ಆ್ಯಪಲ್ ಐಫೋನ್ 13 ಲಾಂಚ್ ಆಗುವ ಮೊದಲೇ ಗೂಗಲ್ ಪಿಕ್ಸೆಲ್ 6 ಸರಣಿ ಪೋನ್​​ಗಳು ಜನರ ಕೈ ಸೇರಲಿವೆ!

ಹೊಸ ಉತ್ಪಾದನೆಗಳ ಮಾಹಿತಿಯನ್ನು ಅದ್ಯಾವುದೋ ಮೂಲದಿಂದ ಸಂಗ್ರಹಿಸಿ ವಿವರವಗಳನ್ನು ಕಂಪನಿಗಳು ಹೊರಗೆಡುವ ಮೊದಲೇ ಲೀಕ್ ಮಾಡುವ ಬಾಲ್ಡ್ ಪಂಡಾ, ವೀಬೋನಲ್ಲಿ ಪಿಕ್ಸೆಲ್ 6 ಲಾಂಚ್ ಸೆಪ್ಟೆಂಬರ್ 13 ರಂದು ಅಗಲಿದೆ ಅಂತ ಹೇಳಿದೆ.

ತಂತ್ರಜ್ಞಾನದಲ್ಲಿ ಎಲಗಿಂತ ಹಿರಿಯರಿಲ್ಲ ಅಂತ ಗೂಗಲ್ ಸಂಸ್ಥೆ ಯಾವತ್ತೂ ಹೇಳಿಕೊಂಡಿಲ್ಲವಾದರೂ ಅದನ್ನು ಹಾಗೆ ಬಣ್ಣಿಸಲಾಗುತ್ತದೆ. ಕಂಪನಿಯು ತನ್ನ ಬಹು-ನಿರೀಕ್ಷಿತ ಪಿಕ್ಸೆಲ್ ಲೈನಪ್ ಗಳಾಗಿರುವ ಪಿಕ್ಸೆಲ್ 6 ಮತ್ತು ಪಿಕ್ಸಲ್ 6 ಪ್ರೊ ಫೋನ್ಗಳನ್ನು ಲಾಂಚ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗ ಚಾಲ್ತಿಯಲ್ಲಿರುವ ಸುದ್ದಿಯೇನೆಂದರೆ, ಆ್ಯಪಲ್ ಐಫೋನ್ 13 ಮಾರ್ಕೆಟ್ ಗೆ ಬರುವ ಮೊದಲೇ, ಗೂಗಲ್ ಪಿಕ್ಸೆಲ್ ಸರಣಿಯ ಫೋನ್ಗಳು ಜನರ ಕೈಸೇರಲಿವೆ. ಖಚಿತ ಮಾಹಿತಿಯೊಂದರ ಪ್ರಕಾರ ಗೂಗಲ್ ತನ್ನ ಪಿಕ್ಸೆಲ್ 6 ಫೋನ್ ಅನ್ನು ಸೆಪ್ಟೆಂಬರ್ 16 ರಂದು ಲಾಂಚ್ ಮಾಡಲಿದೆ.

ಹೊಸ ಉತ್ಪಾದನೆಗಳ ಮಾಹಿತಿಯನ್ನು ಅದ್ಯಾವುದೋ ಮೂಲದಿಂದ ಸಂಗ್ರಹಿಸಿ ವಿವರವಗಳನ್ನು ಕಂಪನಿಗಳು ಹೊರಗೆಡುವ ಮೊದಲೇ ಲೀಕ್ ಮಾಡುವ ಬಾಲ್ಡ್ ಪಂಡಾ, ವೀಬೋನಲ್ಲಿ ಪಿಕ್ಸೆಲ್ 6 ಲಾಂಚ್ ಸೆಪ್ಟೆಂಬರ್ 13 ರಂದು ಅಗಲಿದೆ ಅಂತ ಹೇಳಿದೆ. ಗೂಗಲ್ ಈ ಮಾಹಿತಿಯನ್ನು ಖಚಿತಪಡಿಸಿಲ್ಲವಾದರೂ ಇಷ್ಟರಲ್ಲೇ ಲಾಂಚ್ ಮಾಡುವುದಾಗಿ ಹೇಳಿದೆ.

ಪಿಕ್ಸೆಲ್ 6 ವಿಶೇಷತೆಗಳ ಬಗ್ಗೆ ಮಾತಾಡುವುದಾದರೆ, ಇದು 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್​ನೊಂದಿಗೆ ಬರಲಿದೆ ಮತ್ತು ಅದು 33W ಚಾರ್ಜಿಂಗ್ ಬ್ರಿಕ್​ಗಳನ್ನು ಉಪಯೋಗಿಸಲಿದೆ. ಇದುವರೆಗೆ ಪಿಕ್ಸೆಲ್ ಗರಿಷ್ಠ 18W ಚಾರ್ಜಿಂಗ್ ಸ್ಪೀಡನ್ನು ಸಪೋರ್ಟ್ ಮಾಡುತ್ತಿತ್ತು.

ಇದಕ್ಕೆ ಮೊದಲು ಲಭ್ಯವಾದ ಮಾಹಿತಿಯ ಪ್ರಕಾರ ಪಿಕ್ಸೆಲ್ 6 ಪ್ರೊ ಹಿಂಬದಿ ಮೂರು ಕೆಮೆರಾ ಸೆಟಪ್ ಮತ್ತು 5,000ಎಮ್ಎಎಚ್ ಬ್ಯಾಟರಿಯೊಂದಿಗೆ ಬರುತ್ತದೆ ಎಂದು ಹೇಳಲಾಗಿತ್ತು. 12 ಜಿಬಿ ಯ ಆರ್ಎಎಮ್ ಮತ್ತು 512 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ ಅಂತ ಹೇಳಲಾಗಿತ್ತು. ಪಿಕ್ಸೆಲ್ ಸರಣಿ ಫೋನ್ಗಳು ಇನ್-ಹೌಸ್ ಟೆನ್ಸರ್ ಚಿಪ್ ಸೆಟ್ ಹೊಂದಿರಲಿವೆ ಎಂದು ಗೂಗಲ್ ಹೇಳಿದೆ.

ಇದನ್ನೂ ಓದಿ:  RGV: ಆರ್​ಜಿವಿ ನೃತ್ಯದ ಮತ್ತೊಂದು ವಿಡಿಯೊ ವೈರಲ್; ಸ್ವತಃ ವಿಡಿಯೊ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ ಇನಯಾ 

Click on your DTH Provider to Add TV9 Kannada