ಇಷ್ಟು ವರ್ಷಗಳ ಬಳಿಕ ಹೆಸರು ಬದಲಿಸಿಕೊಳ್ಳಲು ರವಿಚಂದ್ರನ್​ ನಿರ್ಧಾರ; ಹೊಸ ಹೆಸರು ಏನು?

ಚಿತ್ರರಂಗಕ್ಕೆ ಹೊಸದಾಗಿ ಬರುವವರು ಹೆಸರು ಬದಲಾವಣೆ ಮಾಡಿಕೊಳ್ಳುವುದು ಸಹಜ. ಆದರೆ ಇಷ್ಟು ವರ್ಷಗಳ ಬಳಿಕ ಈಗ ರವಿಚಂದ್ರನ್​ ಯಾಕೆ ಹೆಸರು ಬದಲಾಯಿಸಿಕೊಳ್ಳುತ್ತಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ..

ರವಿಚಂದ್ರನ್​ ಎಂಬ ಒಂದೇ ಒಂದು ಹೆಸರಿಗೆ ದೊಡ್ಡ ಶಕ್ತಿ ಇದೆ. ಚಿತ್ರರಂಗದಲ್ಲಿ ಹಲವು ದಶಕಗಳಿಂದ ಪಟ್ಟ ಶ್ರಮದಿಂದಾಗಿ ಅವರ ಹೆಸರಿಗೆ ಶಕ್ತಿ ಬಂದಿದೆ. ಆದರೆ ಈಗ ಅವರು ಆ ಹೆಸರನ್ನೇ ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಗಾಸಿಪ್​ ಅಲ್ಲವೇ ಅಲ್ಲ. ಟಿವಿ9 ಜೊತೆಗಿನ ಸಂದರ್ಶನದಲ್ಲಿ ಸ್ವತಃ ರವಿಚಂದ್ರನ್​ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್​ ಬದಲಿಗೆ ರವಿಚಂದ್ರ ವಿ. ಎಂದು ಬದಲಿಸಿಕೊಳ್ಳುವಂತೆ ಅವರಿಗೆ ಜ್ಯೋತಿಷಿಯೊಬ್ಬರಿಂದ ಸಲಹೆ ಸಿಕ್ಕಿದೆ!

‘ಹೊಸದಾಗಿ ಒಬ್ಬರು ಜ್ಯೋತಿಷಿ ಬಂದರು. ಒಂದೇ ಒಂದು ಅಕ್ಷರವನ್ನು ಹಿಂದೆ-ಮುಂದೆ ಮಾಡಿಕೊಳ್ಳುತ್ತೀರಾ ಎಂದು ಕೇಳಿದರು. ಯಾಕೆ ಎಂದೆ. ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದರು. ಆದರೆ ಎಲ್ಲರೂ ನನ್ನನ್ನು ರವಿಚಂದ್ರನ್​ ಅಂತಾನೇ ಕರೆಯುವುದು. ಈಗ ಯಾರು ಹೊಸದಾಗಿ ರವಿಚಂದ್ರ ವಿ. ಅಂತ ಕರೀತಾರೆ? ಯಾರೂ ಕರೆಯುವುದಿಲ್ಲ ಎಂದಮೇಲೆ ಏನು ಪ್ರಯೋಜನ? ಇತ್ಯಾದಿ ಪ್ರಶ್ನೆ ನನ್ನದು. ಅವರು ನನ್ನಿಂದ ಹಣ ನಿರೀಕ್ಷಿಸಿಲ್ಲ. ಪ್ರೀತಿಯಿಂದ ಬಂದು ಹೇಳಿದರು. ಸರಿ ಎಂದೆ. ಈಗ ಅವರು ರವಿಚಂದ್ರ ವಿ. ಅಂತ ಹೆಸರು ಬದಲಾಯಿಸಿದ್ದಾರೆ’ ಎಂದು ಕ್ರೇಜಿ ಸ್ಟಾರ್​ ಹೇಳಿದ್ದಾರೆ.

ಇದನ್ನೂ ಓದಿ:

‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

‘ಪ್ರೇಮಲೋಕ’ ಚಿತ್ರಕ್ಕೆ ಜೂಹಿ ಚಾವ್ಲಾ ಆಯ್ಕೆ ಆಗಿದ್ದು ಹೇಗೆ? ರವಿಚಂದ್ರನ್​ ತೆರೆದಿಟ್ಟ ರೆಟ್ರೋ ಸ್ಟೋರಿ

Click on your DTH Provider to Add TV9 Kannada