AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಬ್ಲಾಕ್​ ಟಿಕೆಟ್​ ಮಾರುತ್ತಿದ್ದ ರವಿ ಡಿ. ಚನ್ನಣ್ಣನವರ್​: ‘ದಿಲ್​ ಪಸಂದ್​’ ವೇದಿಕೆಯಲ್ಲಿ ಅಚ್ಚರಿ ವಿಚಾರ ಬಹಿರಂಗ

‘ದಿಲ್​ ಪಸಂದ್​’ ಸಿನಿಮಾದ ಸುದ್ದಿಗೋಷ್ಠಿಗೆ ಮುಖ್ಯ ಅತಿಥಿಯಾಗಿ ಪೊಲೀಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್​ ಆಗಮಿಸಿದ್ದರು. ಆ ವೇದಿಕೆಯಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡರು. ಯಾರಿಗೂ ಗೊತ್ತಿಲ್ಲದ ಬ್ಲಾಕ್​ ಟಿಕೆಟ್​ ಕಹಾನಿಯನ್ನೂ ಅವರು ತೆರೆದಿಟ್ಟರು.

ಸಿನಿಮಾ ಬ್ಲಾಕ್​ ಟಿಕೆಟ್​ ಮಾರುತ್ತಿದ್ದ ರವಿ ಡಿ. ಚನ್ನಣ್ಣನವರ್​: ‘ದಿಲ್​ ಪಸಂದ್​’ ವೇದಿಕೆಯಲ್ಲಿ ಅಚ್ಚರಿ ವಿಚಾರ ಬಹಿರಂಗ
ರವಿ ಡಿ. ಚನ್ನಣ್ಣನವರ್
TV9 Web
| Edited By: |

Updated on:Sep 28, 2021 | 1:11 PM

Share

ಕರ್ನಾಟಕ ಕಂಡ ಧಕ್ಷ ಅಧಿಕಾರಿಗಳಲ್ಲಿ ರವಿ ಡಿ. ಚನ್ನಣ್ಣನವರ್​ ಕೂಡ ಒಬ್ಬರು. ಅವರು ಮಾಡಿದ ಕೆಲಸಗಳಿಗೆ ಜನರು ಫಿದಾ ಆಗಿದ್ದಾರೆ. ಅವರ ಭಾಷಣಗಳನ್ನು ಕೇಳಿ ಅಪಾರ ಸಂಖ್ಯೆಯ ಜನರು ಸ್ಫೂರ್ತಿ ಪಡೆದುಕೊಂಡಿದ್ದಾರೆ. ಅನೇಕರಿಗೆ ರವಿ ಡಿ. ಚನ್ನಣ್ಣನವರ್​ ಮಾದರಿ ವ್ಯಕ್ತಿ. ಪೊಲೀಸ್​ ಇಲಾಖೆಗೆ ಸೇರಬೇಕು ಎಂಬ ಎಷ್ಟೋ ಯುವಕರಿಗೆ ಅವರೇ ಪ್ರೇರಣೆ. ಇಷ್ಟೆಲ್ಲ ಜನರ ಪ್ರೀತಿ ಗಳಿಸಿರುವ ರವಿ ಡಿ. ಚನ್ನಣ್ಣನವರ್​ ಒಂದು ಕಾಲದಲ್ಲಿ ಸಿನಿಮಾದ ಬ್ಲಾಕ್​ ಟಿಕೆಟ್​ ಮಾರುತ್ತಿದ್ದರು ಎಂಬುದು ಅಚ್ಚರಿಯ ವಿಚಾರ. ಈ ಬಗ್ಗೆ ಸ್ವತಃ ರವಿ ಚನ್ನಣ್ಣನವರ್​ ಹೇಳಿಕೊಂಡಿದ್ದಾರೆ!

ಡಾರ್ಲಿಂಗ್​ ಕೃಷ್ಣ, ನಿಶ್ವಿಕಾ ಕಾಯ್ಡು ಮತ್ತು ಮೇಘಾ ಶೆಟ್ಟಿ ನಟಿಸಲಿರುವ ‘ದಿಲ್​ ಪಸಂದ್​’ ಸಿನಿಮಾದ ಸುದ್ದಿಗೋಷ್ಠಿ ಸೋಮವಾರ (ಸೆ.27) ನಡೆಯಿತು. ಅದಕ್ಕೆ ಮುಖ್ಯ ಅತಿಥಿಯಾಗಿ ರವಿ ಡಿ. ಚನ್ನಣ್ಣನವರ್​ ಆಗಮಿಸಿದ್ದರು. ಅವರ 13 ವರ್ಷಗಳ ಸರ್ವೀಸ್​ನಲ್ಲಿ ಒಂದು ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದು ಇದೇ ಮೊದಲು. ಆ ವೇದಿಕೆಯಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡರು. ಯಾರಿಗೂ ಗೊತ್ತಿಲ್ಲದ ಬ್ಲಾಕ್​ ಟಿಕೆಟ್​ ಕಹಾನಿಯನ್ನೂ ಅವರು ತೆರೆದಿಟ್ಟರು.

ರವಿ ಡಿ. ಚನ್ನಣ್ಣನವರ್​ ಅವರಿಗೆ ನಟನೆ, ಬರವಣಿಗೆ, ಸಿನಿಮಾ ಬಗ್ಗೆ ಅಪಾರ ಆಸಕ್ತಿ ಇದೆ. ಹಲವು ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಲೇಜು ದಿನಗಳಿಂದಲೂ ಅವರ ಮೇಲೆ ಸಿನಿಮಾಗಳು ಬಹಳ ಪ್ರಭಾವ ಬೀರಿವೆ. ಡಾ. ರಾಜ್​ಕುಮಾರ್​ ಅವರ ‘ಮಯೂರ’ ಸಿನಿಮಾ ನೋಡಿ ಅವರು ಸ್ವಾಭಿಮಾನದ ಪಾಠ ಕಲಿತರು. ಈ ಎಲ್ಲ ಘಟನೆಗಳನ್ನು ಅವರು ಮೆಲುಕು ಹಾಕಿದರು.

‘ಎಲ್ಲೂ ಹೇಳಲಾರದ ಒಂದು ಸತ್ಯವನ್ನು ನಾನು ಇಂದು ಹೇಳುತ್ತಿದ್ದೇನೆ. ನಾನು ಗದಗದಲ್ಲಿ ಬ್ಲಾಕ್​ ಟಿಕೆಟ್​ ಮಾರುತ್ತಿದ್ದೆ. ಮಹಾಲಕ್ಷ್ಮೀ, ಶಾಂತಿ ಚಿತ್ರಮಂದಿಗಳಲ್ಲಿ ಬ್ಲಾಕ್​ ಟಿಕೆಟ್​ ಮಾರಿದ್ದೆ. ‘ಅಸುರ’ ಸಿನಿಮಾ ರಿಲೀಸ್​ ಆದಾಗ ನಾನು ಪ್ರಥಮ ಪಿಯುಸಿ ಹುಡುಗ. ಯಜಮಾನ, ದಿಲ್​ ಕಾ ರಿಶ್ತಾ, ಅಂಜಲಿ ಗೀತಾಂಜಲಿ ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ತೆಗೆದುಕೊಂಡು ಬರುತ್ತಿದ್ದೆ’ ಎಂದು ಅವರು ಹೇಳಿದರು.

ಮೊದಲಿನಿಂದಲೂ ನಾಟಕಗಳ ಜೊತೆ ನಂಟು ಹೊಂದಿರುವ ರವಿ ಡಿ. ಚನ್ನಣ್ಣನವರ್​ ಇತ್ತೀಚೆಗೆ ಬರಹಗಳನ್ನು ಕೂಡ ಆರಂಭಿಸಿದ್ದಾರೆ. ಅನೇಕ ಕಥೆಗಳನ್ನು ಅವರು ಬರೆದಿದ್ದಾರೆ. ಅವು ಇನ್ನೂ ಪ್ರಕಟಗೊಂಡಿಲ್ಲ. ‘ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ’ ಎನ್ನುವ ಮೂಲಕ ಈ ಮಾಧ್ಯಮದ ಪ್ರಭಾವವನ್ನು ಅವರು ಶ್ಲಾಘಿಸಿದರು.

‘ದಿಲ್​ ಪಸಂದ್​’ ಚಿತ್ರಕ್ಕೆ ಸುಮಂತ್ ಕ್ರಾಂತಿ ಬಂಡವಾಳ ಹೂಡುತ್ತಿದ್ದಾರೆ. ಶಿವ ತೇಜಸ್​ ನಿರ್ದೇಶನ ಮಾಡುತ್ತಿದ್ದಾರೆ. ತಬಲ ನಾಣಿ, ಸಾಧುಕೋಕಿಲ ಮುಂತಾದ ಖ್ಯಾತ ನಟರು ಅಭಿನಯಿಸುತ್ತಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್​ ಚಂದ್ರ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೀಘ್ರದಲ್ಲೇ ಇದರ ಶೂಟಿಂಗ್​ ಆರಂಭ ಆಗಲಿದೆ.

ಇದನ್ನೂ ಓದಿ:

ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಫೋಟೋ ತೋರಿಸಿ ವಂಚಿಸಿದ ಅರ್ಚಕ; ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್

ಅನಗತ್ಯ ಓಡಾಡುವವರಿಗೆ ಬ್ರೇಕ್ ಹಾಕಲು ಫೀಲ್ಡಿಗಿಳಿದ ಎಸ್ಪಿ ರವಿ ಚನ್ನಣ್ಣನವರ್

Published On - 8:15 am, Tue, 28 September 21

Follow Us
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!