‘ಲವ್ ಮಾಕ್ಟೇಲ್’ ನೋಡುವಂತೆ ರವಿ ಡಿ. ಚನ್ನಣ್ಣನವರ್ಗೆ ಪತ್ನಿಯ ಒತ್ತಾಯ; ದಕ್ಷ ಅಧಿಕಾರಿಗೆ ಸಿನಿಮಾ ಇಷ್ಟ ಆಯ್ತಾ?
‘ನನ್ನ 13 ವರ್ಷದ ಸೇವಾವಧಿಯಲ್ಲಿ ಇದೇ ಮೊದಲ ಬಾರಿಗೆ ಇಂಥ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅದಕ್ಕೆ ಎರಡು ಕಾರಣ’ ಎಂದು ‘ದಿಲ್ ಪಸಂದ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ರವಿ ಡಿ. ಚನ್ನಣ್ಣನವರ್ ಮಾತು ಆರಂಭಿಸಿದರು. ‘ಲವ್ ಮಾಕ್ಟೇಲ್’ ಚಿತ್ರವನ್ನೂ ಹಾಡಿ ಹೊಗಳಿದರು.
ನಟ ಡಾರ್ಲಿಂಗ್ ಕೃಷ್ಣ ಅವರ ಹೊಸ ಸಿನಿಮಾ ‘ದಿಲ್ ಪಸಂದ್’ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರವಿ ಡಿ. ಚನ್ನಣ್ಣನವರ್ ಆಗಮಿಸಿದ್ದರು. ಆ ವೇದಿಕೆಯಲ್ಲಿ ಅನೇಕ ವಿಚಾರಗಳನ್ನು ಅವರು ಹಂಚಿಕೊಂಡರು. ತಾವು ಈ ಕಾರ್ಯಕ್ರಮಕ್ಕೆ ಬರಲು ಡಾರ್ಲಿಂಗ್ ಕೃಷ್ಣ ಕೂಡ ಪ್ರಮುಖ ಕಾರಣ ಎಂಬುದನ್ನು ಅವರು ತಿಳಿಸಿದರು. ‘ಲವ್ ಮಾಕ್ಟೇಲ್’ ಸಿನಿಮಾವನ್ನು ಅವರ ಇಡೀ ಫ್ಯಾಮಿಲಿ ಮೆಚ್ಚಿಕೊಂಡಿದೆ. ಆ ಬಗ್ಗೆ ರವಿ ಡಿ. ಚನ್ನಣ್ಣನವರ್ ವಿವರಿಸಿದರು.
‘ಶಾಲೆ, ಕಾಲೇಜು, ಮಠ ಮುಂತಾದ ಕಡೆಗಳಲ್ಲಿ ಮಾತನಾಡಿ ನನಗೆ ಅಭ್ಯಾಸ. ನನ್ನ 13 ವರ್ಷದ ಸೇವಾವಧಿಯಲ್ಲಿ ಇದೇ ಮೊದಲ ಬಾರಿಗೆ ಇಂಥ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅದಕ್ಕೆ ಎರಡು ಕಾರಣ. ನಿರ್ಮಾಪಕ ಸುಮಂತ್ ಕ್ರಾಂತಿ ನನ್ನ ಸ್ನೇಹಿತ ಎಂಬುದು ಒಂದು ಕಾರಣ. ಎರಡನೇ ಕಾರಣ ಡಾರ್ಲಿಂಗ್ ಕೃಷ್ಣ. ಅವರು ನಟಿಸಿದ ‘ಲವ್ ಮಾಕ್ಟೇಲ್’ ಚಿತ್ರವನ್ನು ನನ್ನ ಹೆಂಡತಿ ಒತ್ತಾಯದ ಮೇರೆಗೆ ನೋಡಿದೆ. ಮಿಲನಾ ನಾಗರಾಜ್ ಮತ್ತು ಕೃಷ್ಣ ಅವರು ಕಷ್ಟಪಟ್ಟು ಆ ಸಿನಿಮಾ ಮಾಡಿದ್ದಾರೆ’ ಎಂದು ರವಿ ಡಿ. ಚನ್ನಣ್ಣನವರ್ ಮನಸಾರೆ ಹೊಗಳಿದರು.
ಇದನ್ನೂ ಓದಿ:
ಮದುವೆ ಬಳಿಕ ಹೇಗಿದೆ ಮಿಲನಾ-ಡಾರ್ಲಿಂಗ್ ಕೃಷ್ಣ ದಂಪತಿಯ ಸಿನಿಮಾ ಜರ್ನಿ ಮತ್ತು ಜೀವನ?
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

