ಡಾರ್ಲಿಂಗ್​ ಕೃಷ್ಣ ಜೊತೆ ಮೇಘಾ ಶೆಟ್ಟಿ ‘ದಿಲ್​ ಪಸಂದ್’​; ‘ಜೊತೆ ಜೊತೆಯಲಿ’ ನಟಿಗೆ ಸಿಕ್ಕ ಪಾತ್ರ ಹೇಗಿದೆ?

‘ದಿಲ್​ ಪಸಂದ್​’ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ, ಮೇಘಾ ಶೆಟ್ಟಿ, ನಿಶ್ವಿಕಾ ನಾಯ್ಡು ಒಟ್ಟಾಗಿ ನಟಿಸಲಿದ್ದಾರೆ. ಶಿವತೇಜಸ್​ ನಿರ್ದೇಶನದ ಈ ಚಿತ್ರಕ್ಕೆ ಸುಮಂತ್​ ಕ್ರಾಂತಿ ಬಂಡವಾಳ ಹೂಡುತ್ತಿದ್ದಾರೆ.

TV9kannada Web Team

| Edited By: Madan Kumar

Sep 28, 2021 | 4:34 PM

ನಟಿ ಮೇಘಾ ಶೆಟ್ಟಿ ಈಗ ಕಿರುತೆರೆಗೆ ಮಾತ್ರ ಸೀಮಿತ ಆಗಿಲ್ಲ. ‘ಜೊತೆ ಜೊತೆಯಲಿ’ ಸೀರಿಯಲ್​ ಮೂಲಕ ಭಾರಿ ಜನಪ್ರಿಯತೆ ಪಡೆದ ಅವರು ಸಿನಿಮಾಗಳಲ್ಲೂ ಚಾನ್ಸ್​ ಪಡೆದುಕೊಂಡಿದ್ದಾರೆ. ಸ್ಟಾರ್​ ನಟರ ಚಿತ್ರಗಳಿಗೆ ನಾಯಕಿ ಆಗುವ ಅವಕಾಶ ಅವರನ್ನು ಹುಡುಕಿಕೊಂಡು ಬರುತ್ತಿದೆ. ‘ತ್ರಿಬಲ್​ ರೈಡಿಂಗ್​’ ಚಿತ್ರದಲ್ಲಿ ‘ಗೋಲ್ಡನ್​ ಸ್ಟಾರ್​’ ಗಣೇಶ್​ ಜೊತೆ ನಟಿಸಿದ ಬಳಿಕ ಅವರು ಈಗ ಡಾರ್ಲಿಂಗ್​ ಕೃಷ್ಣಗೆ ಜೋಡಿಯಾಗುವ ಅವಕಾಶ ಪಡೆದುಕೊಂಡಿದ್ದಾರೆ. ‘ದಿಲ್​ ಪಸಂದ್​’ ಚಿತ್ರಕ್ಕೆ ಮೇಘಾ ಶೆಟ್ಟಿ ನಾಯಕಿ ಆಗಿದ್ದಾರೆ.

‘ಈ ಸಿನಿಮಾದ ಟೈಟಲ್​ ತುಂಬ ಚೆನ್ನಾಗಿದೆ. ಎಲ್ಲರೂ ಇಷ್ಟಪಡುವ ತಿಂಡಿ ದಿಲ್ ಪಸಂದ್​. ನಿರ್ದೇಶಕ ಶಿವ ತೇಜಸ್​ ಅವರು ಈ ಸಿನಿಮಾದ ಕಥೆ ಹೇಳಲು ನಮ್ಮ ಮನೆಗೆ ಬಂದಿದ್ದರು. ಅವರು ಕಥೆ ಹೇಳಿ ಹೊರಟು ಹೋದಮೇಲೂ ನಾನು ನಗು ನಿಲ್ಲಿಸಿರಲಿಲ್ಲ. ಅಷ್ಟು ಫನ್​ ಇದರಲ್ಲಿ ಇದೆ. ನನ್ನ ಪಾತ್ರ ತುಂಬ ಮುದ್ದುಮುದ್ದಾಗಿದೆ. ನನಗೆ ಸಖತ್​ ಇಷ್ಟ ಆಗಿದೆ. ಜನರಿಗೂ ಇದು ಇಷ್ಟ ಆಗಲಿದೆ’ ಎಂದು ಮೇಘಾ ಶೆಟ್ಟಿ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಸಿನಿಮಾ ಬ್ಲಾಕ್​ ಟಿಕೆಟ್​ ಮಾರುತ್ತಿದ್ದ ರವಿ ಡಿ. ಚನ್ನಣ್ಣನವರ್​: ‘ದಿಲ್​ ಪಸಂದ್​’ ವೇದಿಕೆಯಲ್ಲಿ ಅಚ್ಚರಿ ವಿಚಾರ ಬಹಿರಂಗ

‘ಲವ್​ ಮಾಕ್ಟೇಲ್’​ ನೋಡುವಂತೆ ರವಿ ಡಿ. ಚನ್ನಣ್ಣನವರ್​ಗೆ​ ಪತ್ನಿಯ ಒತ್ತಾಯ; ದಕ್ಷ ಅಧಿಕಾರಿಗೆ ಸಿನಿಮಾ ಇಷ್ಟ ಆಯ್ತಾ?

Follow us on

Click on your DTH Provider to Add TV9 Kannada