ನಿಮಗೆ ಗೊತ್ತಾ? ಜನಸಾಮಾನ್ಯನೊಬ್ಬ ಐಫೋನ್ 13 ಖರೀದಿಸಬೇಕಾದರೆ ತನ್ನ ಮೂರು ತಿಂಗಳ ಸಂಬಳ ಪಕ್ಕಕ್ಕಿಡಬೇಕು!

ನಿಮಗೆ ಗೊತ್ತಾ? ಜನಸಾಮಾನ್ಯನೊಬ್ಬ ಐಫೋನ್ 13 ಖರೀದಿಸಬೇಕಾದರೆ ತನ್ನ ಮೂರು ತಿಂಗಳ ಸಂಬಳ ಪಕ್ಕಕ್ಕಿಡಬೇಕು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 25, 2021 | 5:51 PM

ಜನಸಾಮಾನ್ಯ ಐಫೋನ್ 13 ಖರೀದಿಸಿ ತನ್ನ ಜೇಬಿನಲ್ಲಿ ಇಟ್ಟುಕೊಳ್ಳಬೇಕಾದರೆ, ಹೆಚ್ಚು ಕಡಿಮೆ 3 ತಿಂಗಳ ಸಂಬಳವನ್ನು ಪಕ್ಕಕ್ಕಿಡಬೇಕು. ಇದನ್ನು ಗಂಟೆಗಳ ಲೆಕ್ಕದಲ್ಲೂ ಹೇಳಲಾಗಿದೆ. ಸಾಮಾನ್ಯ ಮನುಷ್ಯ ಸತತವಾಗಿ 742 ಗಂಟೆಗಳ ಕಾಲ ದುಡಿದರೆ, ಅದನ್ನು ಖರೀದಿಸಬಲ್ಲ!

ಪೋನು ಫೋನೇ ಮಾರಾಯ್ರೇ, ಅದರಲ್ಲಿ ಆ್ಯಪಲ್ ಏನು ಆರೇಂಜ್ ಏನು? ಅಂತ ಬಹಳ ಜನ ಹೇಳುತ್ತಾರೆ, ಅದನ್ನು ನೀವೂ ಕೇಳಿಸಿಕೊಂಡಿರುತ್ತೀರಿ. ಆದರೆ ಆಪಲ್ ಐಫೋನ್ ಜನರಲ್ಲಿ ಸೃಷ್ಟಿಸಿರುವ ಕ್ರೇಜ್ ನಿಜಕ್ಕೂ ಅರ್ಥವಾಗದ ವಿಷಯ. ಈ ಪೋನ್ ಗಳ ಹೊಸ ಮಾಡೆಲ್ ಬಿಡುಗಡೆಯನ್ನು ಜನ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಬಿಡುಗಡೆಯ ಕಾರ್ಯಕ್ರಮವನ್ನು ಹೆಸರಾಂತ ಚ್ಯಾನೆಲ್ ಗಳು ನೇರ ಪ್ರಸಾರ ಮಾಡುತ್ತವೆ. ಅವತ್ತು ಆ ಚ್ಯಾನೆಲ್​ಗಳ ಟಿಆರ್​ಪಿ ಮುಗಿಲು ಮುಟ್ಟಿರುತ್ತದೆ ಅಂದರೆ ವಿಶ್ವದಾದ್ಯಂತ ಅದೆಷ್ಟು ಜನ ಆ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಅಂತ ಊಹಿಸಿಕೊಳ್ಳಿ.

ಪೋನ್​ಗಳಲ್ಲಿ ಎಲ್ಲಕ್ಕಿಂತ ದುಬಾರಿ ಅಂದರೆ ಐಫೋನ್, ಆದರೂ ಜನ ಅದನ್ನು ಸಾಲ ಸೋಲ ಮಾಡಿಯಾದರೂ ಖರೀದಿಸಲು ಮುಂದಾಗುತ್ತಾರೆ. ಈ ಪೋನನ್ನು ಹೊಂದುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ ಮಾರಾಯ್ರೇ. ಜನಸಾಮಾನ್ಯರಂತು ಇದನ್ನ ಖರೀದಿಲಾರರು, ಆ ಪ್ರಶ್ನೆ ಬೇರೆ. ಆದರೆ ಅದನ್ನು ಸಾಮಾನ್ಯ ಮನುಷ್ಯ ಖರೀದಿಸಬೇಕಾದರೆ ಅವನು ತನ್ನ ಎಷ್ಟು ತಿಂಗಳುಗಳ ಸಂಬಳವನ್ನು ಬದಿಗಿಡಬೇಕು, ಏನೆಲ್ಲ ಪರದಾಡಬೇಕು ಅಂತ ಒಂದು ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷೆ ಜಾಗತಿಕ ಮಟ್ಟದ್ದಾದರೂ ನಾವು ಒಬ್ಬ ಭಾರತೀಯ ಜನಸಾಮಾನ್ಯನ ಹಿನ್ನೆಲೆಯಿಂದ ಅದನ್ನು ಅವಲೋಕಿಸೋಣ.

ಭಾರತದಲ್ಲಿ ಒಬ್ಬ ಕಾಮನ್ ಮ್ಯಾನ್​ನ ಮಾಸಿಕ ಸಂಬಳ ರೂ. 30,000 ಎಂದು ಪರಿಗಣಿಸಲಾಗುತ್ತದೆ. ಓಕೆ, ಐಫೋನ್ ಆರಂಭಿಕ ಬೆಲೆ ರೂ. 80,000. ನೆನಪಿರಲಿ ನಾವು ಹೇಳುತ್ತಿರೋದು ಬೇಸಿಕ್ ಮಾಡೆಲ್ ನ ಪ್ರಾರಂಭಿಕ ಬೆಲೆ. ಅದರರ್ಥ ಜನಸಾಮಾನ್ಯ ಐಫೋನ್ 13 ಖರೀದಿಸಿ ತನ್ನ ಜೇಬಿನಲ್ಲಿ ಇಟ್ಟುಕೊಳ್ಳಬೇಕಾದರೆ, ಹೆಚ್ಚು ಕಡಿಮೆ 3 ತಿಂಗಳ ಸಂಬಳವನ್ನು ಪಕ್ಕಕ್ಕಿಡಬೇಕು. ಇದನ್ನು ಗಂಟೆಗಳ ಲೆಕ್ಕದಲ್ಲೂ ಹೇಳಲಾಗಿದೆ. ಸಾಮಾನ್ಯ ಮನುಷ್ಯ ಸತತವಾಗಿ 742 ಗಂಟೆಗಳ ಕಾಲ ದುಡಿದರೆ, ಅದನ್ನು ಖರೀದಿಸಬಲ್ಲ!

ಯಾರಿಗಪ್ಪ ಬೇಕು ಇದೆಲ್ಲ, ಪೋನು ಅಂದರೆ ಫೋನೇ ಮಾರಾಯ್ರೇ, ಅದರಲ್ಲಿ ಆಪಲ್ ಏನು ಆರೇಂಜ್ ಏನು ಅಂತ ಜನ ಹೇಳೋದು ಈ ಕಾರಣಕ್ಕೂ ಇದ್ದೀತು.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ದೆವ್ವ ವದಂತಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಇಲ್ಲಿದೆ