ಮಾಡುತ್ತೇವೆ ಅಂತ ಹೇಳಿದ್ದನ್ನೇ ಮಾಡದ ನಾವು ಹೇಳದೆ ಮಾಡುವ ಓಲಾ ಸಂಸ್ಥೆ ಮಾಲೀಕ ಭಾವಿಶ್​​ರಿಂದ ಬಹಳಷ್ಟು ಕಲಿಯಬೇಕಿದೆ!

ಮಾಡುತ್ತೇವೆ ಅಂತ ಹೇಳಿದ್ದನ್ನೇ ಮಾಡದ ನಾವು ಹೇಳದೆ ಮಾಡುವ ಓಲಾ ಸಂಸ್ಥೆ ಮಾಲೀಕ ಭಾವಿಶ್​​ರಿಂದ ಬಹಳಷ್ಟು ಕಲಿಯಬೇಕಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 16, 2021 | 9:23 PM

ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಆತ್ಮನಿರ್ಭರ ಮಹಿಳೆಯರ ಅವಶ್ಯಕತೆಯಿದೆ. 10,000 ಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿರುವ ವಿಶ್ವದ ಏಕೈಕ ಸಂಸ್ಥೆ ಒಲಾ ಫ್ಯೂಚರ್ ಫ್ಯಾಕ್ಟರಿ ಆಗಿದೆ ಎಂದು ಭಾವಿಶ್ ಹೇಳಿದ್ದಾರೆ.

ಬೆಂಗಳೂರು ಮೂಲದ ಓಲಾ ಕಂಪನಿಯ ಮಾಲೀಕ ಭಾವಿಶ್ ಅಗರ್ವಾಲ್ ಬಹಳ ಕ್ರಿಯಾಶೀಲ ಮತ್ತು ಸೃಜನಶೀಲ ವ್ಯಕ್ತಿ ಅಂತ ಬಹಳಷ್ಟು ಜನರಿಗೆ ಗೊತ್ತಿರಲಾರದು. ನಮ್ಮಲ್ಲಿ ಒಂದು ಬಗೆಯ ಉದ್ಯಮಿ-ವಿರೋಧಿ ಧೋರಣೆ ಮನೆ ಮಾಡಿದೆ. ದೇಶದ ದೊಡ್ಡ ದೊಡ್ಡ ಉದ್ಯಮಿಗಳ ಸಾಹಸಗಳನ್ನು, ಸಾಧನೆಗಳನ್ನು ಗೌರವಿಸುದಕ್ಕಿಂತ ಅಸಡ್ಡೆ ಮಾಡುವ ಗುಣ ಬಹಳಷ್ಟು ಜನರಲ್ಲಿ ಇನ್ ಬಿಲ್ಟ್ ಆಗಿರುತ್ತದೆ. ಪ್ರಾಯಶಃ ಅವರಲ್ಲಿರುವ ಸಂಪತ್ತು, ಮಾಧ್ಯಮಗಳಲ್ಲಿ ಅವರಿಗೆ ಸಿಗುವ ಆದರ-ಮನ್ನಣೆ ನಮ್ಮನ್ನು ಹಾಗೆ ಮಾಡಲು ಪ್ರೇರೇಪಿಸುತ್ತವೆ. ನಮ್ಮ ರಾಜಕಾರಣಿಗಳನ್ನೇ ನೋಡಿ, ಪ್ರತಿ ಚುನಾವಣೆ ಸಂದರ್ಭದಲ್ಲಿ ಮಹಿಳಾ ಸಮಾನತೆ, ಸಬಲೀಕರಣ, ಮಹಿಳೆಯರಿಗೆ ಮೀಸಲಾತಿ ಮತ್ತು ಅವರ ಹಕ್ಕುಗಳ, ಬಗ್ಗೆ ದೊಡ್ಡದಾಗಿ ಬಾಷಣ ಬಿಗಿಯುತ್ತಾರೆ. ಅಮೇಲೆ ಎಲ್ಲವನ್ನು ಮರೆತುಬಿಡುತ್ತಾರೆ.

ಭಾವಿಶ್ ಇದೇ ಕಾರಣಕ್ಕೆ ನಮಗೆ ಒಬ್ಬ ವಿಭಿನ್ನ ವ್ಯಕ್ತಿ ಮತ್ತು ಉದ್ಯಮಿ ಅನಿಸುತ್ತಾರೆ. ಇತ್ತೀಚಿಗೆ ಅವರು ಇ-ಸ್ಕೂಟರ್ ಲಾಂಚ್ ಮಾಡಿರುವ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಅವರ ಟ್ವೀಟ್​ಗಳೇ ಹೇಳುವಂತೆ ಪ್ರತಿ ಸೆಕೆಂಡ್ ಗೆ 4 ರಂತೆ ಅವರು ಸ್ಕೂಟರ್ಗಳು ಮಾರಾಟ ಆಗುತ್ತಿವೆಯಂತೆ. ಸೆಪ್ಟೆಂಬರ್ 8 ರಂದು ಮಾರ್ಕೆಟ್ಗೆ ಬಿಡುಗಡೆಯಾದ ಓಲಾ ಇ-ಸ್ಕೂಟರ್ಗಳು ಕೇವಲ ಒಂದು ವಾರದ ಅವಧಿಯಲ್ಲಿ ರೂ. 600 ಕೋಟಿಗಳ ವಹಿವಾಟು ನಡೆಸಿವೆ.

ಸರಿ, ವಿಷಯಕ್ಕೆ ಬರೋಣ. ಭಾವಿಶ್ ಚೆನೈಯಲ್ಲಿರುವ ತಮ್ಮ ಸ್ಕೂಟರ್ ಉತ್ಪಾದನಾ ಪ್ಲ್ಯಾಂಟ್ನಲ್ಲಿ ಕೇವಲ ಮಹಿಳೆಯರನ್ನು ಮಾತ್ರ ನೇಮಕ ಮಾಡಿಕೊಂಡಿದ್ದಾರೆ. ಹೌದು, ಸುಮಾರು 10,000 ಮಹಿಳೆಯರು ಅವರ ಓಲಾ ಫ್ಯೂಚರ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದಾರೆ. ಅಲ್ಲಿ ಅವರದ್ದೇ ಕಾರುಬಾರಲ್ಲ ಸ್ಕೂಟರ್​​ಬಾರು!

ಭಾರತೀಯ ಮಹಿಳೆಯರೇ ವಿಶ್ವದಲ್ಲಿ ಇವಿ ಕ್ರಾಂತಿ ಸೃಷ್ಟಿಲಿದ್ದಾರೆ ಎಂದು ಭಾವಿಶ್ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ಅವರು, ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಆತ್ಮನಿರ್ಭರ ಮಹಿಳೆಯರ ಅವಶ್ಯಕತೆಯಿದೆ. 10,000 ಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿರುವ ವಿಶ್ವದ ಏಕೈಕ ಸಂಸ್ಥೆ ಒಲಾ ಫ್ಯೂಚರ್ ಫ್ಯಾಕ್ಟರಿ ಆಗಿದೆ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಆದ್ಯತೆ ನೀಡುವ ಮೂಲಕ ಭಾವಿಶ್ ಅನೇಕ ಉದ್ಯಮಿಗಳಿಗೆ ಮಾದರಿ ಮತ್ತು ಪ್ರೇರಣೆ ಆಗಿದ್ದಾರೆ. ನಮ್ಮ ದೇಶದಲ್ಲಿ ಕಾನೂನು ಸೃಷ್ಟಿಸಿ ಅದನ್ನು ಜಾರಿಗೆ ತರುವವರು ಸಹ ಇವರಿಂದ ಒಂದರೆಡು ಪಾಠಗಳನ್ನು ಕಲಿತರೆ ಚೆನ್ನಾಗಿರುತ್ತದೆ.

ಇದನ್ನೂ ಓದಿ: ಓಲಾ ಇ-ಸ್ಕೂಟರ್​​​ಗಳ ಡೆಲಿವರಿ ಶುರುವಾಗಿದೆ, ಭಾರತ 1,000 ನಗರಗಳಲ್ಲಿ ಸ್ಕೂಟರ್​ಗಳು ಲಭ್ಯ!

Published on: Sep 16, 2021 07:55 PM