ರವಿಚಂದ್ರನ್ ತಾಯಿ ಬಗ್ಗೆ ಡಾಕ್ಟರ್​ ಹೇಳಿದ್ದೇ ಸುಳ್ಳಾಯ್ತು; ಅಮ್ಮನನ್ನು ಬದುಕಿಸಿದ ಆ ಶಕ್ತಿ ಯಾವುದು?

ಕಳೆದ ಹತ್ತು ವರ್ಷದಿಂದಲೂ ರವಿಚಂದ್ರನ್​ ಅವರ ತಾಯಿಗೆ ಅನಾರೋಗ್ಯ ಕಾಡುತ್ತಿದೆ. ಕುಟುಂಬದ ಸದಸ್ಯರೆಲ್ಲರೂ ಅವರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.

‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಅವರಿಗೆ ತಂದೆ-ತಾಯಿ ಬಗ್ಗೆ ಅಪಾರ ಪ್ರೀತಿ. ಅವರ ತಾಯಿ ಪಟ್ಟಮ್ಮಾಳ್​ ಅವರಿಗೆ ಅನೇಕ ವರ್ಷಗಳಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹತ್ತು ವರ್ಷಗಳ ಹಿಂದೆಯೇ ಆ ಬಗ್ಗೆ ವೈದ್ಯರು ಒಂದು ಮಾತು ಹೇಳಿದ್ದರು. ಹೆಚ್ಚೆಂದರೆ ನಿಮ್ಮ ತಾಯಿ ಇನ್ನೊಂದು ವರ್ಷ ಬದುಕಬಹುದು ಎಂದಿದ್ದರು. ಆದರೆ ಇಂದಿಗೂ ಪಟ್ಟಮ್ಮಾಳ್​ ಅವರು ಮಗ-ಸೊಸೆ ಮತ್ತು ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಹಾಗಾದರೆ ಅವರನ್ನು ಇಷ್ಟು ವರ್ಷ ಬದುಕಿಸಿದ ಆ ಶಕ್ತಿ ಯಾವುದು? ‘ನಮ್ಮೆಲ್ಲರ ಪ್ರೀತಿ’ ಎನ್ನುತ್ತಾರೆ ರವಿಚಂದ್ರನ್​.

‘ಅಮ್ಮನಿಗೆ ಅಲ್ಜಮೈರ್​ ಆಗಿದೆ. ಎಲ್ಲರನ್ನೂ ಆಗಾಗ ಮರೆಯುತ್ತಾರೆ. ಆದರೆ ಯಾರನ್ನು ಮರೆತರೂ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಅವರು ಮರೆತಿಲ್ಲ. ನಮ್ಮ ಮನೆಯವರ ಪ್ರೀತಿಯಿಂದಾಗಿ ತಾಯಿ ಇನ್ನೂ ಉಳಿದುಕೊಂಡಿದ್ದಾರೆ. ನನ್ನ ಹೆಂಡತಿಯೇ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು. ಅವಳಿಗೆ ಹ್ಯಾಟ್ಸ್​ ಆಫ್​ ಹೇಳಬೇಕು. ಎಲ್ಲವನ್ನೂ ಹಾಸಿಗೆಯಲ್ಲೇ ಮಾಡಿಕೊಳ್ಳುವ ಅಮ್ಮನನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ನನ್ನ ಹೆಂಡತಿ ಒಂದು ದಿನವೂ ಬೇಸರ ಮಾಡಿಕೊಂಡಿಲ್ಲ’ ಎಂದು ರವಿಚಂದ್ರನ್​ ಹೇಳಿದ್ದಾರೆ.

ಇದನ್ನೂ ಓದಿ:

ಇಷ್ಟು ವರ್ಷಗಳ ಬಳಿಕ ಹೆಸರು ಬದಲಿಸಿಕೊಳ್ಳಲು ರವಿಚಂದ್ರನ್​ ನಿರ್ಧಾರ; ಹೊಸ ಹೆಸರು ಏನು?

ರವಿಚಂದ್ರನ್​ ತಂದೆ ಅಂದು ಮಾಡಿದ್ದ ಸಹಾಯವನ್ನು ಖುಷ್ಬೂ ಇನ್ನೂ ಮರೆತಿಲ್ಲ; ‘ಕ್ರೇಜಿ ಸ್ಟಾರ್’​ ಹೇಳ್ತಾರೆ ಕೇಳಿ..

Click on your DTH Provider to Add TV9 Kannada