ಎಲ್ಲರ ಮಾತುಗಳನ್ನು ಸಂಬರಗಿ ರೆಕಾರ್ಡ್ ಮಾಡಿಕೊಳ್ಳುತ್ತಾರೆ ಎಂದು ಚಂದ್ರಚೂಡ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ‘ಬಿಗ್ ಬಾಸ್ನ ಎರಡನೇ ಇನ್ನಿಂಗ್ಸ್ನ ಕ್ವಾರೈಂಟೈನ್ ಸಂದರ್ಭದಲಿ ಸ್ಪರ್ಧಿ ಅರವಿಂದ ಸೇರಿದಂತೆ ಹಲವರಿಗೆ ಮಧ್ಯಪಾನದ ಪಾರ್ಟಿಕೊಟ್ಟು (ಚಾನಲ್ ನಿಯಮಾವಳಿ ವಿರೋಧಿಸಿ) ವಿಡಿಯೋ ಮಾಡಿದ. ಸಧ್ಯ ನಾನು ಇಂತಹ ಚಾಣಪತ್ರಿಗಳನ್ನ ತುಂಬಾ ನೋಡಿದವನು. ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಹೆಣ್ಣುಮಕ್ಕಳು ಅವನ ರೂಮಿಂದ ಹೋಗುವಂತೆ ಮಾಡಿದೆ’ ಎಂದು ಚಂದ್ರಚೂಡ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
‘ಅರವಿಂದರ ವಿಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದ. ಇವನ ಮಾತ್ರೋಶ್ರೀ ಪುಷ್ಪ ಸಂಬರ್ಗಿ ಅವರ ತಲೆಮೆಲೆ ಕೈಇಟ್ಟು ಹೇಳಲಿ ಇಂತಹ ಕೆಲಸ ಮಾಡಲಿಲ್ಲವೆಂದು. ಇಲ್ಲ, ತನ್ನ ಮೊಬೈಲ್ ಅನ್ನು ಪೋಲೀಸರ ತನಿಖೆಗೆ ಕೊಡಲಿ. ನಿಜಕ್ಕೂ ಕಲರ್ಸ್ನ ಆಯೋಜಕರು ಯಾವ ಪರಿ ಬುದ್ಧಿವಾದ ಹೇಳಿ ಈತನಿಗಾಗಿ ಎಂಜಲು ಖರ್ಚು ಮಾಡಿದರೆಂದು ತನಿಖೆಯ ಸಣ್ಣ ಅಭ್ಯಾಸವಿದ್ದವರು ತಿಳಿದುಕೊಳ್ಳಬಹುದು’ ಎಂದು ಚಂದ್ರಚೂಡ್ ಬರೆದುಕೊಂಡಿದ್ದಾರೆ.
ಶ್ರುತಿ ಹರಿಹರನ್ ವಿರುದ್ಧ ಸಂಬರಗಿ ಏನೇನೋ ಆರೋಪಗಳನ್ನು ಮಾಡಿದ್ದರೂ ಕೂಡ ಅವುಗಳಿಗೆ ಸಾಕ್ಷಿ ಒದಗಿಸಿಲ್ಲ. ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರ ವಿಚಾರದಲ್ಲೂ ಹಾಗೆಯೇ ಆಗಿದೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವನು ಎಂದು ಕೇಳಿಕೊಂಡು ಪ್ರಚಾರ ಪಡೆಯುತ್ತಾರೆ. ಕಾರ್ ಲೋನ್ ವಿಚಾರದಲ್ಲಿ ತನ್ನದೇ ಗೆಳೆಯರಿಗೆ ಮೋಸ ಮಾಡಿದ್ದಾರೆ ಎಂಬಿತ್ಯಾದಿ ಆರೋಪಗಳನ್ನು ಚಂದ್ರಚೂಡ್ ಹೊರಿಸಿದ್ದಾರೆ. ಇದಕ್ಕೆ ಸಂಬರಗಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಎಂಬ ಕೌತುಕ ಸೃಷ್ಟಿ ಆಗಿದೆ.
ಇದನ್ನೂ ಓದಿ:
‘ಸುದೀಪ್ ಅನುಮತಿ ಕೊಟ್ಟರೆ ಪ್ರಶಾಂತ್ ಸಂಬರಗಿ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗ್ತೀನಿ’: ಚಕ್ರವರ್ತಿ ಚಂದ್ರಚೂಡ್
‘ಪ್ರಶಾಂತ್ ಸಂಬರಗಿ ನೋಡಿದ್ರೆ ಮೇಟಿ ನೆನಪಾಗ್ತಾರೆ’; ಬಿಗ್ ಬಾಸ್ನಿಂದ ಹೊರಬಂದ ಚಂದ್ರಚೂಡ್ ಹೋಲಿಕೆ