AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ಪ್ರಭಾಸ್ ಅಭಿಮಾನಿಗಳಿಗೆ ಮುಂದಿನ ವರ್ಷ ಭರ್ಜರಿ ಹಬ್ಬ; ಕಾರಣ ಏನು ಗೊತ್ತಾ?

Prabhas: ಪ್ರಭಾಸ್ ಅಭಿಮಾನಿಗಳಿಗೆ ಮುಂದಿನ ವರ್ಷ ಭರ್ಜರಿ ಹಬ್ಬ; ಕಾರಣ ಏನು ಗೊತ್ತಾ?

TV9 Web
| Edited By: |

Updated on:Sep 28, 2021 | 10:02 AM

Share

ಟಾಲಿವುಡ್​ನ ಖ್ಯಾತ ನಟ ಪ್ರಭಾಸ್ ತಮ್ಮ ಚಿತ್ರಗಳಿಂದ ಇದೀಗ ಬಹು ದೊಡ್ಡ ತಾರೆಯಾಗಿ ಬೆಳೆದು ನಿಂತಿದ್ದಾರೆ. ಆದರೆ ಸಾಹೊ ಚಿತ್ರದ ನಂತರ ಅಭಿಮಾನಿಗಳಿಗೆ ಹೊಸ ಚಿತ್ರ ನೋಡುವ ಭಾಗ್ಯ ಸಿಕ್ಕಿಲ್ಲ. ಅವರ ಇತರ ಚಿತ್ರಗಳು ಯಾವಾಗ ತೆರೆಗೆ ಬರಬಹುದು? ಇಲ್ಲಿದೆ ಮಾಹಿತಿ.

ಟಾಲಿವುಡ್​ನ ಖ್ಯಾತ ನಟ ಪ್ರಭಾಸ್ ಅಭಿಮಾನಿಗಳಿಗೆ ಮುಂದಿನ ವರ್ಷ ಹಬ್ಬದ ವಾತಾವರಣ ಏರ್ಪಡೋದು ಪಕ್ಕಾ. ಕಾರಣ, ಬಾಹುಬಲಿ ಖ್ಯಾತಿಯ ಈ ನಟನ ಚಿತ್ರಗಳು ಮುಂದಿನ ವರ್ಷ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿವೆ. ಬಾಹುಬಲಿ ಚಿತ್ರದ ಎರಡು ಭಾಗದ ನಂತರ ಪ್ರಭಾಸ್ ಸಾಹೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಲಿವುಡ್ ಶೈಲಿಯ ಆಕ್ಷನ್ ದೃಶ್ಯಗಳು, ಕಥೆ ಎಲ್ಲವನ್ನೂ ಆ ಚಿತ್ರ ಹೊಂದಿದ್ದರೂ ಕೂಡ ಆ ಚಿತ್ರ ಸೋಲು ಕಂಡಿತ್ತು. ಅಲ್ಲದೇ, ನಿರೀಕ್ಷಿಸಿದ್ದ ಮನರಂಜನೆ ಆ ಚಿತ್ರದಿಂದ ಅಭಿಮಾನಿಗಳಿಗೆ ಸಿಗಲಿಲ್ಲ. ಆದ್ದರಿಂದಲೇ ಪ್ರಭಾಸ್ ನಿರ್ದೇಶನದ ಮುಂದಿನ ಚಿತ್ರಗಳಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸದ್ಯ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ರೊಮ್ಯಾಂಟಿಕ್ ಡ್ರಾಮಾ ‘ರಾಧೆ ಶ್ಯಾಮ್’ ಎಲ್ಲಾ ಕೆಲಸಗಳನ್ನು ಪೂರೈಸಿ ಬಿಡುಗಡೆಗೆ ಸಜ್ಜಾಗಿದೆ. ಬಹು ನಿರೀಕ್ಷಿತ ಚಿತ್ರಗಳಾದ ‘ಆದಿ ಪುರುಷ್’ ಹಾಗೂ ‘ಸಲಾರ್’ ಚಿತ್ರೀಕರಣದ ಹಂತದಲ್ಲಿವೆ. ಒಟ್ಟಿನಲ್ಲಿ ಈ ಚಿತ್ರಗಳೆಲ್ಲವೂ ಇನ್ನೊಂದು ವರ್ಷದ ಒಳಗೆ ಪೂರ್ಣವಾಗಲಿದ್ದು, ಅಭಿಮಾನಿಗಳಿಗೆ ಸಾಲು ಸಾಲು ಪ್ರಭಾಸ್ ಚಿತ್ರ ನೋಡುವ ಭಾಗ್ಯ ಸಿಗೋದಂತೂ ಪಕ್ಕಾ ಆಗಿದೆ.

ಸಂಕ್ರಾಂತಿಗೆ ‘ರಾಧೆ ಶ್ಯಾಮ್’ ಚಿತ್ರ ತೆರೆಗೆ ಬರಲಿದ್ದರೆ, ‘ಆದಿ ಪುರುಷ್’ ಚಿತ್ರ ಆಗಸ್ಟ್ 11ಕ್ಕೆ ತೆರೆಗೆ ಬರಲಿದೆ. ಸಲಾರ್ ಚಿತ್ರ 2022ರ ಅಂತ್ಯದೊಳಗೆ ತೆರೆಗೆ ಬರುವ ನಿರೀಕ್ಷೆ ಇದೆ. ಈ ಮೊದಲು ಸಲಾರ್ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಇದೀಗ ಆ ದಿನಾಂಕದಲ್ಲಿ ಕೆಜಿಎಫ್ 2 ಬಿಡುಗಡೆಯಾಗಲಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಬೆಡಗಿಗೆ ‘ಸಲಾರ್​’ ಚಿತ್ರದಲ್ಲಿ ಪ್ರಶಾಂತ್​ ನೀಲ್​ ಚಾನ್ಸ್​ ಕೊಟ್ಟಿದ್ದು ನಿಜವೇ? ಇಲ್ಲಿದೆ ಅಸಲಿಯತ್ತು

Kareena Kapoor: ಕರಣ್ ಜೋಹರ್, ಕರಿಷ್ಮಾ ಮೊದಲಾದವರಿಗೆ ಮನೆಯಲ್ಲಿಯೇ ಭರ್ಜರಿ ಪಾರ್ಟಿ ನೀಡಿದ ಕರೀನಾ; ಏನು ವಿಶೇಷ?

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ಗೆ ಸವಾಲು ಹಾಕಿದ ಪ್ರಭಾಸ್​; ಗೆಲ್ಲೋರು ಯಾರು?

(Prabhas starring 3 movies may release in next year)

Published on: Sep 28, 2021 09:57 AM