ರಶ್ಮಿಕಾ ಮಂದಣ್ಣ ಹಿಂದಿಕ್ಕಿದ ಪೂಜಾ ಹೆಗ್ಡೆ; ಕೊಡಗಿನ ಬೆಡಗಿಗೆ ಕಡಿಮೆ ಆಯ್ತಾ ಬೇಡಿಕೆ?

ಪೂಜಾ ಹೆಗ್ಡೆ 2012ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಆದರೆ, ಇವರ ವೃತ್ತಿಜೀವನಕ್ಕೆ ಮೈಲೇಜ್​ ಸಿಕ್ಕಿದ್ದು 2016ರ ಸಮಯದಲ್ಲಿ. ಇನ್ನು ರಶ್ಮಿಕಾ ಮಂದಣ್ಣ ವೃತ್ತಿ ಜೀವನ ಆರಂಭಿಸಿದ್ದು ಅದೇ ವರ್ಷ.

ರಶ್ಮಿಕಾ ಮಂದಣ್ಣ ಹಿಂದಿಕ್ಕಿದ ಪೂಜಾ ಹೆಗ್ಡೆ; ಕೊಡಗಿನ ಬೆಡಗಿಗೆ ಕಡಿಮೆ ಆಯ್ತಾ ಬೇಡಿಕೆ?

ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಒಂದೇ ತೆರನಾದ ಬೇಡಿಕೆ ಹೊಂದಿದ್ದಾರೆ. ಸಿನಿಮಾ ವಿಚಾರದಲ್ಲಿ ಇವರ ಮಧ್ಯೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ನಿರ್ಮಾಪಕರಿಗೆ ಸಾಕಷ್ಟು ಬಾರಿ ಮೂಡಿದ್ದಿದೆ. ಈಗ ರಶ್ಮಿಕಾ ಅವರನ್ನು ಪೂಜಾ ಹೆಗ್ಡೆ ಹಿಂದಿಕ್ಕಿದ್ದಾರೆ. ಹೀಗಾಗಿ, ರಶ್ಮಿಕಾಗೆ ಬೇಡಿಕೆ ಕಡಿಮೆ ಆಗುತ್ತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಪೂಜಾ ಹೆಗ್ಡೆ 2012ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಆದರೆ, ಇವರ ವೃತ್ತಿಜೀವನಕ್ಕೆ ಮೈಲೇಜ್​ ಸಿಕ್ಕಿದ್ದು 2016ರ ಸಮಯದಲ್ಲಿ. ಇನ್ನು ರಶ್ಮಿಕಾ ಮಂದಣ್ಣ ವೃತ್ತಿ ಜೀವನ ಆರಂಭಿಸಿದ್ದು ಅದೇ ವರ್ಷ. ಮೊದಲ ಸಿನಿಮಾದಲ್ಲೇ ಸಾಕಷ್ಟು ಖ್ಯಾತಿ ಗಳಿಸಿಕೊಂಡ ಅವರು ಹಲವು ಆಫರ್​ ಗಿಟ್ಟಿಸಿಕೊಂಡರು. ಇತ್ತೀಚಿನ ವರ್ಷಗಳಲ್ಲಿ ಟಾಲಿವುಡ್​ ಸ್ಟಾರ್​ ನಟರಿಗೆ ನಾಯಕಿಯರ ಆಯ್ಕೆ ಮಾಡಿಕೊಳ್ಳುವಾಗ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ಈಗ ಪವನ್​ ಕಲ್ಯಾಣ್​ ಮುಂಬರುವ ಸಿನಿಮಾ ‘ಭವದಿಯುಡು ಭಗತ್​ ಸಿಂಗ್​’ಗೆ ಹರೀಶ್​ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ಅಥವಾ ರಶ್ಮಿಕಾ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಚಿತ್ರತಂಡದ ಆಲೋಚನೆ ಆಗಿತ್ತು. ಅಂತಿಮವಾಗಿ ಪೂಜಾ ಹೆಗ್ಡೆ ಪವನ್​ ಕಲ್ಯಾಣ್​ಗೆ ನಾಯಕಿ ಆಗಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್​ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಅವರ ಬಳಿ ರಶ್ಮಿಕಾ ಕಾಲ್​ಶೀಟ್​​ ಕೂಡ ಇತ್ತು. ಆದರೆ, ಹರೀಶ್​ ಶಂಕರ್​ ಅವರು ಪೂಜಾ ಹೆಗ್ಡೆ ಚಿತ್ರದ ನಟಿ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ‘ಡಿಜೆ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಹಾಗೂ ಹರೀಶ್​ ಒಟ್ಟಾಗಿ ಕೆಲಸ ಮಾಡಿದ್ದರು. ಈ ಕಾರಣಕ್ಕೆ ಪೂಜಾ ಹೆಗ್ಡೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ ಹರೀಶ್​ ಶಂಕರ್.

ಈ ಮಧ್ಯೆ ರಶ್ಮಿಕಾ ಬೇಡಿಕೆ ಕಳೆದುಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡೋಕೆ ಆರಂಭವಾಗಿದೆ. ಒಂದು ಹಂತ ದಾಟಿದ ನಂತರ ನಟಿಯರಿಗೆ ಇರುವ ಬೇಡಿಕೆ ಕುಗುತ್ತದೆ. ರಶ್ಮಿಕಾ ಚಿತ್ರರಂಗದಲ್ಲಿ ಈಗಾಗಲೇ ಐದು ವರ್ಷ ಯಶಸ್ವಿಯಾಗಿ ಕಳೆದಿದ್ದಾರೆ. ಸಾಕಷ್ಟು ಸ್ಟಾರ್​ಗಳ ಜತೆ ತೆರೆ ಹಂಚಿಕೊಂಡಿದ್ದಾರೆ. ಈಗ ನಿಧಾನವಾಗಿ ರಶ್ಮಿಕಾಗೆ ಬೇಡಿಕೆ ಕಡಿಮೆ ಆಗುತ್ತಿದೆ ಎನ್ನುವ ಮಾತು ಕೇಳಿಬಂದಿದೆ. ಆದರೆ, ಅನೇಕರು ಇದನ್ನು ಒಪ್ಪಿಕೊಳ್ಳುತ್ತಿಲ್ಲ.

ಇದನ್ನೂ ಓದಿ: ‘ನನ್ನ ಜೊತೆ ಮನೆಯಲ್ಲೇ ಇರು’ ಎಂದು ರಶ್ಮಿಕಾಗೆ ಒತ್ತಾಯ; ಹೀಗಾದರೆ ಕೆಲಸ ಮಾಡೋದು ಹೇಗೆ?

ರಶ್ಮಿಕಾ ಮಂದಣ್ಣಗೆ ಪೈಪೋಟಿ ನೀಡಲು ಬಂದಿರುವ ಕನ್ನಡತಿ ಕೃತಿ ಶೆಟ್ಟಿಗೆ ಪರಭಾಷೆಯಲ್ಲಿ ಫುಲ್​ ಡಿಮ್ಯಾಂಡ್​​

Read Full Article

Click on your DTH Provider to Add TV9 Kannada