ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?

ಹೈದರಾಬಾದ್​ ಸಿನಿಮಾ ಶೂಟಿಂಗ್​ ಹಾಟ್​ಸ್ಪಾಟ್​. ನಿತ್ಯ ಸಾಕಷ್ಟು ಸಿನಿಮಾಗಳ ಶೂಟಿಂಗ್​ ಇಲ್ಲಿ ನಡೆಯುತ್ತಿದೆ. ಅದೇ ರೀತಿ ಮೋಹನ್​ಲಾಲ್​ ಹಾಗೂ ಪವನ್​ ಕಲ್ಯಾಣ್​ ಹೈದರಾಬಾದ್​ನ ಅಲ್ಯೂಮೀನಿಯಂ ಫ್ಯಾಕ್ಟರಿಯಲ್ಲಿ ತಮ್ಮ ಸಿನಿಮಾ ಶೂಟಿಂಗ್​ ನಡೆಸುತ್ತಿದ್ದಾರೆ.

ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?
ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 20, 2021 | 8:35 PM

ಕೊವಿಡ್​ ಎರಡನೇ ಅಲೆ ತಣ್ಣಗಾದ ಬೆನ್ನಲ್ಲೇ ಸಿನಿಮಾ ಕೆಲಸಗಳು ಜೋರಾಗಿವೆ. ನಟ-ನಟಿಯರು, ಕಲಾವಿದರು ಹಾಗೂ ತಾಂತ್ರಿಕ ವರ್ಗ ಸಿನಿಮಾ ಸೆಟ್​ಗೆ ಮರಳಿದೆ. ಈ ಮಧ್ಯೆ, ಮಲಯಾಳಂ ಖ್ಯಾತ ನಟ ಮೋಹನ್​ಲಾಲ್​ ಹಾಗೂ ಟಾಲಿವುಡ್​ ಸ್ಟಾರ್​ ನಟ, ರಾಜಕಾರಣಿ ಪವನ್​ ಕಲ್ಯಾಣ್​ ಅವರು ಹೈದರಾಬಾದ್​ನಲ್ಲಿ ಗುಪ್ತವಾಗಿ ಮೀಟ್​ ಮಾಡಿದ್ದಾರೆ ಎನ್ನುವ ಸುದ್ದಿ ಲೀಕ್​ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್​ ಅಚ್ಚರಿ ಹೊರಹಾಕಿದ್ದಾರೆ.

ಹೈದರಾಬಾದ್​ ಸಿನಿಮಾ ಶೂಟಿಂಗ್​ ಹಾಟ್​ಸ್ಪಾಟ್​. ನಿತ್ಯ ಸಾಕಷ್ಟು ಸಿನಿಮಾಗಳ ಶೂಟಿಂಗ್​ ಇಲ್ಲಿ ನಡೆಯುತ್ತಿದೆ. ಅದೇ ರೀತಿ ಮೋಹನ್​ಲಾಲ್​ ಹಾಗೂ ಪವನ್​ ಕಲ್ಯಾಣ್​ ಹೈದರಾಬಾದ್​ನ ಅಲ್ಯೂಮೀನಿಯಂ ಫ್ಯಾಕ್ಟರಿಯಲ್ಲಿ ತಮ್ಮ ಸಿನಿಮಾ ಶೂಟಿಂಗ್​ ನಡೆಸುತ್ತಿದ್ದಾರೆ. ಸಿನಿಮಾ ಶೂಟಿಂಗ್​ಗೆ ಇಬ್ಬರೂ ಒಂದೇ ಲೊಕೇಶನ್​ಲ್ಲಿರುವ ವಿಚಾರ ಗೊತ್ತಾಗಿದೆ. ಹೀಗಾಗಿ, ಮೋಹನ್​ಲಾಲ್​ ಹಾಗೂ ಪವನ್​ ಕಲ್ಯಾಣ್​ ಭೇಟಿ ಮಾಡಿದ್ದಾರೆ.

ಮಧ್ಯಾಹ್ನದ ಬಿಡುವಿನ ವೇಳೆ ಈ ಭೇಟಿ ನಡೆದಿದೆ. ಇವರಿಗೋಸ್ಕರ ನಿರ್ಮಾಪಕರು ವಿಶೇಷ ಊಟದ ವ್ಯವಸ್ಥೆ ಮಾಡಿದ್ದರು. ಊಟ ಸವಿದ ನಂತರದಲ್ಲಿ ಇಬ್ಬರೂ ರಾಜಕೀಯ ಹಾಗೂ ಸಿನಿಮಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಲ ಪ್ರಮುಖರು ಮಾತ್ರ ಅವರ ಜತೆ ಇದ್ದರು ಎಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ಇಂಥ ಭೇಟಿ ನಡೆದರೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಸುದ್ದಿಯಾಗುತ್ತದೆ. ಫೋಟೋಗಳು ವೈರಲ್​ ಆಗುತ್ತವೆ. ಆದರೆ, ಇಬ್ಬರೂ ಹೀರೋಗಳು ಇದಕ್ಕೆ ಹೈಪ್​ ಕೊಡದಂತೆ ಸೂಚನೆ ನೀಡಿದ್ದಾರಂತೆ. ಇದೊಂದು ಸಾಮಾನ್ಯ ಭೇಟಿ. ಒಂದೊಮ್ಮೆ ಭೇಟಿಯಾದ ಫೋಟೋ ವೈರಲ್​ ಆದರೆ, ಅದಕ್ಕೆ ಬೇರೆ ಅರ್ಥ ಬರಬಹುದು ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಈ ಕಾರಣಕ್ಕೆ ಸಿನಿಮಾ ತಂಡ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ಹೈದರಾಬಾದ್​ನಲ್ಲಿರುವುದರಿಂದ ಮೋಹನ್​ಲಾಲ್​ ಅವರು ತೆಲುಗು ಇಂಡಸ್ಟ್ರಿಯ ಸಾಕಷ್ಟು ಗೆಳೆಯರನ್ನು ಭೇಟಿ ಮಾಡುತ್ತಿದ್ದಾರೆ. ಮೋಹನ್​ ಬಾಬು ಅವರನ್ನು ಮೋಹನ್​ಲಾಲ್​ ಭೇಟಿ ಮಾಡಿದ್ದಾರೆ. ಮೋಹನ್​ಲಾಲ್​ ಹಾಗೂ ಚಿರಂಜೀವಿ ತುಂಬಾನೇ ಕ್ಲೋಸ್​ ಫ್ರೆಂಡ್ಸ್​. ಅವರನ್ನು ಭೇಟಿ ಮಾಡುವ ಆಲೋಚನೆ ಕೂಡ ಮೋಹನ್​ಲಾಲ್ ಹೊಂದಿದ್ದಾರೆ.

ಇದನ್ನೂ ಓದಿ: KGF Chapter 2: ಕೆಜಿಎಫ್​ 2 ಚಿತ್ರಕ್ಕೂ ಮೊದಲೇ ತೆಲುಗು ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದಾರಂತೆ ಯಶ್! ಏನಿದು ಸರ್​ಪ್ರೈಸ್?

ವಿಜಯ್​ ದೇವರಕೊಂಡ ಡಿಮ್ಯಾಂಡ್​ಗೆ ಬೇಸತ್ತ ನಿರ್ದೇಶಕ; ಇದು ದುರಹಂಕಾರ ಎಂದ ಫ್ಯಾನ್ಸ್​

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ