Pawan Kalyan: ಪವನ್​ ಕಲ್ಯಾಣ್​ ಬರ್ತ್​ಡೇ; ಟಾಲಿವುಡ್​ ‘ಪವರ್​ ಸ್ಟಾರ್​’ ಬಳಿ ಇರುವ ಐಷಾರಾಮಿ ವಸ್ತುಗಳೇನು?

TV9 Digital Desk

| Edited By: ಮದನ್​ ಕುಮಾರ್​

Updated on: Sep 02, 2021 | 8:12 AM

Pawan Kalyan Birthday: ‘ಭೀಮ್ಲಾ ನಾಯಕ್’ ಸಿನಿಮಾದ ಕೆಲಸಗಳಲ್ಲಿ ಪವನ್​ ಕಲ್ಯಾಣ್​ ಬ್ಯುಸಿ ಆಗಿದ್ದಾರೆ. ಅವರ ಬರ್ತ್​ಡೇ ಪ್ರಯುಕ್ತ ಇಂದು (ಸೆ.2) ಈ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ಮತ್ತು ಟೀಸರ್​ ಬಿಡುಗಡೆ ಆಗುತ್ತಿದೆ.

Pawan Kalyan: ಪವನ್​ ಕಲ್ಯಾಣ್​ ಬರ್ತ್​ಡೇ; ಟಾಲಿವುಡ್​ ‘ಪವರ್​ ಸ್ಟಾರ್​’ ಬಳಿ ಇರುವ ಐಷಾರಾಮಿ ವಸ್ತುಗಳೇನು?
ಪವನ್​ ಕಲ್ಯಾಣ್​

ತೆಲುಗು ಚಿತ್ರರಂಗದ ಸ್ಟಾರ್​ ನಟ​ ಪವನ್​ ಕಲ್ಯಾಣ್​ ಅವರು ಇಂದು (ಸೆ.2) 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ಟಾಲಿವುಟ್​ನ ‘ಪವರ್​ ಸ್ಟಾರ್​’ಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. 50ರ ಪ್ರಾಯದಲ್ಲೂ ಅವರು ಹದಿಹರೆಯದ ಯುವಕರಿಗೆ ಪೈಪೋಟಿ ನೀಡುವಂತೆ ಆ್ಯಕ್ಷನ್​ ದೃಶ್ಯಗಳಲ್ಲಿ ಮಿಂಚುತ್ತಾರೆ. ಇಂದಿಗೂ ಟಾಲಿವುಡ್​ನಲ್ಲಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಟನೆ ಮಾತ್ರವಲ್ಲದೇ ಅನೇಕ ಜನಪರ ಕಾರ್ಯಗಳಿಂದಲೂ ಅವರು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಸ್ಟಾರ್​ ನಟನ ಬಳಿ ಬಹುಕೋಟಿ ಬೆಲೆ ಬಾಳುವ ವಸ್ತುಗಳಿವೆ. 

ಮಾಧ್ಯಮಗಳಲ್ಲಿ ವರದಿ ಆಗಿರುವಂತೆ ವಿಜಯವಾಡದಲ್ಲಿ ಪವನ್​ ಕಲ್ಯಾಣ್​ ಅವರು ಒಂದು ಫಾರ್ಮ್​ ಹೌಸ್​ ಹೊಂದಿದ್ದಾರೆ. ಅದರ ಬೆಲೆ ಬರೋಬ್ಬರಿ 16 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೇ, ಒಮ್ಮೆ ಪವನ್​ ಕಲ್ಯಾಣ್​ ಅವರು ತಮ್ಮ ಮಾಜಿ ಪತ್ನಿ ರೇಣು ದೇಸಾಯಿ ಅವರಿಗೆ 5 ಕೋಟಿ ರೂ. ಬೆಲೆ ಬಾಳುವ ಫ್ಲಾಟ್​ಅನ್ನು ಉಡುಗೊರೆ ರೂಪದಲ್ಲಿ ನೀಡಿದ್ದರು ಎಂಬ ಮಾಹಿತಿ ಇದೆ. ಅನೇಕ ರಿಯಲ್​ ಎಸ್ಟೇಟ್​ ಪ್ರಾಪರ್ಟಿಗಳನ್ನು ಕೂಡ ಪವನ್​ ಕಲ್ಯಾಣ್​ ಹೊಂದಿದ್ದಾರೆ.

ಪವನ್​ ಕಲ್ಯಾಣ್​ ಅವರ ಕಲೆಕ್ಷನ್​ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಮರ್ಸಿಡೀಸ್​ ಜಿ-ಕ್ಲಾಸ್​ ಜಿ 63 ಎಎಮ್​ಜಿ ಕಾರನ್ನು ಅವರು ಹೊಂದಿದ್ದಾರೆ. ಇದರ ಬೆಲೆ ಬರೋಬ್ಬರಿ 2.42 ಕೋಟಿ ರೂ.! ಅಲ್ಲದೇ, 36.26 ಲಕ್ಷ ಬೆಲೆ ಬಾಳುವ ಎರಡು ಎಂಡೆವರ್​ ಕಾರುಗಳನ್ನು ಕೂಡ ಅವರ ಬಳಿ ಇವೆ. ಜೊತೆಗೆ ಆಡಿ ಕ್ಯೂ7, ಬಿಎಂಡಬ್ಲ್ಯೂ 5 ಸೀರಿಸ್​ 520ಡಿ ಸೇರಿದಂತೆ ಅನೇಕ ಕಾರುಗಳನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ‘ಭೀಮ್ಲಾ ನಾಯಕ್’ ಸಿನಿಮಾದ ಕೆಲಸಗಳಲ್ಲಿ ಪವನ್​ ಕಲ್ಯಾಣ್​ ಬ್ಯುಸಿ ಆಗಿದ್ದಾರೆ. ಅವರ ಬರ್ತ್​ಡೇ ಪ್ರಯುಕ್ತ ಇಂದು ಈ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ಮತ್ತು ಟೀಸರ್​ ಬಿಡುಗಡೆ ಆಗುತ್ತಿದೆ. ಇದು ಮಾಲಿವುಡ್​ನ ‘ಅಯ್ಯಪ್ಪನುಮ್​ ಕೋಶಿಯುಂ’ ಚಿತ್ರದ ರಿಮೇಕ್​ ಆಗಿದ್ದು, ಪವನ್​ ಕಲ್ಯಾಣ್​ ಜೊತೆ ರಾಣಾ ದಗ್ಗುಬಾಟಿ ಕೂಡ ನಟಿಸುತ್ತಿದ್ದಾರೆ. 2022ರ ಜ.12ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಿತ್ಯಾ ಮೆನನ್​, ಐಶ್ವರ್ಯಾ ರಾಜೇಶ್​ ಕೂಡ ಈ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ:

ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?

ಪವನ್​ ಕಲ್ಯಾಣ್​ ಪುತ್ರ ಅಕಿರ ನಂದನ್​ ಮಾರ್ಷಲ್ ಆರ್ಟ್ಸ್​ ವಿಡಿಯೋ ವೈರಲ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada