ಸರಳ ಆಡಳಿತ ನಡೆಸಬೇಕೆನ್ನುವ ಮುಖ್ಯಮಂತ್ರಿಗಳೇ, ನಿಮ್ಮ ಸುಖಕರ ಪ್ರಯಾಣಕ್ಕಾಗಿ ಶಾಲೆಗಳ ಮುಂದಿನ ಹಂಪ್​ಗಳನ್ನು ತೆರವುಗೊಳಿಸಲಾಗಿದೆ!

ಗಮನಿಸಬೇಕಾದ ಸಂಗತಿ ಎಂದರೆ ಇದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುವುದಿಲ್ಲ. ಭಟ್ಟಂಗಿಗಳಂಥ ಸಚಿವರು ಬೊಮ್ಮಾಯಿ ಅವರಿಗೆ ಗೊತ್ತಾಗದ ಹಾಗೆ ಇಂಥ ಕೆಲಸಗಳನ್ನು ಮಾಡುತ್ತಾರೆ.

ಹಾರ ತುರಾಯಿಗಳಿಂದ ತಮಗೆ ಸನ್ಮಾನ, ಅಭಿನಂದಿಸುವುದು ಬೇಡ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೆಡೆ ಹೇಳುತ್ತಾರೆ. ಅದ್ದೂರಿ ಆಡಂಬರಗಳಿಲ್ಲದೆ ಸರಳವಾಗಿ ಆಡಳಿತ ನಡೆಸುವ ಮಾತುಗಳನ್ನೂ ಆಡುತ್ತಾರೆ. ಅವರ ಸರಳತೆ ಮೆಚ್ಚುವಂಥದ್ದೇ. ಆದರೆ, ಅವರ ಸಂಪುಟದ ಕೆಲ ಸಚಿವರು ಆಶಾಡಭೂತಿತನ ತೋರುತ್ತಿರುವುದು ಅವರ ಗಮನಕ್ಕೆ ಬಂದಂತಿಲ್ಲ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲೆ ಪ್ರವಾಸ ಹೋಗಿದ್ದಾರೆ. ಅವರ ರಸ್ತೆ ಪಯಣ ಸುಖಕರವಾಗಿರಲಿ ಅಂತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಕೇಶ್ವರ, ಹುಕ್ಕೇರಿ, ಬಡಕುಂದ್ರಿ ರಸ್ತೆಗಳಲ್ಲಿದ್ದ ಹಲವಾರು ಸ್ಪೀಡ್ ಬ್ರೇಕರ್ ಗಳನ್ನು ತೆಗೆದು ಬಿಟ್ಟಿದ್ದಾರೆ.

ಅವುಗಳಲ್ಲಿ ಕೆಲವು ಹಂಪ್​ಗಳು ಈ ಊರುಗಳ ಶಾಲಾ-ಕಾಲೇಜುಗಳ ಮುಂದೆ ಇದ್ದಂಥವು. ಮಕ್ಕಳು ಓಡಾಡುವುದರಿಂದ ಎಲ್ಲ ಶಾಲೆಗಳ ಮುಂದೆ ಹಂಪ್ಗಳನ್ನು ಮಾಡಿರುತ್ತಾರೆ. ಮಕ್ಕಳ ಸುರಕ್ಷತೆಗಾಗಿ ಅವು ಅತಿ ಮುಖ್ಯ. ಆದರೆ ಲೋಕೋಪಯೋಗಿ ಇಲಾಖೆಯವರಿಗೆ ಮಕ್ಕಳ ಜೀವಕ್ಕಿಂತ ಮುಖ್ಯಮಂತ್ರಿಗಳನ್ನು ಮೆಚ್ಚಿಸುವುದು ಮುಖ್ಯವಾಗಿದೆ. ಇದೆಲ್ಲ ಲೋಕೋಪಯೋಗಿ ಸಚಿವರ ಅಣತಿ ಮೇರೆಗೆ ಅಗಿರುತ್ತದೆ ಅಂತ ಬೇರೆ ಹೇಳಬೇಕಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ ಇದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುವುದಿಲ್ಲ. ಭಟ್ಟಂಗಿಗಳಂಥ ಸಚಿವರು ಬೊಮ್ಮಾಯಿ ಅವರಿಗೆ ಗೊತ್ತಾಗದ ಹಾಗೆ ಇಂಥ ಕೆಲಸಗಳನ್ನು ಮಾಡುತ್ತಾರೆ.

ಇಲ್ಲಿ ಏಳುವ ಪ್ರಶ್ನೆ ಒಂದೇ. ಸ್ಪೀಡ್ ಬ್ರೇಕರ್ ಇಲ್ಲದ ಕಾರಣ ವಾಹನಗಳು ಶಾಲೆಗಳ ಮುಂದೆಯೂ ವೇಗದಲ್ಲಿ ಹೋಗುವಾಗ ಏನಾದರೂ ಅನಾಹುತವಾದರೆ ಅದಕ್ಕೆ ಹೊಣೆ ಯಾರು?

ಇದನ್ನೂ ಓದಿ: ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ: ಬರ್ತ್​​ ಡೇ ಪಾರ್ಟಿ, ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ

Click on your DTH Provider to Add TV9 Kannada