AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Kichcha Sudeep: ಸುದೀಪ್​ ಜನ್ಮದಿನ; ಇಂದು ಕಿಚ್ಚನ ಹುಟ್ಟುಹಬ್ಬಕ್ಕೆ ಸಿಗುತ್ತಿರೋ ಉಡುಗೊರೆಗಳೇನು?

Kichcha Sudeep Birthday: ಸುದೀಪ್​ ಜನ್ಮದಿನದ ಅಂಗವಾಗಿ, ಬಹುನಿರೀಕ್ಷಿತ ‘ವಿಕ್ರಾಂತ್​ ರೋಣ’ ಚಿತ್ರತಂಡದ ಕಡೆಯಿಂದ ‘ಡೆಡ್​ ಮ್ಯಾನ್ಸ್​​ ಆ್ಯಂಥಮ್​’ ರಿಲೀಸ್​ ಮಾಡುತ್ತಿದೆ.

Happy Birthday Kichcha Sudeep: ಸುದೀಪ್​ ಜನ್ಮದಿನ; ಇಂದು ಕಿಚ್ಚನ ಹುಟ್ಟುಹಬ್ಬಕ್ಕೆ ಸಿಗುತ್ತಿರೋ ಉಡುಗೊರೆಗಳೇನು?
ಕಿಚ್ಚ ಸುದೀಪ್​
TV9 Web
| Edited By: |

Updated on: Sep 02, 2021 | 7:22 AM

Share

ಇಂದು (ಸೆಪ್ಟೆಂಬರ್ 2) ಕಿಚ್ಚ ಸುದೀಪ್​ ಜನ್ಮದಿನ. ಅವರು ಈಗ 50ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ಅಂಗವಾಗಿ ಕಿಚ್ಚನಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸುದೀಪ್​ಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಕೊವಿಡ್​ ಕಾರಣದಿಂದ ಸುದೀಪ್​ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ ಅನ್ನೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸೆಲೆಬ್ರಿಟಿಗಳ ಬರ್ತ್​ಡೇ ಪ್ರಯುಕ್ತ ಚಿತ್ರತಂಡದಿಂದ ಉಡುಗೊರೆ ಸಿಗೋದು ಸಂಪ್ರದಾಯ. ಇದು ಸುದೀಪ್​ ಜನ್ಮದಿನದಂದೂ ಮುಂದುವರಿದಿದೆ. ಸುದೀಪ್​ ಜನ್ಮದಿನದ ಅಂಗವಾಗಿ, ಬಹುನಿರೀಕ್ಷಿತ ‘ವಿಕ್ರಾಂತ್​ ರೋಣ’ ಚಿತ್ರತಂಡದ ಕಡೆಯಿಂದ ‘ಡೆಡ್​ ಮ್ಯಾನ್ಸ್​ ಆ್ಯಂಥಮ್​’ ರಿಲೀಸ್​ ಆಗುತ್ತಿದೆ. ಇದಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಸುದೀಪ್​ ‘ಕೋಟಿಗೊಬ್ಬ 3’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರತಂಡ ಕೂಡ ಸುದೀಪ್​ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಡೋಕೆ ರೆಡಿ ಆಗಿದೆ.

‘ಅಭಿನಯ ಚಕ್ರವರ್ತಿ’ ಸುದೀಪ್ ಅವರ ಬದುಕಿನ ಕತೆಯನ್ನು ಒಳಗೊಂಡ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ರಿಲೀಸ್​ ಆಗಿತ್ತು. ಪತ್ರಕರ್ತ ಡಾ. ಶರಣು ಹುಲ್ಲೂರು ಅವರು ಇದನ್ನು ಬರೆದಿದ್ದರು.  ಈಗ ಇದು ಆಡಿಯೋ ಮತ್ತು ಇ-ಬುಕ್ ರೂಪದಲ್ಲಿ ಇಂದು (ಸೆ. 2) ಹೊರ ಬರುತ್ತಿದೆ ಅನ್ನೋದು ವಿಶೇಷ. ಇದು ಕೂಡ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇನ್ನು, ಸಾಕಷ್ಟು ಸೆಲೆಬ್ರಿಟಿಗಳು ಸುದೀಪ್​ ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸುದೀಪ್​ ಹೆಸರು ಟ್ರೆಂಡ್​ ಆಗಿದೆ. ಪರಭಾಷೆಯ ನಟರೂ ಕೂಡ ಸುದೀಪ್​ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಟೀಮ್​ ಇಂಡಿಯಾ ಮಾಜಿ ಆಟಗಾರ ಅನಿಲ್​ ಕುಂಬ್ಳೆ ಅವರು ಸುದೀಪ್​ ಅವರ ಕಾಮನ್​ ಡಿಪಿ ಬಿಡುಗಡೆ ಮಾಡಿದ್ದಾರೆ. ಇದನ್ನು ಅಭಿಮಾನಿಗಳು ತಮ್ಮ ಡಿಪಿಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.

ಕೊವಿಡ್​ ಎರಡನೇ ಅಲೆ ಕಡಿಮೆ ಆಗಿದೆ ನಿಜ. ಆದರೆ, ಮೂರನೇ ಅಲೆ ಬರುವ ಮುನ್ಸೂಚನೆ ಸಿಕ್ಕಿದೆ. ಈ ಕಾರಣಕ್ಕೆ ಸುದೀಪ್​ ಅವರು ಅಭಿಮಾನಿಗಳನ್ನು ಭೇಟಿ ಆಗುತ್ತಿಲ್ಲ. ‘ನನ್ನೆಲ್ಲ ಅಭಿಮಾನಿ ಸ್ನೇಹಿತರಲ್ಲಿ ಮನವಿ. ಕೊವಿಡ್​ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರನ್ನು ಭೇಟಿ ಆಗಲು ಆಗುತ್ತಿಲ್ಲ. ಕ್ಷಮೆ ಇರಲಿ. ಮುಂದೆ ಪರಿಸ್ಥಿತಿ ಸುಧಾರಿಸಿದ ನಂತರ ನಿಮ್ಮೆಲ್ಲರನ್ನೂ ಭೇಟಿ ಆಗುತ್ತೇನೆ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ’ ಎಂದು ಸುದೀಪ್​ ಅವರು ‘ಕಿಚ್ಚ ಕ್ರಿಯೇಷನ್​’ ಟ್ವಿಟರ್​ ಖಾತೆ ಮೂಲಕ ಸಂದೇಶ ನೀಡಿದ್ದರು.

ಇದನ್ನೂ ಓದಿ:

Kichcha Sudeep: ಕಿಚ್ಚ ಸುದೀಪ್​ ಬರ್ತ್​ಡೇಗೆ 12 ಕಾರ್ಯಕ್ರಮ; ಇಲ್ಲಿದೆ ಫುಲ್​ ಡಿಟೇಲ್ಸ್​

ಸುದೀಪ್​ಗೆ ನೀರಜ್​ ಚೋಪ್ರಾ ಕಡೆಯಿಂದ ಹುಟ್ಟುಹಬ್ಬದ ಶುಭಾಶಯ; ‘ವಿಕ್ರಾಂತ್ ರೋಣ’ಗೂ ವಿಶೇಷ ವಿಶ್

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್