AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪವರ್​ ಇಲ್ಲದವರಿಗೆ ಪವರ್​ ಸ್ಟಾರ್​ ಅಂತ ಯಾಕೆ ಕರೆಯುತ್ತೀರಿ’? ಪವನ್​ ಕಲ್ಯಾಣ್​ ಟಾಂಗ್​ ಕೊಟ್ಟಿದ್ದು ಯಾರಿಗೆ?

‘ಇನ್ನೂ ಯಾಕೆ ಪವರ್​ ಸ್ಟಾರ್​ ಅಂತ ಕರೆಯುತ್ತಿದ್ದೀರಿ? ಯಾವುದೇ ಪವರ್ ಇಲ್ಲದೆ ಪವರ್​ ಸ್ಟಾರ್​ ಅಂತ ಕರೆಸಿಕೊಳ್ಳುವುದರಲ್ಲಿ ಏನು ಅರ್ಥವಿದೆ’ ಎಂದು ನಟ ಪವನ್​ ಕಲ್ಯಾಣ್​ ಅವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.

‘ಪವರ್​ ಇಲ್ಲದವರಿಗೆ ಪವರ್​ ಸ್ಟಾರ್​ ಅಂತ ಯಾಕೆ ಕರೆಯುತ್ತೀರಿ’? ಪವನ್​ ಕಲ್ಯಾಣ್​ ಟಾಂಗ್​ ಕೊಟ್ಟಿದ್ದು ಯಾರಿಗೆ?
ಪವನ್ ಕಲ್ಯಾಣ್
TV9 Web
| Edited By: |

Updated on: Sep 26, 2021 | 3:44 PM

Share

ನಟ ಪವನ್​ ಕಲ್ಯಾಣ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಅವರು ಸಕ್ರಿಯರಾಗಿದ್ದಾರೆ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಪವರ್​ ಸ್ಟಾರ್​’ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೂ ಈ ಬಿರುದು ಇದೆ. ಪವನ್​ ಕಲ್ಯಾಣ್​​ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದರೂ ಅಲ್ಲಿ ನೆರೆದಿರುವ ಜನರು ‘ಪವರ್​ ಸ್ಟಾರ್​ ಪವರ್​ ಸ್ಟಾರ್​’ ಎಂದು ಜೋರಾಗಿ ಘೋಷಣೆ ಕೂಗುತ್ತಾರೆ. ಅಲ್ಲದೇ ಅವರು ಜನಸೇನಾ ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರಿಯವಾದ ನಂತರ ‘ಸಿಎಂ’ ಎಂದು ಕೂಡ ಅಭಿಮಾನಿಗಳು ಘೋಷಣೆ ಕೂಗಲು ಆರಂಭಿಸಿದರು. ಇದರ ಬಗ್ಗೆ ಪವನ್​ ಕಲ್ಯಾಣ್​ ಪ್ರತಿಕ್ರಿಯೆ ನೀಡಿದ್ದಾರೆ.

ಪವನ್​ ಕಲ್ಯಾಣ್​ ಅಳಿಯ ಸಾಯಿ ಧರಮ್​ ತೇಜ್​ ಅವರಿಗೆ ಕೆಲವೇ ದಿನಗಳ ಹಿಂದೆ ಬೈಕ್ ಅಪಘಾತ ಆಯಿತು. ಅವರು ನಟಿಸಿದ ‘ರಿಪಬ್ಲಿಕ್​’ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಅದರ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಪವನ್​ ಕಲ್ಯಾಣ್​ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಅವರು ಮಾತನಾಡಲು ಆರಂಭಿಸಿದ ತಕ್ಷಣ ಅಭಿಮಾನಿಗಳು ಎಂದಿನಂತೆ ‘ಪವರ್​ ಸ್ಟಾರ್​ ಪವರ್​ ಸ್ಟಾರ್​’ ಎಂದು ಕೂಗಲು ಆರಂಭಿಸಿದರು. ಅದಕ್ಕೆ ಪವನ್​ ಕಲ್ಯಾಣ್​ ಖಡಕ್​ ಆಗಿ ಪ್ರತಿಕ್ರಿಯಿಸಿದರು.

‘ಇನ್ನೂ ಯಾಕೆ ನನ್ನನ್ನು ಪವರ್​ ಸ್ಟಾರ್​ ಅಂತ ಕರೆಯುತ್ತಿದ್ದೀರಿ? ನನ್ನ ಬಳಿ ಯಾವುದೇ ಪವರ್ (ಅಧಿಕಾರ) ಇಲ್ಲ. ಪವರ್​ ಸ್ಟಾರ್​ ಅಂತ ಕರೆಸಿಕೊಳ್ಳುವುದರಲ್ಲಿ ಏನು ಅರ್ಥವಿದೆ? ನಿಮ್ಮಿಂದ ಪವರ್​ ಸ್ಟಾರ್​ ಅಥವಾ ಸಿಎಂ ಎಂದು ಜೈಕಾರ ಹಾಕಿಸಿಕೊಳ್ಳಲು ನಾನಿಲ್ಲಿಗೆ ಬಂದಿಲ್ಲ’ ಎಂದು ಪವನ್​ ಕಲ್ಯಾಣ್​ ಕೊಂಚ ಖಾರವಾಗಿಯೇ ಹೇಳಿದರು. ಮುಂಬರುವ ಸಿನಿಮಾಗಳ ಟೈಟಲ್​ ಕಾರ್ಡ್​ಗಳಲ್ಲಿ ಕೂಡ ತಮ್ಮ ಹೆಸರಿನ ಜೊತೆ ‘ಪವರ್​ ಸ್ಟಾರ್​’ ಎಂಬ ಬಿರುದನ್ನು ಸೇರಿಸಬಾರದು ಎಂದು ಚಿತ್ರತಂಡಗಳಿಗೆ ಅವರು ತಾಕೀತು ಮಾಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬಂದಿದೆ.

2019ರ ಚುನಾವಣೆಯಲ್ಲಿ ಪವನ್​ ಕಲ್ಯಾಣ್​ ಅವರು ಸೋಲು ಅನುಭವಿಸಿದ್ದರು. ಪ್ರೀತಿಯಿಂದ ‘ಪವರ್​ ಸ್ಟಾರ್​’ ಎಂದು ಕರೆಯುವ ಅಭಿಮಾನಿಗಳು ನಿರೀಕ್ಷಿತ ಪ್ರಮಾಣದಲ್ಲಿ ಮತ ನೀಡದ ಕಾರಣ ಅವರಿಗೆ ಪವರ್​ (ಅಧಿಕಾರ) ಸಿಗಲಿಲ್ಲ. ಆ ಕಾರಣದಿಂದಲೇ ಈಗ ಅಭಿಮಾನಿಗಳಿಗೆ ಪವನ್​ ಕಲ್ಯಾಣ್​ ಮಾತಿನ ಮೂಲಕ ಟಾಂಗ್​ ಕೊಟ್ಟಿದ್ದಾರೆ. ಸದ್ಯ ಅವರು ನಟಿಸಿರುವ ‘ಭೀಮ್ಲಾ ನಾಯಕ್​’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. 2022ರ ಜನವರಿ 12ರಂದು ಈ ಚಿತ್ರ ರಿಲೀಸ್​ ಆಗಲಿದೆ. ಇದರಲ್ಲಿ ರಾಣಾ ದಗ್ಗುಬಾಟಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

Pawan Kalyan: ಪವನ್​ ಕಲ್ಯಾಣ್​ ಸಿನಿಮಾದ ಡೈಲಾಗ್​ ಹೊಡೆದ ವೀರೇಂದ್ರ ಸೆಹ್ವಾಗ್; ಇಲ್ಲಿದೆ ವೈರಲ್​ ವಿಡಿಯೋ

Pawan Kalyan: ಪವನ್​ ಕಲ್ಯಾಣ್​ ಬರ್ತ್​ಡೇ; ಟಾಲಿವುಡ್​ ‘ಪವರ್​ ಸ್ಟಾರ್​’ ಬಳಿ ಇರುವ ಐಷಾರಾಮಿ ವಸ್ತುಗಳೇನು?

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು