ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ: ಬರ್ತ್​​ ಡೇ ಪಾರ್ಟಿ, ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ

ಬೆಂಗಳೂರು ನಗರದ ಸುಂಕದಕಟ್ಟೆಯ ಯುವಕ ಬರ್ತ್​​ ಡೇ ಪಾರ್ಟಿ ಆಗಮಿಸಿ ಜಕ್ಕಲಮಡಗು ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಈ ದುರ್ಘಟನೆ ನಡೆದಿದ್ದು, ಅಕ್ಸೆಂಚರ್ ಕಂಪನಿಯ ಸಾಫ್ಟ್​​ವೇರ್​ ರೋಹಿತ್ (24) ಮೃತಪಟ್ಟ ಯುವಕ.

ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ: ಬರ್ತ್​​ ಡೇ ಪಾರ್ಟಿ, ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ
ಬರ್ತ್​​ ಡೇ ಪಾರ್ಟಿಗೆ ಬಂದು ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ ರೋಹಿತ್

ಚಿಕ್ಕಬಳ್ಳಾಪುರ: ಬೆಂಗಳೂರು ನಗರದ ಸುಂಕದಕಟ್ಟೆಯ ಯುವಕ ಬರ್ತ್​​ ಡೇ ಪಾರ್ಟಿ ಆಗಮಿಸಿ ಜಕ್ಕಲಮಡಗು ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಈ ದುರ್ಘಟನೆ ನಡೆದಿದ್ದು, ಅಕ್ಸೆಂಚರ್ ಕಂಪನಿಯ ಸಾಫ್ಟ್​​ವೇರ್ ಎಂಜಿನಿಯರ್​ ರೋಹಿತ್ (24) ಮೃತಪಟ್ಟ ಯುವಕ.

ಕುಡಿದ ಅಮಲಿನಲ್ಲಿ ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ:
ಅಕ್ಸೆಂಚರ್ ಸಾಫ್ಟ್​​ವೇರ್​ ಎಂಜಿನಿಯರ್ ರೋಹಿತ್ 5 ಮಂದಿ ಸ್ನೇಹಿತರೊಂದಿಗೆ ಬರ್ತ್​​ ಡೇ ಪಾರ್ಟಿ ಆಚರಣೆಗೆ ಬಂದಿದ್ದರು. ಆತನ ಸ್ನೇಹಿತರು ಹಿನ್ನೀರಿನಲ್ಲಿರುವ ಮರವನ್ನು ಹತ್ತಿ ಸೆಲ್ಫಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ರೋಹಿತನ ಸ್ನೇಹಿತರು ಈಜು ಬಾರದಿದ್ದರೂ ನೀರಿಗೆ ಇಳಿದಿದ್ದರು. ಕುಡಿದ ಅಮಲಿನಲ್ಲಿ ಮರದ ಮೇಲೆ ಹುಚ್ಚಾಟ ನಡೆಸಿದ್ದಾರೆ ಎನ್ನಲಾಗಿದೆ. ಆ ವೇಳೆ ರೋಹಿತ್ ಸಹ ಸೆಲ್ಫಿ ಕ್ರೇಚ್ ನಲ್ಲಿ ಹುಚ್ಚಾಟ ಆಡಲು ಶವವಾಗಿದ್ದಾನೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರದ ಸ್ನೇಹಿತನ ಬರ್ತ್​​ ಡೇ ಪಾರ್ಟಿಗೆ ಬಂದಿದ್ದರು:
ಚಿಕ್ಕಬಳ್ಳಾಪುರದಲ್ಲಿರುವ ಸ್ನೇಹಿತ ಸಂತೋಷನ ಬರ್ತ್​​ ಡೇ ಪಾರ್ಟಿಗೆ ಬೆಂಗಳೂರಿಂದ ರೋಹಿತ್​ ಗ್ಯಾಂಗ್​ ಬಂದಿದ್ದರು. ಸ್ಥಳದಲ್ಲಿ ಮೃತನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಜೊತೆಗಿದ್ದ ಸ್ನೇಹಿತರ ವಿರುದ್ಧವೂ ಪೋಷಕರು ಆಕ್ರೋಶಗೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿ, ರೋಹಿತನ ಶವವನ್ನು ನೀರಿಂದ ಹೊರಗೆ ತೆಗೆದಿದ್ದಾರೆ. ಮೃತನ ತಂದೆ ವೆಂಕಟೇಶ ನೀಡಿದ ದೂರಿನ‌ ಮೇರೆಗೆ ನಂದಿ ಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ವಾರಾಂತ್ಯ ಅಪಘಾತ: ಬೈಕ್​​ ಸವಾರ ಬೆಂಗಳೂರಿನ ಯುವ ಟೆಕ್ಕಿ ಸ್ಥಳದಲ್ಲೇ ಸಾವು

ಇದನ್ನೂ ಓದಿ:
ಸೆಲ್ಫಿ ಕ್ಲಿಕ್ಕಿಸಲು ಜಲಪಾತದ ತುದಿಗೆ ಹೋದ ಭಾರತೀಯ ಟೆಕ್ಕಿ ಕಾಲುಜಾರಿ ಸಾವು

(bangalore accenture techie rohit died in jakkalamadagu backwaters in chikkaballapur)

Read Full Article

Click on your DTH Provider to Add TV9 Kannada