ಮದುವೆ ಬಳಿಕ ಹೇಗಿದೆ ಮಿಲನಾ-ಡಾರ್ಲಿಂಗ್​ ಕೃಷ್ಣ ದಂಪತಿಯ ಸಿನಿಮಾ ಜರ್ನಿ ಮತ್ತು ಜೀವನ?

ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್​ ಮಿ ಆರ್​ ಹೇಟ್​ ಮೀ’ ಸಿನಿಮಾ ಇತ್ತೀಚೆಗೆ ಸೆಟ್ಟೇರಿತು. ಈ ಸಂದರ್ಭದಲ್ಲಿ ಮಿಲನಾ ಮತ್ತು ಕೃಷ್ಣ ಒಟ್ಟಿಗೆ ಮಾತಿಗೆ ಸಿಕ್ಕರು.

ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​ಗಳಲ್ಲಿ ಒಂದಾಗಿರುವ ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್​ ಕೃಷ್ಣಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಲವ್​ ಮಾಕ್ಟೇಲ್​’ ಸಿನಿಮಾದ ಯಶಸ್ಸಿನ ಬಳಿಕ ಅವರಿಬ್ಬರ ಚಾರ್ಮ್ ಹೆಚ್ಚಿದೆ. ಇಬ್ಬರೂ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹುಕಾಲದಿಂದ ಪ್ರೇಮಿಗಳಾಗಿದ್ದ ಅವರು ‘ಲವ್​ ಮಾಕ್ಟೇಲ್​’ ಗೆಲುವಿನ ನಂತರ ದಂಪತಿಗಳಾಗಿ ಹೊಸ ಜೀವನ ಆರಂಭಿಸಿದರು. ಕೃಷ್ಣ ನಟನೆಯ ‘ಲವ್​ ಮಿ ಆರ್​ ಹೇಟ್​ ಮೀ’ ಸಿನಿಮಾ ಇತ್ತೀಚೆಗೆ ಸೆಟ್ಟೇರಿತು. ಈ ಸಂದರ್ಭದಲ್ಲಿ ಮಿಲನಾ ಮತ್ತು ಕೃಷ್ಣ ಒಟ್ಟಿಗೆ ಮಾತಿಗೆ ಸಿಕ್ಕರು. ಮದುವೆ ನಂತರ ತಮ್ಮ ಸಿನಿಮಾ ಜರ್ನಿ ಮತ್ತು ವೈಯಕ್ತಿಕ ಬದುಕು ಹೇಗೆ ಸಾಗುತ್ತಿದೆ ಎಂಬ ಬಗ್ಗೆ ಒಂದಷ್ಟು ಮಾತುಗಳನ್ನು ಹಂಚಿಕೊಂಡರು.

ಮದುವೆ ಬಳಿಕ ಈ ಜೋಡಿಗೆ ಮೊದಲ ಗೌರಿ-ಗಣೇಶ ಹಬ್ಬ ಬಂದಿದೆ. ಹಾಗಾಗಿ ಸಂಭ್ರಮ ಕೊಂಚ ಜೋರಾಗಿಯೇ ಇದೆ. ಹಲವು ಸಿನಿಮಾ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ. ಪರಸ್ಪರ ತಮಗೆ ಯಾವ ರೀತಿಯ ಪಾತ್ರಗಳು ಇಷ್ಟ ಎಂಬ ಬಗ್ಗೆಯೂ ಅವರಿಬ್ಬರು ಮಾತನಾಡಿದ್ದಾರೆ.

ಇದನ್ನೂ ಓದಿ:

Darling Krishna Birthday: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬದ ದಿನ ಮಿಲನಾ ನಾಗರಾಜ್​ ನೀಡಿದ ಗಿಫ್ಟ್​ ಏನು?

ಕೊವಿಡ್​ ಪಾಸಿಟಿವ್​ ಆದರೂ ಅಭಿಮಾನ ಮರೆಯದ ಕೃಷ್ಣ-ಮಿಲನಾ!

Click on your DTH Provider to Add TV9 Kannada