾತು

‘ನಮ್ ನಡುವೆ ಯಾರೇ ತಂದಿಟ್ರೂ ನಾವ್​ ಚೆನ್ನಾಗಿ ಇರ್ತೀವಿ’: ಕಿಚ್ಚನ ಬಗ್ಗೆ ದುನಿಯಾ ವಿಜಿ ಮಾತು

TV9 Web
| Updated By: ಮದನ್​ ಕುಮಾರ್​

Updated on: Sep 26, 2021 | 4:40 PM

‘ಕೋಟಿಗೊಬ್ಬ 3’ ಮತ್ತು ‘ಸಲಗ’ ಸಿನಿಮಾಗಳ ರಿಲೀಸ್​ ಪೈಪೋಟಿಯಿಂದಾಗಿ ಸ್ಟಾರ್​ ವಾರ್ ಶುರು​ವಾಗುತ್ತಾ? ಸುದೀಪ್​ ಮತ್ತು ದುನಿಯಾ ವಿಜಯ್​ ನಡುವೆ ಮನಸ್ತಾಪ ಉಂಟಾಗುತ್ತಾ? ಖಂಡಿತಾ ಇಲ್ಲ ಎಂದಿದ್ದಾರೆ ವಿಜಯ್​.

ದುನಿಯಾ ವಿಜಯ್​ ನಟನೆಯ ‘ಸಲಗ’ ಸಿನಿಮಾ ಅ.14ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಇದೆ. ಹಾಡುಗಳ ಮೂಲಕ ಧೂಳೆಬ್ಬಿಸಿರುವ ಈ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲೂ ಮೋಡಿ ಮಾಡಲಿದೆಯಾ ಎಂಬುದನ್ನು ನೋಡಲು ಇಡೀ ಗಾಂಧಿನಗರ ಕಾಯುತ್ತಿದೆ. ಈ ಸಂದರ್ಭದಲ್ಲಿ ‘ಕೋಟಿಗೊಬ್ಬ 3’ ಚಿತ್ರದ ಕೂಡ ದಸರಾ ಹಬ್ಬಕ್ಕೆ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ಇದು ಸ್ಟಾರ್​ ವಾರ್​ಗೆ ಕಾರಣ ಆಗುತ್ತಾ? ಸುದೀಪ್​ ಮತ್ತು ವಿಜಯ್​ ನಡುವೆ ಮನಸ್ತಾಪ ಮೂಡಿಸುತ್ತಾ? ಖಂಡಿತಾ ಇಲ್ಲ ಎಂದಿದ್ದಾರೆ ದುನಿಯಾ ವಿಜಯ್​.

‘ದಸರಾ ಹಬ್ಬದ ಸಮಯದಲ್ಲಿ ಪ್ರೇಕ್ಷಕರು ಎರಡೂ ಸಿನಿಮಾವನ್ನು ಎಂಜಾಯ್​ ಮಾಡಲಿ ಎಂಬುದು ನನ್ನ ಆಸೆ. ಮೊದಲು ಸ್ಟಾರ್​ ವಾರ್​ ಅಂತ ಜನ ಮಾತನಾಡುತ್ತಿದ್ದರು. ಅದೆಲ್ಲ ಬೇಡ. ಅದನ್ನು ಬಿಟ್ಟು ಎಲ್ಲರೂ ಸಿನಿಮಾ ನೋಡಲಿ. ನನಗೆ ಖಂಡಿತಾ ವೈಮನಸ್ಸು ಬರುವುದಿಲ್ಲ. ಸುದೀಪ್​ ಅವರು ನನಗಿಂತ ಮೊದಲೇ ಚಿತ್ರರಂಗದಲ್ಲಿ ಇರುವವರು. ಅವರು ದೊಡ್ಡ ಹೀರೋ. ಅವರು ಕೂಡ ಪಾಸಿಟಿವ್​ ಆಗಿ ಆಲೋಚನೆ ಮಾಡುತ್ತಾರೆ. ಯಾರು ಏನೇ ತಂದಿಟ್ರೂ ನಾವು ಚಿತ್ರರಂಗದವರು ಚೆನ್ನಾಗಿಯೇ ಇರುತ್ತೇವೆ’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಕುಟುಂಬದಲ್ಲಿ ​ಮದುವೆ ಸಂಭ್ರಮ; ಇಲ್ಲಿವೆ ಕಲರ್​ಫುಲ್​ ಫ್ಯಾಮಿಲಿ ಫೋಟೋಗಳು

ಮುಂದಕ್ಕೆ ಹೋಗುತ್ತಾ ‘ಕೋಟಿಗೊಬ್ಬ 3’ ರಿಲೀಸ್ ಡೇಟ್? ನಾಳೆ ಸುದೀಪ್ ಜತೆ ‘ಸಲಗ’ ನಿರ್ಮಾಪಕರ ಭೇಟಿ