ಮುಂದಕ್ಕೆ ಹೋಗುತ್ತಾ ‘ಕೋಟಿಗೊಬ್ಬ 3’ ರಿಲೀಸ್ ಡೇಟ್? ನಾಳೆ ಸುದೀಪ್ ಜತೆ ‘ಸಲಗ’ ನಿರ್ಮಾಪಕರ ಭೇಟಿ
ದು ಹೀರೋಗಳಿಗೆ ಸಂಬಂಧಿಸಿದ ವಿಷಯವಲ್ಲ. ನಿರ್ಮಾಪಕರೇ ಚರ್ಚಿಸಿ ದಿನಾಂಕ ಫಿಕ್ಸ್ ಮಾಡ್ತಾರೆ. ಇಂಡಸ್ಟ್ರಿಯಲ್ಲಿ ನಾವು ಎಲ್ಲರೂ ಚೆನ್ನಾಗಿಯೇ ಇದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ ದುನಿಯಾ ವಿಜಯ್.
ಚಿತ್ರಮಂದಿರಗಳಲ್ಲಿ ಶೇ.100 ಭರ್ತಿಗೆ ಅವಕಾಶ ನೀಡಿದ ನಂತರದಲ್ಲಿ ಸ್ಟಾರ್ ಸಿನಿಮಾ ನಿರ್ಮಾಪಕರು ತಮ್ಮ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿವೆ. ಅಕ್ಟೋಬರ್ 14ರಂದು ದುನಿಯಾ ವಿಜಯ್ ನಟನೆಯ ‘ಸಲಗ’ ಹಾಗೂ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಒಟ್ಟಿಗೆ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ. ಸ್ಯಾಂಡಲ್ವುಡ್ನಲ್ಲಿ ಈ ರೀತಿ ಸ್ಟಾರ್ ಸಿನಿಮಾಗಳು ಕ್ಲ್ಯಾಶ್ ಆಗಿದ್ದು ತುಂಬಾನೇ ಅಪರೂಪ. ಈಗ ಎರಡು ಸಿನಿಮಾಗಳಲ್ಲಿ ಒಂದು ಸಿನಿಮಾದ ದಿನಾಂಕ ಮೂಂದೂಡಲ್ಪಡುವ ಸಾಧ್ಯತೆ ಇದೆ.
ಈ ಬಗ್ಗೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮಾತನಾಡಿದ್ದಾರೆ. ‘ಇಂದು ದುನಿಯಾ ವಿಜಯ್ ಮನೆಯಲ್ಲಿ ಸಭೆ ಸೇರಿ ಸಿನಿಮಾ ರಿಲೀಸ್ ದಿನಾಂಕ ಫಿಕ್ಸ್ ಮಾಡಿದ್ದೇವೆ. ಕೊರೊನಾ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಒಂದೂವರೆ ವರ್ಷದಿಂದ ವಿಳಂಬ ಆಗುತ್ತಲೇ ಇದೆ. ಸಲಗ ಮುಹೂರ್ತ ಕಾರ್ಯಕ್ರಮಕ್ಕೆ ಸುದೀಪ್ ಬಂದಿದ್ದರು. ಇದರಲ್ಲಿ ಯಾವುದೇ ಸ್ಟಾರ್ ವಾರ್ ಇಲ್ಲ. ನಾಳೆ ಸುದೀಪ್‌ರನ್ನು ಭೇಟಿಯಾಗುವೆ ಎಂದಿದ್ದಾರೆ’ ಕೆ.ಪಿ.ಶ್ರೀಕಾಂತ್. ಈ ವೇಳೆ ಅವರು ಸಿನಿಮಾ ರಿಲೀಸ್ ದಿನಾಂಕ ಮುಂದೂಡುವಂತೆ ಕೋರುವ ಸಾಧ್ಯತೆ ಇದೆ.
ಟಿವಿ9ಗೆ ನಟ ದುನಿಯಾ ವಿಜಯ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ‘ಇದು ಹೀರೋಗಳಿಗೆ ಸಂಬಂಧಿಸಿದ ವಿಷಯವಲ್ಲ. ನಿರ್ಮಾಪಕರೇ ಚರ್ಚಿಸಿ ದಿನಾಂಕ ಫಿಕ್ಸ್ ಮಾಡ್ತಾರೆ. ಇಂಡಸ್ಟ್ರಿಯಲ್ಲಿ ನಾವು ಎಲ್ಲರೂ ಚೆನ್ನಾಗಿಯೇ ಇದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ ಅವರು. ಈ ಮಧ್ಯೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿ ಕೆ.ಪಿ.ಶ್ರೀಕಾಂತ್ ಹಾಗೂ ದುನಿಯಾ ವಿಜಯ್ಗೆ ಶುಭ ಕೋರಿದ್ದಾರೆ.
Bst wshs my friend @kp_sreekanth .. And many bst wshs Viji for ua debut as a director…. May this be jus a beginning of a long story. Cheers to the team ?? https://t.co/U9Vn3yP1MR
— Kichcha Sudeepa (@KicchaSudeep) September 26, 2021
ಇದನ್ನೂ ಓದಿ:ಸ್ಯಾಂಡಲ್ವುಡ್ ಸಿನಿ ಹಬ್ಬ; ಬಹು ನಿರೀಕ್ಷಿತ ಸ್ಟಾರ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್
‘ಪವರ್ ಇಲ್ಲದವರಿಗೆ ಪವರ್ ಸ್ಟಾರ್ ಅಂತ ಯಾಕೆ ಕರೆಯುತ್ತೀರಿ’? ಪವನ್ ಕಲ್ಯಾಣ್ ಟಾಂಗ್ ಕೊಟ್ಟಿದ್ದು ಯಾರಿಗೆ?