ಸ್ಯಾಂಡಲ್​ವುಡ್​ ಸಿನಿ ಹಬ್ಬ; ಬಹು ನಿರೀಕ್ಷಿತ ಸ್ಟಾರ್​ ಸಿನಿಮಾಗಳ ರಿಲೀಸ್​ ಡೇಟ್​ ಅನೌನ್ಸ್​

ಈಗ ಸರ್ಕಾರದ ಹೊಸ ಘೋಷಣೆಯಿಂದ ಸ್ಟಾರ್​ ಸಿನಿಮಾಗಳು ರಿಲೀಸ್​ ಡೇಟ್​ ಘೋಷಣೆ ಮಾಡಿಕೊಳ್ಳುತ್ತಿವೆ. ಈಗ ಮೂರು ಸ್ಟಾರ್​ ನಟರ ಚಿತ್ರಗಳು ರಿಲೀಸ್​ಗೆ ರೆಡಿ ಆಗಿವೆ.

ಸ್ಯಾಂಡಲ್​ವುಡ್​ ಸಿನಿ ಹಬ್ಬ; ಬಹು ನಿರೀಕ್ಷಿತ ಸ್ಟಾರ್​ ಸಿನಿಮಾಗಳ ರಿಲೀಸ್​ ಡೇಟ್​ ಅನೌನ್ಸ್​
ಸಲಗ-ಭಜರಂಗಿ 2, ಕೋಟಿಗೊಬ್ಬ 3 ಪೋಸ್ಟರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 26, 2021 | 2:10 PM

ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ಗೆ ಅವಕಾಶ ನೀಡುತ್ತಿದ್ದಂತೆ ಗಾಂಧಿ ನಗರಕ್ಕೆ ಹೊಸ ಕಳೆ ಬಂದಿದೆ. ಚಿತ್ರಮಂದಿರಗಳಲ್ಲಿ ಶೇ.50ಕ್ಕೆ ಅವಕಾಶ ಇದ್ದಿದ್ದರಿಂದ ಇಷ್ಟು ದಿನ ಸಣ್ಣಪುಟ್ಟ ಸಿನಿಮಾಗಳು ಮಾತ್ರ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದ್ದವು. ಆದರೆ, ಈಗ ಸರ್ಕಾರದ ಹೊಸ ಘೋಷಣೆಯಿಂದ ಸ್ಟಾರ್​ ಸಿನಿಮಾಗಳು ರಿಲೀಸ್​ ಡೇಟ್​ ಘೋಷಣೆ ಮಾಡಿಕೊಳ್ಳುತ್ತಿವೆ. ಈಗ ಮೂರು ಸ್ಟಾರ್​ ನಟರ ಚಿತ್ರಗಳು ರಿಲೀಸ್​ಗೆ ರೆಡಿ ಆಗಿವೆ.

ಸಲಗಕ್ಕೆ ಮುಹೂರ್ತ

ದುನಿಯಾ ವಿಜಯ್​ ನಿರ್ದೇಶಿಸಿ, ನಟಿಸಿರುವ ‘ಸಲಗ’ ಸಿನಿಮಾ ಈಗಾಗಲೇ ಹಾಡು ಹಾಗೂ ಪೋಸ್ಟರ್​ಗಳ ಮೂಲಕ ಸಾಕಷ್ಟು ಹವಾ ಸೃಷ್ಟಿ ಮಾಡಿದೆ. ಈ ಸಿನಿಮಾ ಮೂಲಕ ದುನಿಯಾ ವಿಜಯ್​ ಡೈರೆಕ್ಟರ್​ ಆಗಿ ಬಡ್ತಿ ಪಡೆಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸಿನಿಮಾ ರಿಲೀಸ್​ ಆಗಿರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಲೇ ಇದೆ. ಈಗ ‘ಸಲಗ’ ರಿಲೀಸ್​ ಆಗೋಕೆ ಮುಹೂರ್ತ ಫಿಕ್ಸ್​ ಆಗಿದೆ. ಅಕ್ಟೋಬರ್​ 14ರಿಂದ ಸಲಗದ ಅಬ್ಬರ ಆರಂಭಗೊಳ್ಳಲಿದೆ. ಕೊವಿಡ್​ ಎರಡನೇ ಅಲೆ ಕಾಣಿಸಿಕೊಂಡ ನಂತರದಲ್ಲಿ ರಿಲೀಸ್​ ಆಗುತ್ತಿರುವ ದೊಡ್ಡ ಬಜೆಟ್​ನ ಮೊದಲ​ ಸಿನಿಮಾ ಇದಾಗಿದೆ.

ಅಕ್ಟೋಬರ್​ 29ಕ್ಕೆ ‘ಭಜರಂಗಿ 2’

ಅಕ್ಟೋಬರ್​ 29ಕ್ಕೆರಂದು ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ರಿಲೀಸ್​ ಆಗುತ್ತಿದೆ. ನಿರ್ದೇಶಕ ಹರ್ಷ ಹಾಗೂ ನಟ ಶಿವರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಬಂದ ಭಜರಂಗಿ ಚಿತ್ರ ದೊಡ್ಡಮಟ್ಟದಲ್ಲಿ ಹಿಟ್​ ಆಗಿತ್ತು. ಇದೇ ಕಾಂಬಿನೇಷನ್​ನಲ್ಲಿ  ‘ಭಜರಂಗಿ 2’ ಸಿದ್ಧಗೊಂಡಿದೆ. ಈ ಮೊದಲು ಎರಡು ಬಾರಿ  ಸಿನಿಮಾ ರಿಲೀಸ್​ ಮಾಡೋಕೆ ಪ್ಲ್ಯಾನ್​ ರೂಪಿಸಲಾಗಿತ್ತು. ಆದರೆ, ಕೊವಿಡ್​ ಇದಕ್ಕೆ ಅವಕಾಶ ನೀಡಿಲ್ಲ.  ಈಗ ಅಕ್ಟೋಬರ್​ 29ಕ್ಕೆ ಸಿನಿಮಾ ರಿಲೀಸ್​ ಆಗುತ್ತಿದೆ. ಸದ್ಯ, ಈ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.

‘ಕೋಟಿಗೊಬ್ಬ 3’ ಯಾವಾಗ?

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ರಿಲೀಸ್​ ಡೇಟ್​ ಇನ್ನು ಕೆಲವೇ ಗಂಟೆಗಳಲ್ಲಿ ಘೋಷಣೆ ಆಗಲಿದೆ. ಈ ಸಿನಿಮಾ ಕೂಡ ಅಕ್ಟೋಬರ್​ 14ರಂದು ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ, ಒಂದೇ ದಿನ ಎರಡು ಸ್ಟಾರ್​ ಸಿನಿಮಾಗಳು ರಿಲೀಸ್​ ಆಗುವುದು ಅನುಮಾನವೇ. ಹೀಗಾಗಿ, ಬೇರೆ ದಿನಾಂಕವನ್ನು ‘ಕೋಟಿಗೊಬ್ಬ 3’ ಘೋಷಿಸಬಹುದು. ಸಂಜೆವೇಳೆಗೆ ಈ ಬಗ್ಗೆ ಅಧಿಕೃತವಾಗಲಿದೆ.

ಇದನ್ನೂ ಓದಿ: 

ಸುದೀಪ್​ಗಾಗಿ ಸಿದ್ಧವಾಗ್ತಿದೆ 120 ಅಡಿ ಕಟೌಟ್​

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು