ಅಂದ ಹೆಚ್ಚಿಸಿಕೊಳ್ಳೋಕೆ ರಾಕುಲ್​ ಪ್ರೀತ್​ ಸಿಂಗ್​ ತುಳಿದ್ರು ಸರ್ಜರಿ ಮಾರ್ಗ?; ಇಲ್ಲಿದೆ ಸಾಕ್ಷ್ಯ

ರಾಕುಲ್​ ಸದ್ಯ ಶೂಟಿಂಗ್​ಗಾಗಿ ಲಂಡನ್​ಗೆ ತೆರಳಿದ್ದಾರೆ. ಅಲ್ಲಿಯ ಫೋಟೋಗಳನ್ನು ರಾಕುಲ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಈ ಮಧ್ಯೆ, ಅವರು ತಮ್ಮ ಸೆಲ್ಫಿಯನ್ನು ಇತ್ತೀಚೆಗೆ ಪೋಸ್ಟ್​ ಮಾಡಿದ್ದಾರೆ.

ಅಂದ ಹೆಚ್ಚಿಸಿಕೊಳ್ಳೋಕೆ ರಾಕುಲ್​ ಪ್ರೀತ್​ ಸಿಂಗ್​ ತುಳಿದ್ರು ಸರ್ಜರಿ ಮಾರ್ಗ?; ಇಲ್ಲಿದೆ ಸಾಕ್ಷ್ಯ
ರಾಕುಲ್ ಪ್ರೀತ್​ ಸಿಂಗ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 26, 2021 | 2:35 PM

ರಾಕುಲ್​ ಪ್ರೀತ್​ ಸಿಂಗ್ ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಅವರು ಬಣ್ಣದ ಬದುಕು ಆರಂಭಿಸಿದ್ದು ಸ್ಯಾಂಡಲ್​ವುಡ್​ ಮೂಲಕವಾದರೂ ನಂತರ ಅವರು ಬ್ಯುಸಿಯಾಗಿದ್ದು ಬೇರೆ ಇಂಡಸ್ಟ್ರಿಗಳಲ್ಲಿ. ರಾಕುಲ್​ ಸಖತ್​ ಬ್ಯೂಟಿಫುಲ್​. ಅವರು ಮಾಡಿಸೋ ಫೋಟೋಶೂಟ್​ ನೋಡೋಕೆ ಅಭಿಮಾನಿಗಳು ಕಾದು ಕೂತಿರುತ್ತಾರೆ. ಈ ಮಧ್ಯೆ ರಾಕುಲ್​ ಪ್ರೀತ್​ ಸಿಂಗ್​ ತಮ್ಮ ಬ್ಯೂಟಿ ಹೆಚ್ಚಿಸಿಕೊಳ್ಳೋಕೆ ಸರ್ಜರಿಯ ಮೊರೆ ಹೋದರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಅವರು ಹಂಚಿಕೊಂಡಿರುವ ಫೋಟೋಗಳು ಹೀಗೊಂದು ಅನುಮಾನ ಹುಟ್ಟುಹಾಕಿದೆ.

ರಾಕುಲ್​ ಸದ್ಯ ಶೂಟಿಂಗ್​ಗಾಗಿ ಲಂಡನ್​ಗೆ ತೆರಳಿದ್ದಾರೆ. ಅಲ್ಲಿಯ ಫೋಟೋಗಳನ್ನು ರಾಕುಲ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಈ ಮಧ್ಯೆ, ಅವರು ತಮ್ಮ ಸೆಲ್ಫಿಯನ್ನು ಇತ್ತೀಚೆಗೆ ಪೋಸ್ಟ್​ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ತುಂಬಾನೇ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಜತೆಗೆ ಅವರ ಹಳೆಯ ಫೋಟೋಗಳನ್ನು ಇಟ್ಟು ಹೋಲಿಕೆ ಮಾಡುತ್ತಿದ್ದಾರೆ ಅಭಿಮಾನಿಗಳು.

ರಾಕುಲ್​ ಪ್ರೀತ್​ ಸಿಂಗ್​ ತುಟಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಅವರು ಕಾಸ್ಮೆಟಿಕ್​ ಸರ್ಜರಿಗೆ ಒಳಗಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ವರದಿಗಳು ಸೋಶಿಯಲ್​ ಮೀಡಿಯಾದಲ್ಲಿ ಬಿತ್ತರವಾಗುತ್ತಿವೆ.

ಈ ರೀತಿ ಮೂಗು, ತುಟಿ, ಕೆನ್ನೆ ಮತ್ತಿತ್ಯಾದಿ ಸರ್ಜರಿಗೆ ಒಳಗಾಗುವುದು ಬಾಲಿವುಡ್​ ನಟಿಯರ ಪಾಲಿಗೆ ಹೊಸದೇನು ಅಲ್ಲ. ಈ ಮೊದಲು ಕೂಡ ಸಾಕಷ್ಟು ಹೀರೋಯಿನ್​ಗಳು ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಈ ಬಗ್ಗೆ ಓಪನ್​ ಆಗಿ ಹೇಳಿಕೊಳ್ಳುವುದಿಲ್ಲ. ಈಗ ರಾಕುಲ್​ ಕೂಡ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಸದ್ಯ, ಇದಕ್ಕೆ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ.

ರಾಕುಲ್​ ಕೈಯಲ್ಲಿ ಬಾಲಿವುಡ್​ ಸಿನಿಮಾಗಳು ಹೆಚ್ಚಿವೆ. ‘ತಲೈವಿ’ ನಿರ್ದೇಶಕ ಎ.ಎಲ್​. ವಿಜಯ್​ ಅವರ ‘ಅಕ್ಟೋಬರ್​ 31 ಲೇಡಿಸ್​ ನೈಟ್​’ ಸಿನಿಮಾದಲ್ಲಿ ರಾಕುಲ್​ ನಟಿಸುತ್ತಿದ್ದಾರೆ. ಈ ಸಿನಿಮಾ ತೆಲುಗು ಹಾಗೂ ತಮಿಳಲ್ಲಿ ತೆರೆಗೆ ಬರೋಕೆ ರೆಡಿ ಆಗುತ್ತಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಸಿನಿ ಹಬ್ಬ; ಬಹು ನಿರೀಕ್ಷಿತ ಸ್ಟಾರ್​ ಸಿನಿಮಾಗಳ ರಿಲೀಸ್​ ಡೇಟ್​ ಅನೌನ್ಸ್​

ಟಾಲಿವುಡ್​ ಡ್ರಗ್ಸ್​ ಕೇಸ್​: ಇಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ