ಚಿಕ್ಕಬಳ್ಳಾಪುರದಲ್ಲಿ ದೆವ್ವ ವದಂತಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಇಲ್ಲಿದೆ
ದೆವ್ವ ಇದೆಯೊ. ಇಲ್ಲವೊ ಗೊತ್ತಿಲ್ಲ. ಆದರೆ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ. ರೆಕಾರ್ಡ್ ಆಗಿರುವ ಸ್ಥಳ ಗ್ರಾಮದಲ್ಲಿ ಇಲ್ಲ. ಗ್ರಾಮಸ್ಥರನ್ನು ಹೆದರಿಸಲು ಈ ವಿಡಿಯೋ ವೈರಲ್ ಮಾಡುತ್ತಿದ್ದಾರೆ ಅಂತ ತಿಳಿಸಿದ್ದಾರೆ.
ದೆವ್ವ ಅಂದರೆ ಕೆಲವರಿಗೆ ಕೈಕಾಲುಗಳು ನಡುಗುತ್ತವೆ. ಇನ್ನು ಕೆಲವರು ದೆವ್ವನೂ ಇಲ್ಲ, ಎಂತದ್ದೂ ಇಲ್ಲ ಅಂತ ಹೇಳುತ್ತಾರೆ. ಆದರೆ ಈವರೆಗೆ ದೆವ್ವ ಮಾತ್ರ ಉಂಟೋ, ಇಲ್ವೋ ಎನ್ನುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ದೆವ್ವವನ್ನು ನೋಡಿದ್ದೇವೆ ಅಂತ ಕೆಲವರು ಹೇಳಿದರೆ, ಇನ್ನು ಕೆಲವರು ಅದೆಲ್ಲಾ ಭ್ರಮೆ ಅಷ್ಟೇ ಅಂತ ಹೇಳುತ್ತಾರೆ. ಸದ್ಯ ಚಿಕ್ಕಬಳ್ಳಾಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ದೆವ್ವ ಇದೆ ಎಂಬ ವದಂತಿ ಹರಡಿದೆ. ಬಿಳಿ ಸೀರೆಯುಟ್ಟು, ಉದ್ದ ಕೂದಲಿರುವ ಮಹಿಳೆ ಮರವೊಂದರಲ್ಲಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಅಳುತ್ತಿರುವಂತೆ ವಿಡಿಯೋದಲ್ಲಿ ಕೇಳಿಬಂದಿದೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮನಹಳ್ಳಿ ಗ್ರಾಮಸ್ಥ ವೇಣು ಎಂಬುವವರು ವೈರಲ್ ಆಗಿರುವ ವಿಡಿಯೊಯೋ ಗ್ರಾಮದ್ದೆ ಅಲ್ಲ. ದೆವ್ವ ಇದೆಯೊ. ಇಲ್ಲವೊ ಗೊತ್ತಿಲ್ಲ. ಆದರೆ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ. ರೆಕಾರ್ಡ್ ಆಗಿರುವ ಸ್ಥಳ ಗ್ರಾಮದಲ್ಲಿ ಇಲ್ಲ. ಗ್ರಾಮಸ್ಥರನ್ನು ಹೆದರಿಸಲು ಈ ವಿಡಿಯೋ ವೈರಲ್ ಮಾಡುತ್ತಿದ್ದಾರೆ ಅಂತ ತಿಳಿಸಿದ್ದಾರೆ.