AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ಗೆ ಸವಾಲು ಹಾಕಿದ ಪ್ರಭಾಸ್​; ಗೆಲ್ಲೋರು ಯಾರು?

ಹಬ್ಬ ಹಾಗೂ ವಿಶೇಷ ದಿನಗಳಂದು ಸ್ಟಾರ್​ ಸಿನಿಮಾಗಳು ತೆರೆಗೆ ಬರುತ್ತವೆ. ಸ್ವಾತಂತ್ರ್ಯ ದಿನಾಚರಣೆ, ದೀಪಾವಳಿ, ಗಣೇಶ ಚತುರ್ಥಿ, ದೀಪಾವಳಿ, ಕ್ರಿಸ್​​ಮಸ್​ ಸಂದರ್ಭದಲ್ಲಿ ಸ್ಟಾರ್​ ನಟರು ಸಿನಿಮಾ ರಿಲೀಸ್​ ಮಾಡೋಕೆ ಹೆಚ್ಚು ಒತ್ತು ನೀಡುತ್ತಾರೆ.

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ಗೆ ಸವಾಲು ಹಾಕಿದ ಪ್ರಭಾಸ್​; ಗೆಲ್ಲೋರು ಯಾರು?
ಬಾಲಿವುಡ್​ ನಟ ಅಕ್ಷಯ್​ ಕುಮಾರ್​ಗೆ ಸವಾಲು ಹಾಕಿದ ಪ್ರಭಾಸ್​; ಗೆಲ್ಲೋರು ಯಾರು?
TV9 Web
| Edited By: |

Updated on:Sep 27, 2021 | 6:55 PM

Share

ಕೊವಿಡ್​ ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆ ಚಿತ್ರರಂಗದಲ್ಲಿ ಸಿನಿಮಾ ಕೆಲಸಗಳು ಗರಿಗೆದರಿವೆ. ಈಗ ಹೌಸ್​​ಫುಲ್​ಗೆ ಸರ್ಕಾರ ಅವಕಾಶ ನೀಡುತ್ತಿದ್ದು, ಇದರಿಂದ ದೊಡ್ಡ ಸಿನಿಮಾಗಳು ರಿಲೀಸ್​ಗೆ ರೆಡಿ ಆಗುತ್ತಿವೆ. ಅದೇ ರೀತಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ಗೆ ದಕ್ಷಿಣ ಭಾರತದ ನಟ ಪ್ರಭಾಸ್​ ಸವಾಲು ಹಾಕಿದ್ದಾರೆ. ಈ ಸವಾಲಿನಲ್ಲಿ ಗೆಲ್ಲೋದು ಯಾರು ಅನ್ನೋದು ಸದ್ಯದ ಕುತೂಹಲ.

ಹಬ್ಬ ಹಾಗೂ ವಿಶೇಷ ದಿನಗಳಂದು ಸ್ಟಾರ್​ ಸಿನಿಮಾಗಳು ತೆರೆಗೆ ಬರುತ್ತವೆ. ಸ್ವಾತಂತ್ರ್ಯ ದಿನಾಚರಣೆ, ದೀಪಾವಳಿ, ಗಣೇಶ ಚತುರ್ಥಿ, ದೀಪಾವಳಿ, ಕ್ರಿಸ್​​ಮಸ್​ ಸಂದರ್ಭದಲ್ಲಿ ಸ್ಟಾರ್​ ನಟರು ಸಿನಿಮಾ ರಿಲೀಸ್​ ಮಾಡೋಕೆ ಹೆಚ್ಚು ಒತ್ತು ನೀಡುತ್ತಾರೆ. ಈಗ ಆಗಿದ್ದೂ ಅದೇ. 2022ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಭಾಸ್​ ಮತ್ತು ಅಕ್ಷಯ್​ ಕುಮಾರ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಇದರಿಂದ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಏರ್ಪಡೋದು ಪಕ್ಕಾ ಎನ್ನಲಾಗುತ್ತಿದೆ.

ಪ್ರಭಾಸ್​ ನಟನೆಯ ಆದಿಪುರುಷ್​ ಚಿತ್ರದ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗೆ ಕಾರಣ ಹಲವು. ಖ್ಯಾತ ನಿರ್ದೇಶಕ ಓಂ ರಾವುತ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರಾಮನಾಗಿ ಪ್ರಭಾಸ್​ ಕಾಣಿಸಿಕೊಂಡರೆ, ರಾವಣನ ಪಾತ್ರಕ್ಕೆ ಸೈಫ್​ ಅಲಿ ಖಾನ್​ ಬಣ್ಣ ಹಚ್ಚುತ್ತಿದ್ದಾರೆ. ಈಗ ಈ ಸಿನಿಮಾ ರಿಲೀಸ್​ ದಿನಾಂಕ ಘೋಷಣೆ ಮಾಡಿದೆ. ಈ ಸಿನಿಮಾ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 11ಕ್ಕೆ ತೆರೆಗೆ ಬರುತ್ತಿದೆ.

ಅಕ್ಷಯ್​ ಕುಮಾರ್​ ನಟನೆಯ ‘ರಕ್ಷಾಬಂಧನ್​’ ಕೂಡ ಆಗಸ್ಟ್​ 11ಕ್ಕೆ ರಿಲೀಸ್​ ಆಗುತ್ತಿದೆ. ಹೆಸರೇ ಹೇಳುವಂತೆ ಇದು ಅಣ್ಣ-ತಂಗಿ ಸಂಬಂಧವನ್ನು ವಿವರಿಸುವ ಕಥೆ. 2022ರ ಆಗಸ್ಟ್​ 11 ರಕ್ಷಾಬಂಧನ. ಈ ಕಾರಣಕ್ಕೆ, ಅಕ್ಷಯ್​ ಸಿನಿಮಾ ಇದೇ ಡೇಟ್​ಗೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಹಾಗಾಗಿ, ಇಬ್ಬರ ನಡುವೆ ದೊಡ್ಡ ಫೈಟ್​ ಏರ್ಪಡುವ ನಿರೀಕ್ಷೆ ಇದೆ. ಎರಡೂ ಸಿನಿಮಾಗಾಗಿ ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ‘ರಾಧೆ ಶ್ಯಾಮ್’ ಸೆಟ್​ನಲ್ಲಿ ಪೂಜಾ ಹೆಗ್ಡೆ ನಡವಳಿಕೆಯಿಂದ ಪ್ರಭಾಸ್​ ಕಿರಿಕಿರಿಗೊಂಡಿದ್ದರೇ?; ಸುದ್ದಿಯ ಅಸಲಿಯತ್ತು ಇಲ್ಲಿದೆ

ಪ್ರಭಾಸ್​-ಪೂಜಾ ಹೆಗ್ಡೆ ಬಗ್ಗೆ ಕೇಳಿ ಬರುತ್ತಿದೆ ಹೊಸ ಗಾಸಿಪ್​; ಸ್ಪಷ್ಟನೆ ಕೊಟ್ಟರೂ ನಂಬುತ್ತಿಲ್ಲ ಫ್ಯಾನ್ಸ್​

Published On - 6:54 pm, Mon, 27 September 21

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ