AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​-ಪೂಜಾ ಹೆಗ್ಡೆ ಬಗ್ಗೆ ಕೇಳಿ ಬರುತ್ತಿದೆ ಹೊಸ ಗಾಸಿಪ್​; ಸ್ಪಷ್ಟನೆ ಕೊಟ್ಟರೂ ನಂಬುತ್ತಿಲ್ಲ ಫ್ಯಾನ್ಸ್​

ಪ್ರಭಾಸ್​ ದೊಡ್ಡ ಹೀರೋ. ಆದಾಗ್ಯೂ ಅವರು ಸೆಟ್​ನಲ್ಲಿ ಸಾಮಾನ್ಯರಂತೆ ನಡೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಆದರೆ, ಪೂಜಾ ಹೆಗ್ಡೆ ಆ ರೀತಿ ನಡೆದುಕೊಳ್ಳುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು.

ಪ್ರಭಾಸ್​-ಪೂಜಾ ಹೆಗ್ಡೆ ಬಗ್ಗೆ ಕೇಳಿ ಬರುತ್ತಿದೆ ಹೊಸ ಗಾಸಿಪ್​; ಸ್ಪಷ್ಟನೆ ಕೊಟ್ಟರೂ ನಂಬುತ್ತಿಲ್ಲ ಫ್ಯಾನ್ಸ್​
ಪ್ರಭಾಸ್​-ಪೂಜಾ ಹೆಗ್ಡೆ ಬಗ್ಗೆ ಕೇಳಿ ಬರುತ್ತಿದೆ ಹೊಸ ಗಾಸಿಪ್​; ಸ್ಪಷ್ಟನೆ ಕೊಟ್ಟರೂ ನಂಬುತ್ತಿಲ್ಲ ಫ್ಯಾನ್ಸ್​
TV9 Web
| Edited By: |

Updated on: Sep 22, 2021 | 9:01 PM

Share

ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್​’ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ರೊಮ್ಯಾಂಟಿಕ್​ ಕಥೆ ಹೊಂದಿರುವ ಸಿನಿಮಾ ಇದಾಗಿದ್ದು, ಪ್ರಭಾಸ್​ ಲವರ್​ ಬಾಯ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪೋಸ್ಟರ್​ ಹಾಗೂ ಟೀಸರ್​ಗಳು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿವೆ. ಈ ಮಧ್ಯೆ ಟಾಲಿವುಡ್​ ಅಂಗಳದಿಂದ ಹಾಟ್​ ಗಾಸಿಪ್​ ಒಂದು ಕೇಳಿಬಂದಿತ್ತು. ಈ ಬಗ್ಗೆ ‘ರಾಧೆ ಶ್ಯಾಮ್​’ ನಿರ್ಮಾಣ ಮಾಡುತ್ತಿರುವ ಯುವಿ ಕ್ರಿಯೇಷನ್ಸ್ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟನೆಯನ್ನೂ ನೀಡಿತ್ತು. ಆದಾಗ್ಯೂ ಅಭಿಮಾನಿಗಳು ಇದನ್ನು ನಂಬೋಕೆ ರೆಡಿ ಇಲ್ಲ.

ಪೂಜಾ ಹೆಗ್ಡೆ ಸೆಟ್​ನಲ್ಲಿ ಸಾಕಷ್ಟು ಆ್ಯಟಿಟ್ಯೂಡ್​ ತೋರಿಸುತ್ತಿದ್ದಾರೆ. ಇದು ಪ್ರಭಾಸ್​ಗೆ ಇಷ್ಟವಾಗುತ್ತಿಲ್ಲ ಎನ್ನಲಾಗಿತ್ತು. ಪ್ರಭಾಸ್​ ದೊಡ್ಡ ಹೀರೋ. ಆದಾಗ್ಯೂ ಅವರು ಸೆಟ್​ನಲ್ಲಿ ಸಾಮಾನ್ಯರಂತೆ ನಡೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಆದರೆ, ಪೂಜಾ ಹೆಗ್ಡೆ ಆ ರೀತಿ ನಡೆದುಕೊಳ್ಳುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಪೂಜಾ ಸೆಟ್​ನಲ್ಲಿ ಗತ್ತು ತೋರಿಸುತ್ತಿದ್ದಾರೆ. ಇದು ಪ್ರಭಾಸ್​ಗೆ ಇಷ್ಟವಾಗುತ್ತಿಲ್ಲ. ಹೀಗಾಗಿ, ಪೂಜಾ ಜತೆ ಒಟ್ಟಿಗೆ ಕಾಣಿಸಿಕೊಳ್ಳೋಕೆ ಅವರು ನೋ ಎಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

‘ರಾಧೆ ಶ್ಯಾಮ್​’ ಸಿನಿಮಾ ಶೂಟಿಂಗ್​ ಕೊನೆಯ ಹಂತಕ್ಕೆ ಬಂದಿದೆ. ಕೆಲವೇ ದೃಶ್ಯಗಳ ಶೂಟಿಂಗ್​ ಬಾಕಿ ಇದೆ. ಪ್ರಭಾಸ್​ ಹಾಗೂ ಪೂಜಾ ಒಟ್ಟಾಗಿ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಪೂಜಾ ಜತೆ ನಟಿಸೋಕೆ ಪ್ರಭಾಸ್​ ನೋ ಎಂದಿದ್ದಾರೆ. ಈ ಕಾರಣಕ್ಕೆ ಇಬ್ಬರನ್ನು ಪ್ರತ್ಯೇಕವಾಗಿ ನಿಲ್ಲಿಸಿ ಶೂಟ್​ ಮಾಡಲಾಗಿದೆ ಎಂದಿದ್ದರು ಗಾಸಿಪ್​ ಮಂದಿ. ಇದಕ್ಕೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿದೆ. ಆದರೆ, ಅಭಿಮಾನಿಗಳು ಸ್ಪಷ್ಟನೆ ಕೇಳೋಕೆ ರೆಡಿ ಇಲ್ಲ.

ಪೂಜಾ ಹೆಗ್ಡೆ ವಿರುದ್ಧ ಈ ರೀತಿಯ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಕೂಡ ಕೆಲವರು ಇದೇ ಮಾದರಿಯ ಆರೋಪ ಮಾಡಿದ್ದರು. ಪೂಜಾ ನಿರ್ಮಾಪಕರಿಗೆ ಹೊರೆಯಾಗುತ್ತಿದ್ದಾರೆ. 11ಕ್ಕೂ ಹೆಚ್ಚು ಸಹಾಯಕರ ಜತೆ ಸೆಟ್​ಗೆ ಬರುತ್ತಾರೆ. ಇದರಿಂದ ನಿರ್ಮಾಪಕರಿಗೆ ಅವರು ಹೊರೆ ಆಗುತ್ತಿದ್ದಾರೆ ಎಂದು ವರದಿ ಆಗಿತ್ತು. ಈಗ ಬಂದಿರುವ ವರದಿಯಲ್ಲೂ ನಿಜವಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಈ ರೀತಿ ಆ್ಯಟಿಟ್ಯೂಡ್​ ತೋರಿಸಿ ಇಂಡಸ್ಟ್ರಿಯಲ್ಲಿ​ ಉಳಿದಕೊಂಡವರ ಸಂಖ್ಯೆ ತುಂಬಾನೇ ಕಡಿಮೆ. ಈ ಮೊದಲು ಆರತಿ ಅಗರ್​ವಾಲ್​, ಇಲಿಯಾನಾ ಸೆಟ್​ನಲ್ಲಿ ತುಂಬಾನೇ ಆ್ಯಟಿಟೂಡ್​ ತೋರಿಸಿದ್ದರು. ಇದರಿಂದ ಅವರಿಗೆ ಆಫರ್​ಗಳು ಕಡಿಮೆ ಆಗಿದ್ದವು. ಪೂಜಾ ಬೇಡಿಕೆಯ ನಟಿ ಅನ್ನೋದು ನಿಜ. ಆದರೆ, ಈ ರೀತಿ ಆದರೆ ಯಾವ ನಿರ್ಮಾಪಕರೂ ಅವರನ್ನು ಸಿನಿಮಾಗೆ ಹಾಕಿಕೊಳ್ಳೋಕೆ ಇಷ್ಟಪಡುವುದಿಲ್ಲ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ತಕ್ಷಣಕ್ಕೆ ಕಠಿಣದಲ್ಲೇ ಕಠಿಣ ಶಿಕ್ಷೆ ನೀಡಬೇಕು; ನಟಿ ಪೂಜಾ ಗಾಂಧಿ ಆಗ್ರಹ

ರಶ್ಮಿಕಾ ಮಂದಣ್ಣ ಹಿಂದಿಕ್ಕಿದ ಪೂಜಾ ಹೆಗ್ಡೆ; ಕೊಡಗಿನ ಬೆಡಗಿಗೆ ಕಡಿಮೆ ಆಯ್ತಾ ಬೇಡಿಕೆ?

Follow Us
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ