ದಮ್​ ಮಾರೋ ದಮ್​ ಹಾಡಿನ ಸಂಗೀತಕ್ಕೆ ಮಾರು ಹೋದ ಆ್ಯಪಲ್​ ಸಂಸ್ಥೆ; ಐಫೋನ್​ 13 ಬಿಡುಗಡೆ ವಿಡಿಯೋ ಈಗ ಫುಲ್​ ವೈರಲ್

TV9 Digital Desk

| Edited By: Skanda

Updated on: Sep 15, 2021 | 1:01 PM

ಐಫೋನ್​ 13 ಸೀರಿಸ್​ನ ಬಿಡುಗಡೆಗೆ ಅದರ ವಿಶೇಷತೆಗಳನ್ನು ವಿವರಿಸಲೆಂದೇ ಸಿದ್ಧಪಡಿಸಿದ ವಿಡಿಯೋದಲ್ಲಿ ದಮ್​ ಮಾರೋ ದಮ್ ಹಾಡಿನ​ ಸಂಗೀತ ಕೇಳಿ ಬರುತ್ತದೆ. ಫೋನ್​ ಮಾರುಕಟ್ಟೆಯಲ್ಲಿ ವಿಶ್ವದ ದೈತ್ಯ ಸಂಸ್ಥೆ ಎನ್ನಿಸಿಕೊಂಡ ಆ್ಯಪಲ್​ 90ರ ದಶಕದ ಬಾಲಿವುಡ್​ ಹಾಡಿಗೆ ಮೊರೆ ಹೋಗಿರುವುದು ಅಚ್ಚರಿ ಮೂಡಿಸಿದೆ.

ದಮ್​ ಮಾರೋ ದಮ್​ ಹಾಡಿನ ಸಂಗೀತಕ್ಕೆ ಮಾರು ಹೋದ ಆ್ಯಪಲ್​ ಸಂಸ್ಥೆ; ಐಫೋನ್​ 13 ಬಿಡುಗಡೆ ವಿಡಿಯೋ ಈಗ ಫುಲ್​ ವೈರಲ್
ವೈರಲ್​ ಆದ ವಿಡಿಯೋ
Follow us


ಫೋನ್​ ಮಾರುಕಟ್ಟೆಯಲ್ಲಿ ಅನಭಿಶಕ್ತ ದೊರೆ ಎಂದೇ ಗುರುತಿಸಿಕೊಂಡಿರುವ ಆ್ಯಪಲ್​ ಸಂಸ್ಥೆ ಪ್ರತಿ ಬಾರಿಯೂ ನೂತನ ಫೋನ್​ಗಳನ್ನು ಬಿಡುಗಡೆ ಮಾಡುವಾಗ ಒಂದಷ್ಟು ಸದ್ದು ಮಾಡಿ ಗಮನ ಸೆಳೆಯುತ್ತದೆ. ಬೆಲೆಯಲ್ಲಿ ದುಬಾರಿ ಎನ್ನಿಸಿಕೊಂಡರೂ ಉತ್ತಮ ಗುಣಮಟ್ಟ, ವಿನೂತನ ಸೌಲಭ್ಯಗಳ ಮೂಲಕ ಬೆರಗು ಮೂಡಿಸುವ ಆ್ಯಪಲ್​ ಫೋನ್​ಗಳೆಂದರೆ ಎಲ್ಲರಿಗೂ ಕುತೂಹಲ. ಈ ಬಾರಿಯೂ ಆ್ಯಪಲ್​ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು ಬಿಡುಗಡೆ ಕಾರ್ಯಕ್ರಮಕ್ಕೆಂದು ತಯಾರಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆ್ಯಪಲ್​ ಫೋನ್​ಗಳಿಗಿಂತಲೂ ಹೆಚ್ಚಿನ ಮಾತುಕತೆ ಈ ವಿಡಿಯೋ ಬಗ್ಗೆ ಆಗುತ್ತಿದ್ದು, ಅದರಲ್ಲಿರುವ ಹಿನ್ನೆಲೆ ಸಂಗೀತ ಇದಕ್ಕೆಲ್ಲಾ ಕಾರಣವಾಗಿದೆ. ಏಕೆಂದರೆ ಈ ವಿಡಿಯೋದಲ್ಲಿ 1971ರಲ್ಲಿ ಬಿಡುಗಡೆಯಾದ ಬಾಲಿವುಡ್​ನ ಅತ್ಯಂತ ಜನಪ್ರಿಯ ಹಾಡಾದ ದಮ್​ ಮಾರೋ ದಮ್​ ಸಂಗೀತ ಬಳಕೆಯಾಗಿರುವುದನ್ನು ಜನರು ಪತ್ತೆ ಹಚ್ಚಿದ್ದಾರೆ.

ಐಫೋನ್​ 13 ಸೀರಿಸ್​ನ ಬಿಡುಗಡೆಗೆ ಅದರ ವಿಶೇಷತೆಗಳನ್ನು ವಿವರಿಸಲೆಂದೇ ಸಿದ್ಧಪಡಿಸಿದ ವಿಡಿಯೋದಲ್ಲಿ ದಮ್​ ಮಾರೋ ದಮ್ ಹಾಡಿನ​ ಸಂಗೀತ ಕೇಳಿ ಬರುತ್ತದೆ. ಇದು ವಿಡಿಯೋದಲ್ಲಿ ಮಾತ್ರವಲ್ಲದೇ ಸಂಸ್ಥೆಯ ಸಿಇಓ ಟಿಮ್​ ಕುಕ್​ ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಕೇಳಿಬಂದಿದೆ ಎನ್ನಲಾಗಿದ್ದು, ಫೋನ್​ ಮಾರುಕಟ್ಟೆಯಲ್ಲಿ ವಿಶ್ವದ ದೈತ್ಯ ಸಂಸ್ಥೆ ಎನ್ನಿಸಿಕೊಂಡ ಆ್ಯಪಲ್​ 90ರ ದಶಕದ ಬಾಲಿವುಡ್​ ಹಾಡಿಗೆ ಮೊರೆ ಹೋಗಿರುವುದು ಅಚ್ಚರಿ ಮೂಡಿಸಿದೆ.

ದಮ್​ ಮಾರೋ ದಮ್ ಹಾಡಿನ​ ಸಂಗೀತವನ್ನು ವಿಡಿಯೋದ ಆರಂಭದಿಂದಲೂ ಬಳಸಿಕೊಳ್ಳಲಾಗಿದ್ದು, ಫೋಟ್ಸೀ ಅವರ ವರ್ಕ್​ ಆಲ್​ ಡೇ ಹಾಡಿನ ಜತೆಜತೆಗೇ ಇದು ಸಾಗಿದಂತೆ ಭಾಸವಾಗುತ್ತದೆ. ಒಮ್ಮೆ ಈ ವಿಡಿಯೋವನ್ನು ನೋಡಲು ಆರಂಭಿಸಿದರೆ ಕೊನೆಯ ತನಕವೂ ನೋಡುಗರನ್ನು ಹಿಡಿದಿಟ್ಟುಕೊಳ್ಳಲು ಸಂಗೀತವೇ ಸಾಕು ಎಂಬಷ್ಟು ಚೆನ್ನಾಗಿ ಮೂಡಿಬಂದಿದೆ.

ವೈರಲ್​ ಆದ ಆ್ಯಪಲ್​ ಜಾಹೀರಾತಿನ ಪೂರ್ಣ ವಿಡಿಯೋ ಇಲ್ಲಿದೆ:

ಇದನ್ನೂ ಓದಿ:
ಆ್ಯಪಲ್ ಐಫೋನ್ 13 ಲಾಂಚ್ ಆಗುವ ಮೊದಲೇ ಗೂಗಲ್ ಪಿಕ್ಸೆಲ್ 6 ಸರಣಿ ಪೋನ್​​ಗಳು ಜನರ ಕೈ ಸೇರಲಿವೆ! 

Mi11 Ultra smartphone launch: ಆ್ಯಪಲ್, ಸ್ಯಾಮ್ಸಂಗ್​ಗೂ ಸಡ್ಡು ಹೊಡೆಯಲು ಬಂತು Mi11 ಅಲ್ಟ್ರಾ

(Dum maaro dum inspired apple iphone 13 launch video grabs social media attention and gone viral)

ತಾಜಾ ಸುದ್ದಿ

Related Stories

Click on your DTH Provider to Add TV9 Kannada