ವಿಜಯ್​ ದೇವರಕೊಂಡ ಡಿಮ್ಯಾಂಡ್​ಗೆ ಬೇಸತ್ತ ನಿರ್ದೇಶಕ; ಇದು ದುರಹಂಕಾರ ಎಂದ ಫ್ಯಾನ್ಸ್​

 ಒಮ್ಮೆ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಗುರುತಿಸಿಕೊಂಡ ನಂತರದಲ್ಲಿ ಒಂದು ಭಾಷೆಗೆ ಮಾತ್ರ ಸೀಮಿತವಾಗೋಕೆ ಯಾರೂ ಇಷ್ಟಪಡುವುದಿಲ್ಲ. ಇದಕ್ಕೆ ವಿಜಯ್​ ಕೂಡ ಹೊರತಾಗಿಲ್ಲ.

ವಿಜಯ್​ ದೇವರಕೊಂಡ ಡಿಮ್ಯಾಂಡ್​ಗೆ ಬೇಸತ್ತ ನಿರ್ದೇಶಕ; ಇದು ದುರಹಂಕಾರ ಎಂದ ಫ್ಯಾನ್ಸ್​
ವಿಜಯ್ ದೇವರಕೊಂಡ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 20, 2021 | 5:34 PM

ವಿಜಯ್​ ದೇವರಕೊಂಡ ಅವರು ಟಾಲಿವುಡ್​ನಲ್ಲಿ ಹೊಸ ಟ್ರೆಂಡ್​​ ಸೃಷ್ಟಿ ಮಾಡಿದ್ದಾರೆ. ಅವರ ನಟನೆಯ ‘ಅರ್ಜುನ್​ ರೆಡ್ಡಿ’  ಹಾಗೂ ‘ಗೀತ ಗೋವಿಂದಂ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಸದ್ಯ ಪುರಿ ಜಗನ್ನಾಥ್​ ನಿರ್ದೇಶನದ ‘ಲೈಗರ್​’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಚಿತ್ರ ಹಿಂದಿಯಲ್ಲೂ ತೆರೆಗೆ ಬರುತ್ತಿದ್ದು, ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಹೀಗಿರುವಾಗಲೇ ಟಾಲಿವುಡ್​ ಅಂಗಳದಿಂದ ಹೊಸ ವದಂತಿಯೊಂದು ಕೇಳಿ ಬಂದಿದೆ. ವಿಜಯ್​ ಇಟ್ಟಿರುವ ಬೇಡಿಕೆಗೆ ನಿರ್ದೇಶಕರು ಕಂಗಾಲಾಗಿದ್ದಾರೆ ಎನ್ನುವ ವರದಿ ಬಿತ್ತರವಾಗಿದೆ. 

ಒಮ್ಮೆ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಗುರುತಿಸಿಕೊಂಡ ನಂತರದಲ್ಲಿ ಒಂದು ಭಾಷೆಗೆ ಮಾತ್ರ ಸೀಮಿತವಾಗೋಕೆ ಯಾರೂ ಇಷ್ಟಪಡುವುದಿಲ್ಲ. ಇದಕ್ಕೆ ವಿಜಯ್​ ಕೂಡ ಹೊರತಾಗಿಲ್ಲ. ‘ಲೈಗರ್​’ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿರುವ ಅವರು ಮುಂದಿನ ಸಿನಿಮಾಗಳು ಕೂಡ ಹಾಗೆಯೇ ಇರಬೇಕು ಎಂದು ಇಚ್ಛಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಸುಕುಮಾರ್ ಜತೆ ವಿಜಯ್​ ಸಿನಿಮಾ ಮಾಡುತ್ತಿದ್ದು, ಈ ಚಿತ್ರ ಪ್ಯಾನ್​ ಇಂಡಿಯಾ ಆಗಿರಲಿದೆ ಎನ್ನಲಾಗಿದೆ. ಆದರೆ, ಮತ್ತೋರ್ವ ನಿರ್ದೇಶಕ ಶಿವ ನಿರ್ವಣಗೆ ಇದು ಸಾಧ್ಯವಾಗುತ್ತಿಲ್ಲ.

ಶಿವ ನಿರ್ವಣ ಹಾಗೂ ವಿಜಯ್​ ಸಿನಿಮಾ ಮಾಡುತ್ತಿದ್ದಾರೆ. ಇದು ಕೇವಲ ತೆಲುಗಿನಲ್ಲಿ ರಿಲೀಸ್​ ಮಾಡಬೇಕು ಎನ್ನುವ ಆಲೋಚನೆ ನಿರ್ದೇಶಕ ಹಾಗೂ ನಿರ್ಮಾಪಕರದ್ದು. ಆದರೆ, ವಿಜಯ್​ ಈಗ ಮನಸ್ಸು ಬದಲಾಯಿಸಿದ್ದಾರೆ. ಸ್ಕ್ರಿಪ್ಟ್​ ಬದಲಾಯಿಸಿ, ಸಿನಿಮಾ ಪ್ಯಾನ್​ ಇಂಡಿಯಾ ಮಾಡಿ ಎನ್ನುವ ಸೂಚನೆ ನಿರ್ದೇಶಕರಿಗೆ ನೀಡಿದ್ದಾರೆ ವಿಜಯ್​. ಇದಕ್ಕೆ ಒಪ್ಪಿದ್ದ ಶಿವ ಕಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ಆದರೆ, ವಿಜಯ್​ಗೆ ಇದು ತೃಪ್ತಿ ನೀಡಿಲ್ಲ. ಇನ್ನೂ ಕೆಲ ಪ್ರಮುಖ ಬದಲಾವಣೆಗೆ ಅವರು ನಿರ್ದೇಶಿಸಿದ್ದಾರೆ ಎನ್ನಲಾಗಿದೆ. ಹಾಗೆ ಮಾಡಿದರೆ, ಬಜೆಟ್​ ಹೆಚ್ಚುತ್ತದೆ. ಇದನ್ನು ಭರಿಸೋಕೆ ನಿರ್ಮಾಪಕರು ರೆಡಿ ಇಲ್ಲ. ಈ ಕಾರಣಕ್ಕೆ ಶಿವ ಬೇಸತ್ತಿದ್ದಾರೆ ಎನ್ನಲಾಗುತ್ತಿದೆ.

ಈ ವಿಚಾರ ಕೇಳಿದ ಅಭಿಮಾನಿಗಳು ವಿಜಯ್​ಗೆ ದುರಹಂಕಾರ ಎಂದು ಹೇಳಿದ್ದಾರೆ. ಸಿನಿಮಾ ಒಪ್ಪಿಕೊಳ್ಳುವಾಗಲೇ ಈ ಬಗ್ಗೆ ಹೇಳಬೇಕಿತ್ತು ಎಂದು ಕಿವಿಮಾತು ನುಡಿದಿದ್ದಾರೆ. ಇನ್ನೂ ಕೆಲವರು ವಿಜಯ್​ ಹೀಗೆ ನಿರೀಕ್ಷಿಸುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಮ್ಮ ನೆಚ್ಚಿನ ನಟನ ಪರ ಬ್ಯಾಟ್​ ಬೀಸಿದ್ದಾರೆ. ಸದ್ಯ, ಈ ವಿಚಾರ ಬಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ