ಬರಾಕ್ ಒಬಾಮಾ 2014ರಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇವಲ ಒಂದು ಲೋಟ ನೀರು ಕುಡಿದಿದ್ದರು!

ರಾಜತಾಂತ್ರಿಕ ಶಿಷ್ಟಾಚಾರಗಳಲ್ಲಿ ಇಂಥ ಸನ್ನಿವೇಶಗಳು ಬಹಳ ಅಪರೂಪ. ಅದರೆ, ಅದು ನವರಾತ್ರಿ ಸಮಯವಾಗಿದ್ದರಿಂದ ಪ್ರಧಾನಿ ಮೋದಿಯವರು 9-ದಿನಗಳ ಉಪವಾಸ ವ್ರತವನ್ನು ಆಚರಿಸುತ್ತಿದ್ದರು. ಕಳೆದ 35 ವರ್ಷಗಳಿಂದ ಅವರು ಈ ವ್ರತವನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಬಂದಿದ್ದಾರೆ

ಅದೊಂದು ಕಾಲವಿತ್ತು. ಅಮೇರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಇಂದು ತಮ್ಮ 71 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾ ನೀಡಲು ನಿರಾಕರಿಸುತ್ತಿದ್ದ ಕಾಲ. ಆಗಿನ್ನೂ ಮೋದಿಯವರು ಗುಜರಾತ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಗೋದ್ರಾ ಹತ್ಯಾಕಾಂಡದ ಆರೋಪವನ್ನು ಮೋದಿಯವರ ತಲೆಗೆ ಕಟ್ಟಿ ಅವರು ತಮ್ಮ ದೇಶಕ್ಕೆ ಕಾಲಿಡದಂತೆ ಮಾಡಬೇಕು ಅಂತ ಅಮೆರಿಕ ಅಂದುಕೊಂಡಿತ್ತು.

ಅದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಚಿಕ್ಕಪುಟ್ಟ ಮತ್ತು ವಿಶ್ವದ ದೊಡ್ಡ ಮತ್ತು ಮುಂದುವರಿದ ರಾಷ್ಟ್ರಗಳು ಸಹ ತಾಮುಂದು ನಾಮುಂದು ಅಂತ ಅಮಂತ್ರಣ ನೀಡಿ ನರೇಂದ್ರ ಮೋದಿಯವರಿಗೆ ಕೆಂಪು ರತ್ನಗಂಬಳಿ ಸ್ವಾಗತ
ನೀಡಿದವು. ಆದರೆ, 2014 ಸೆಪ್ಟೆಂಬರ್ 30 ರಂದು ಆಗಿನ ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ಪ್ರಧಾನಿ ಮೋದಿ ಅವರ ಗೌರವಾರ್ಥ ಶ್ವೇತ ಭವನದಲ್ಲಿ ಔತಣಕೂಟವೊಂದನ್ನು (ಡಿನ್ನರ್) ಏರ್ಪಡಿಸಿದ್ದಾಗ, ಮೋದಿಯವರು ಕೇವಲ ಒಂದು ಲೋಟ ನೀರು ಮಾತ್ರ ಸೇವಿಸಿದ್ದರು ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರಲಾರದು.

ಮರುದಿನ, ಅಮೆರಿಕದ ವಿದೇಶಾಂಗ ಇಲಾಖೆ ಆಯೋಜಿಸಿದ ಲಂಚ್ಆನ್​​ನಲ್ಲೂ ಅವರು ಕೇವಲ ನೀರು ಕುಡಿದರು.

ಹಾಗೆ ನೋಡಿದರೆ, ರಾಜತಾಂತ್ರಿಕ ಶಿಷ್ಟಾಚಾರಗಳಲ್ಲಿ ಇಂಥ ಸನ್ನಿವೇಶಗಳು ಬಹಳ ಅಪರೂಪ. ಅದರೆ, ಅದು ನವರಾತ್ರಿ ಸಮಯವಾಗಿದ್ದರಿಂದ ಪ್ರಧಾನಿ ಮೋದಿಯವರು 9-ದಿನಗಳ ಉಪವಾಸ ವ್ರತವನ್ನು ಆಚರಿಸುತ್ತಿದ್ದರು. ಕಳೆದ 41 ವರ್ಷಗಳಿಂದ ಅವರು ಈ ವ್ರತವನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಬಂದಿದ್ದಾರೆ. ಆ 9 ದಿನಗಳಲ್ಲಿ ಅವರು ನೀರು ಅಥವಾ ನಿಂಬೆಹಣ್ಣಿನ ಪಾನಕ ಬಿಟ್ಟರೆ ಬೇರೇನೂ ಸೇವಿಸುವುದಿಲ್ಲ.

ಅವರು ವಾಷಿಂಗ್ಟನ್ ಗೆ ನೀಡಿದ ಮೊದಲ ಭೇಟಿ ನವರಾತ್ರಿಯ ಸಮಯದಲ್ಲೇ ಬಂದಿತ್ತು. ಮೋದಿಯವರು ಏನು ಸೇವಿಸುತ್ತಾರೆ ಅನ್ನೋದನ್ನು ಯುಎಸ್ ವಿದೇಶಾಂಗ ಇಲಾಖೆ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಚರ್ಚಿಸಿ ಅದರ ಪ್ರಕಾರವೇ ವ್ಯವಸ್ಥೆ ಮಾಡಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾವು ಕೇವಲ ಒಂದು ಲೋಟ ಬೆಚ್ಚನೆಯ ನೀರನ್ನು ಸೇವಿಸಿದರೂ ತಮ್ಮೊಂದಿಗಿದ್ದ ಭಾರತದ ಉನ್ನತ ಮಟ್ಟದ ಅಧಿಕಾರಿ ವರ್ಗ; ಧಾರಾಳ ಮನೋಭಾವದ ಅತಿಥಿಗಳು ಏರ್ಪಡಿಸಿದ್ದ ಔತಣಕೂಟದಲ್ಲಿ ಸಂತೃಪ್ತಿಯಾಗಿ ಆಹಾರ ಸೇವಿಸುವಂತೆ ವಿನಂತಿಸಿಕೊಂಡಿದ್ದರು.

ಇದನ್ನೂ ಓದಿ: ದಮ್​ ಮಾರೋ ದಮ್​ ಹಾಡಿನ ಸಂಗೀತಕ್ಕೆ ಮಾರು ಹೋದ ಆ್ಯಪಲ್​ ಸಂಸ್ಥೆ; ಐಫೋನ್​ 13 ಬಿಡುಗಡೆ ವಿಡಿಯೋ ಈಗ ಫುಲ್​ ವೈರಲ್

Click on your DTH Provider to Add TV9 Kannada