ಮೂರು ವರ್ಷದ ಮಗುವಿಗೂ ಬಾಡಿ ಶೇಮಿಂಗ್; ಕೊಳಕು ಮನಸ್ಥಿತಿಗಳಿಗೆ ಬಿಗ್ ಬಾಸ್ ಸ್ಪರ್ಧಿಯ ಖಡಕ್ ಉತ್ತರ

ತಮಿಳು ಬಿಗ್​ ಬಾಸ್​ ಸೀಸನ್​ 3ರ ಮೊದಲ ರನ್ನರ್​ ಅಪ್​ ಹಾಗೂ ಕೋರಿಯೋಗ್ರಾಫರ್​ ಸ್ಯಾಂಡಿ ಮಗುವಿನ ಬಗ್ಗೆ ಕೆಲವರು ಕೆಟ್ಟದಾಗಿ ಬರೆದುಕೊಂಡಿದ್ದಾರೆ. ಇದು ಅವರಿಗೆ ಬೇಸರ ತರಿಸಿದೆ.

ಮೂರು ವರ್ಷದ ಮಗುವಿಗೂ ಬಾಡಿ ಶೇಮಿಂಗ್; ಕೊಳಕು ಮನಸ್ಥಿತಿಗಳಿಗೆ ಬಿಗ್ ಬಾಸ್ ಸ್ಪರ್ಧಿಯ ಖಡಕ್ ಉತ್ತರ
ಮೂರು ವರ್ಷದ ಮಗುವಿಗೂ ಬಾಡಿ ಶೇಮಿಂಗ್; ಕೊಳಕು ಮನಸ್ಥಿತಿಗಳಿಗೆ ಬಿಗ್ ಬಾಸ್ ಸ್ಪರ್ಧಿಯ ಖಡಕ್ ಉತ್ತರ

ಸೆಲೆಬ್ರಿಟಿ ಪಟ್ಟ ಬಂದ ನಂತರದಲ್ಲಿ ಕೆಲವೊಮ್ಮೆ ಓಪನ್​ ಆಗಿಯೇ ಬಾಡಿ ಶೇಮಿಂಗ್​ ಎದುರಿಸುವ ಪರಿಸ್ಥಿತಿ ಬರುತ್ತದೆ. ಇದರಿಂದ ತಪ್ಪಿಸಿಕೊಳ್ಳೋಕೆ ಸೆಲೆಬ್ರಿಟಿಗಳು ಫಿಟ್​ ಆಗಿರೋಕೆ ಪ್ರಯತ್ನಿಸುತ್ತಾರೆ. ಇಲ್ಲವಾದರೆ, ನಟ/ನಟಿಯರ ತೂಕ ಜಾಸ್ತಿ ಆಗಿದೆ ಎಂಬ ವಿಚಾರ ಇಟ್ಟುಕೊಂಡೇ ಟ್ರೋಲ್​ ಮಾಡಲಾಗುತ್ತದೆ. ಆದರೆ, ಕೆಲವರು ಈಗ ಸೆಲೆಬ್ರಿಟಿಗಳ ಮಕ್ಕಳ ಮೇಲೂ ಕಣ್ಣಿಟ್ಟಿದ್ದಾರೆ. ಏನೂ ಅರಿಯದ ಮೂರು ವರ್ಷದ ಕಂದಮ್ಮನಿಗೆ ಬಾಡಿ ಶೇಮಿಂಗ್​ ಮಾಡಿದ್ದಾರೆ. ಕೊಳಕು ಮನಸ್ಥಿತಿ ಬಗ್ಗೆ ದಂಪತಿ ಅಸಮಾಧಾನ ಹೊರ ಹಾಕಿದ್ದಾರೆ.

ತಮಿಳು ಬಿಗ್​ ಬಾಸ್​ ಸೀಸನ್​ 3ರ ಮೊದಲ ರನ್ನರ್​ ಅಪ್​ ಹಾಗೂ ಕೋರಿಯೋಗ್ರಾಫರ್​ ಸ್ಯಾಂಡಿ ಮಗುವಿನ ಬಗ್ಗೆ ಕೆಲವರು ಕೆಟ್ಟದಾಗಿ ಬರೆದುಕೊಂಡಿದ್ದಾರೆ. ಇದು ಅವರಿಗೆ ಬೇಸರ ತರಿಸಿದೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಅನೇಕರು ಈ ನಟನನ್ನು ಬೆಂಬಲಿಸಿದ್ದಾರೆ.

ಸ್ಯಾಂಡಿ 2017ರಲ್ಲಿ ಗೆಳತಿ ಡೊರೊತಿ ಸಿಲ್ವಿಯಾ ಅವರನ್ನು ಮದುವೆ ಆದರು. 2018ರಲ್ಲಿ ಮಗಳು ತಾಶಾ ಜನಿಸಿದರೆ 2021ರಲ್ಲಿ ಗಂಡು ಮಗುವಿನ ಆಗಮನವಾಗಿತ್ತು. ಸ್ಯಾಂಡಿ ಮತ್ತು ಸಿಲ್ವಿಯಾ ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಮಕ್ಕಳ ವಿಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳಿಗೋಸ್ಕರ ಇಬ್ಬರೂ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಿಲ್ವಿಯಾ ಪತಿ ಸ್ಯಾಂಡಿ ಹಾಗೂ ಮಗಳು ತಾಶಾ ಜತೆ ಇರುವ ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಅನೇಕರು ಮಗುವಿನ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು. ‘ತಾಶಾ ತಾಯಿಯಂತೆ ದಪ್ಪವಾಗಿದ್ದಾಳೆ’  ಎಂದು ಕೆಲವರು ಟೀಕಿಸಿದ್ದಾರೆ. ಇದು ಸಿಲ್ವಿಯಾ ಹಾಗೂ ಸ್ಯಾಂಡಿ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಕೊಂಕಾಗಿ ಬರೆದುಕೊಂಡಿರುವ ಸಿಲ್ವಿಯಾ, ‘ಮಗು ಸ್ಲಿಮ್​ ಆಗಲು ಬಿಡಿ. ಆಗ ಅವಳು ಸ್ಯಾಂಡಿ ಮಾಸ್ಟರ್​ನಂತೆ ಡಾನ್ಸ್​ ಮಾಡಬಹುದು’ ಎಂದಿದ್ದಾರೆ.

ಮುಂದುವರಿದು, ‘ಅವಳು ಈಗಿನ್ನೂ ಮಗು. ಈಗಲೇ ಸಮಾಜ ಅವಳ ಮೇಲೆ ಒತ್ತಡ ಹೇರಲು ಆರಂಭಿಸಿದೆ. ಮುಂದಿನ ಪೀಳಿಗೆಗಾಗಿ ನಾವು ಸ್ವಾಸ್ತ್ಯ ಸಮಾಜ ರಚಿಸಲು ಈಗಲೇ ಪಣ ತೊಡೋಣ’ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಮಂಜು-ದಿವ್ಯಾ ಫೋಟೋ; ಬಿಗ್​ ಬಾಸ್​ ಬಳಿಕ ಏನಿದು ಕಹಾನಿ?

‘ಬಿಗ್​ ಬಾಸ್​ ಸೀಸನ್​ 8’ ಮರುಸೃಷ್ಟಿ; ಇದನ್ನು ನೋಡಿದ್ರೆ ನೀವು ನಗೋದು ಗ್ಯಾರಂಟಿ

Click on your DTH Provider to Add TV9 Kannada