ಶಾಮಿಯ ಎಮ್ಐ 11 ಲೈಟ್ 4ಜಿ ಸ್ಮಾರ್ಟ್ ಪೋನ್ ನಿಮಗಿಷ್ಟವಾಗಿದ್ದರೆ, 5ಜಿ ವೇರಿಯಂಟ್ ಸಹ ಇದೇ ತಿಂಗಳು ಮಾರ್ಕೆಟ್​ಗೆ ಬರಲಿದೆ

ಲಭ್ಯವಾಗಿರುವ 91ಮೊಬೈಲ್ಸ್ ಮಾಹಿತಿಯ ಪ್ರಕಾರ ಶಾಮಿ ಸಂಸ್ಥೆಯು ಎಮ್ಐ 11 ಲೈಟ್ ನ 5ಜಿ ವೇರಿಯಂಟ್ ಅನ್ನು ಸೆಪ್ಟೆಂಬರ್ ತಿಂಗಳಲ್ಲೇ ಲಾಂಚ್ ಮಾಡಿವ ನಿರ್ಧಾರ ಮಾಡಿಕೊಂಡಿದೆ.

ಮೊಬೈಲ್ ಫೋನ್​​ಗಳನ್ನು ಉತ್ಪಾದಿಸುವ ದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಶಾಮಿ ತನ್ನ ಎಮ್ಐ 11 ಲೈಟ್ ನ 4ಜಿ ಸ್ಮಾರ್ಟ್ ಪೋನ್ ಗಳನ್ನು ಈ ವರ್ಷದ ಆರಂಭದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು ನಿಮಗೆ ಗೊತ್ತಿದೆ. ಈಗ ಸಂಸ್ಥೆಯು ದೇಶದಲ್ಲಿ 5ಜಿ ವೇರಿಯಂಟ್ ಅನ್ನೂ ಲಾಂಚ್ ಮಾಡುವ ಉದ್ದೇಶ ಹೊಂದಿದೆ. ಅಸಲಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಶಾಮಿ ಎಮ್ ಐ ಲೈಟ್ ಫೋನನ್ನು 4ಜಿ ಮತ್ತು 5ಜಿ ಎರಡೂ ವೇರಿಯಂಟ್ಗಳಲ್ಲಿ ಲಾಂಚ್ ಮಾಡಿತ್ತು. ಅದರೆ ಭಾರತದಲ್ಲಿ ಮಾತ್ರ ಕೇವಲ 4ಜಿ ವೇರಿಯಂಟ್ ಬಿಡುಗಡೆ ಮಾಡಿತ್ತು. ಅದನ್ನು ಲಾಂಚ್ ಮಾಡುವ ಸಂದರ್ಭದಲ್ಲಿ 5ಜಿ ವೇರಿಯಂಟ್ ಗೆ ಬೇಡಿಕೆ ಬಂದರೆ ಲಾಂಚ್ ಮಾಡುವುದಾಗಿ ಹೇಳಿತ್ತು.

ನಮಗೆ ಲಭ್ಯವಾಗಿರುವ 91ಮೊಬೈಲ್ಸ್ ಮಾಹಿತಿಯ ಪ್ರಕಾರ ಶಾಮಿ ಸಂಸ್ಥೆಯು ಎಮ್ಐ 11 ಲೈಟ್ ನ 5ಜಿ ವೇರಿಯಂಟ್ ಅನ್ನು ಸೆಪ್ಟೆಂಬರ್ ತಿಂಗಳಲ್ಲೇ ಲಾಂಚ್ ಮಾಡಿವ ನಿರ್ಧಾರ ಮಾಡಿಕೊಂಡಿದೆ. ಲಾಂಚ್ ಮಾಡುವ ದಿನಾಂಕವನ್ನು ಸಂಸ್ಥೆಯು ಖಚಿತಪಡಿಸಿಲ್ಲವಾದರೂ, ಮುಂದಿನ ಮೂರು ವಾರಗಳಲ್ಲಿ ಅದು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಇತ್ತೀಚಿಗೆ, ಶಾಮಿ 11 ಲೈಟ್ 5ಜಿ ಎನ್ಈ ಐ ಎಮ್ ಈ ಐ ಡಾಟಾಬೇಸ್ನಲ್ಲೂ ಕಾಣಿಸಿಕೊಂಡಿತ್ತು, ಅದರರ್ಥ ಈ ಫೋನ್ ಇಷ್ಟರಲ್ಲೇ ಭಾರತದ ಮಾರ್ಕೆಟ್ಗಳಲ್ಲಿ ಬಿಡುಗಡೆಯಾಗಲಿದೆ. ಲಭ್ಯವಿರುವ ಮಾಹಿತಿಯ ಅನ್ವಯ, ಸದರಿ ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್ನೊಂದಿಗೆ ಬರಲಿದೆ. ರೀಯಲ್ಮೀ ಕಂಪನಿಯು ತನ್ನ ಇತ್ತೀಚಿನ ರೀಯಲ್ಮೀ ಜಿಟಿ ಮಾಸ್ಟರ್ ಸೆಟ್ ನಲ್ಲಿ ಇದೇ ಪ್ರೊಸೆಸ್ಸರ್ ಅನ್ನು ಬಳಸಿದೆ.

ಈ ಸ್ಮಾರ್ಟ್ ಫೋನ್ 6.55-ಇಂಚಿನ ಎಫ್ ಎಚ್ ಡಿ + ಎ ಎಮ್ ಒ ಎಲ್ ಈ ಡಿ ಡಿಸ್ಪ್ಲೇ 2,400 x 1,080 ಪಿಕ್ಸೆಲ್ ಗಳ ರೆಸಲ್ಯೂಶನ್ ನೊಂದಿಗೆ ಬರಲಿದೆ. ಮೇಲಿನ ಎಡ ಮೂಲೆಯಲ್ಲಿ ಪಂಚ್-ಹೋಲ್ ಕಟೌಟ್, 90 ಎಚ್ ಜೆಡ್ ರಿಫ್ರೆಶ್ ರೇಟ್ ಮತ್ತು 240 ಎಚ್ ಜೆಡ್ ಟಚ್ ಸ್ಯಾಂಪ್ಲಿಂಗ್ ರೇಟನ್ನು ಹೊಂದಿದೆ. ಇದು 64-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 5-ಮೆಗಾಪಿಕ್ಸೆಲ್ ಟೆಲಿ-ಮ್ಯಾಕ್ರೋ ಸೆನ್ಸರ್ ಸೇರಿದಂತೆ ಮೂರು ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಕೂಡ ಇದೆ.

ಇದನ್ನೂ ಓದಿ:  ಅರವಿಂದ್​ಗೆ ಸಂಬಂಧಿಸಿದ ವಿಡಿಯೋ ಲೀಕ್​ಗೆ ಸಂಬರಗಿ ಸಂಚು​; ಚಕ್ರವರ್ತಿ ಚಂದ್ರಚೂಡ್​ ತೆರೆದಿಟ್ಟ ಸ್ಫೋಟಕ ಮಾಹಿತಿ

Click on your DTH Provider to Add TV9 Kannada