AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pawan Kalyan: ಪವನ್​ ಕಲ್ಯಾಣ್​ ಸಿನಿಮಾದ ಡೈಲಾಗ್​ ಹೊಡೆದ ವೀರೇಂದ್ರ ಸೆಹ್ವಾಗ್; ಇಲ್ಲಿದೆ ವೈರಲ್​ ವಿಡಿಯೋ

Virender Sehwag: ತೆಲುಗು ಬಾರದಿದ್ದರೂ ಕೂಡ ವೀರೇಂದ್ರ ಸೆಹ್ವಾಗ್​ ಅವರು ಕಷ್ಟಪಟ್ಟು ಡೈಲಾಗ್​ ಹೇಳಿದ್ದಾರೆ. ಅಷ್ಟೇ ಅಲ್ಲ, ಪವನ್​ ಕಲ್ಯಾಣ್​ರ ಮ್ಯಾನರಿಸಂ ಕಾಪಿ ಮಾಡುವುದಕ್ಕೂ ಸೆಹ್ವಾಗ್​ ಪ್ರಯತ್ನಿಸಿದ್ದಾರೆ.

Pawan Kalyan: ಪವನ್​ ಕಲ್ಯಾಣ್​ ಸಿನಿಮಾದ ಡೈಲಾಗ್​ ಹೊಡೆದ ವೀರೇಂದ್ರ ಸೆಹ್ವಾಗ್; ಇಲ್ಲಿದೆ ವೈರಲ್​ ವಿಡಿಯೋ
ವೀರೇಂದ್ರ ಸೆಹ್ವಾಗ್​, ಪವನ್​ ಕಲ್ಯಾಣ್
TV9 Web
| Edited By: |

Updated on:Sep 07, 2021 | 3:46 PM

Share

ವೀರೇಂದ್ರ ಸೆಹ್ವಾಗ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಕ್ರಿಕೆಟ್​ ದುನಿಯಾದಲ್ಲಿ ಸಾಧನೆ ಮಾಡಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಅವರಿಗೆ ಸಿನಿಮಾಗಳ ಬಗ್ಗೆಯೂ ಕ್ರೇಜ್​ ಇದೆ. ಬಾಲಿವುಡ್​ ಚಿತ್ರಗಳ ಬಗ್ಗೆ ಅವರಿಗೆ ಆಸಕ್ತಿ ಇರುವುದು ಸಹಜ. ಆದರೆ ದಕ್ಷಿಣ ಭಾರತದ ಸಿನಿಮಾಗಳ ಕುರಿತಾಗಿಯೂ ಅವರಿಗೆ ಕ್ರೇಜ್​ ಇದೆ ಎಂಬುದು ವಿಶೇಷ. ಅದಕ್ಕೆ ಸಾಕ್ಷಿ ಒದಗಿಸುವಂತಹ ಒಂದು ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಟಾಲಿವುಡ್​ನ ‘ಪವರ್​ ಸ್ಟಾರ್​’ ಪವನ್​ ಕಲ್ಯಾಣ್​ ಅವರ ಒಂದು ಜನಪ್ರಿಯ ಡೈಲಾಗ್​ ಅನ್ನು ವೀರೇಂದ್ರ ಸೆಹ್ವಾಗ್​ ಹೇಳಿದ್ದಾರೆ.

‘ನನಗೆ ಸ್ವಲ್ಪ ತಿಕ್ಕಲುತನ ಇದೆ, ಆದರೆ ಅದಕ್ಕೂ ಒಂದು ಲೆಕ್ಕ ಇದೆ’ ಎಂಬುದು ಪವನ್​ ಕಲ್ಯಾಣ್​ ಅವರ ಫೇಮಸ್​ ಡೈಲಾಗ್​. ‘ಗಬ್ಬರ್​ ಸಿಂಗ್​’ ಸಿನಿಮಾದ ಈ ಡೈಲಾಗ್​ ಅಂದ್ರೆ ವೀರೇಂದ್ರ ಸೆಹ್ವಾಗ್​ ಅವರಿಗೂ ಇಷ್ಟ. ತೆಲುಗು ಬಾರದಿದ್ದರೂ ಕೂಡ ಅವರು ಕಷ್ಟಪಟ್ಟು ಆ ಡೈಲಾಗ್​ ಹೇಳಿದ್ದಾರೆ. ಅಷ್ಟೇ ಅಲ್ಲ, ಪವನ್​ ಕಲ್ಯಾಣ್​ರ ಮ್ಯಾನರಿಸಂ ಕಾಪಿ ಮಾಡುವುದಕ್ಕೂ ಸೆಹ್ವಾಗ್​ ಪ್ರಯತ್ನಿಸಿದ್ದಾರೆ.

ಸಂದರ್ಶವೊಂದರ ಸಮಯದಲ್ಲಿ ಸೆಹ್ವಾಗ್​ ಈ ರೀತಿ ಡೈಲಾಗ್​ ಪ್ರಾಕ್ಟೀಸ್​ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದನ್ನು ಕಂಡು ಪವನ್​ ಕಲ್ಯಾಣ್​ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಸ್ಟಾರ್​ ಕ್ರಿಕೆಟಿಗ ಸೆಹ್ವಾಗ್​ ಅವರು ಪವನ್​ ಕಲ್ಯಾಣ್​ರ ಡೈಲಾಗ್​ಗೆ ಫಿದಾ ಆಗಿದ್ದಾರೆ ಎಂದು ‘ಪವರ್​ ಸ್ಟಾರ್​’ ಅಭಿಮಾನಿಗಳು ಹಿರಿಹಿರಿ ಹಿಗ್ಗುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ, ಅಂದರೆ ಸೆ.2ರಂದು ಪವನ್​ ಕಲ್ಯಾಣ್​ ಜನ್ಮದಿನ ಸೆಲೆಬ್ರೇಟ್​ ಮಾಡಲಾಯಿತು. ಅವರು ನಟಿಸಿರುವ ‘ಭೀಮ್ಲಾ ನಾಯಕ್​’ ಸಿನಿಮಾದ ಟೈಟಲ್​ ಸಾಂಗ್​ ಬಿಡುಗಡೆ ಆಯಿತು. ಯೂಟ್ಯೂಬ್​ನಲ್ಲಿ 1.8 ಕೋಟಿಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಈ ಹಾಡಿನ ಹೆಚ್ಚುಗಾರಿಗೆ. ಆ ಮೂಲಕ ‘ಭೀಮ್ಲಾ ನಾಯಕ್’​ ಸಿನಿಮಾ ಮೇಲೆ ಜನರು ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ಈ ಚಿತ್ರಕ್ಕೆ ಸಾಗರ್​ ಕೆ. ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. 2022ರ ಜ.12ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ಪವನ್​ ಕಲ್ಯಾಣ್​ ಜೊತೆಗೆ ರಾಣಾ ದಗ್ಗುಬಾಟಿ ಕೂಡ ನಟಿಸಿದ್ದಾರೆ. ಅಂದಹಾಗೆ, ಇದು ಮಲಯಾಳಂನ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ಟಾಲಿವುಡ್​ ರಿಮೇಕ್​

ಇದನ್ನೂ ಓದಿ:

‘ಕರೋಡ್​ಪತಿ’ ಶೋನಲ್ಲಿ ಗಂಗೂಲಿ, ಸೆಹ್ವಾಗ್​; ಅಮಿತಾಭ್​ ಎದುರು ಕ್ರಿಕೆಟ್​ ದಿಗ್ಗಜರ ಸಖತ್ ಮಸ್ತಿ

Pawan Kalyan: ಪವನ್​ ಕಲ್ಯಾಣ್​ ಬರ್ತ್​ಡೇ; ಟಾಲಿವುಡ್​ ‘ಪವರ್​ ಸ್ಟಾರ್​’ ಬಳಿ ಇರುವ ಐಷಾರಾಮಿ ವಸ್ತುಗಳೇನು?

Published On - 3:26 pm, Tue, 7 September 21

Follow Us
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?