AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RGV: ಆರ್​ಜಿವಿ ನೃತ್ಯದ ಮತ್ತೊಂದು ವಿಡಿಯೊ ವೈರಲ್; ಸ್ವತಃ ವಿಡಿಯೊ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ ಇನಯಾ

ನಟಿ ಇನಯಾ ಸುಲ್ತಾನಾ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನೃತ್ಯದ ಒಂದು ವಿಡಿಯೊ ವೈರಲ್ ಆಗಿತ್ತು. ಈಗ ಇನಯಾ, ಸ್ವತಃ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

RGV: ಆರ್​ಜಿವಿ ನೃತ್ಯದ ಮತ್ತೊಂದು ವಿಡಿಯೊ ವೈರಲ್; ಸ್ವತಃ ವಿಡಿಯೊ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ ಇನಯಾ
ವೈರಲ್ ಆಗಿದ್ದ ಆರ್​ಜಿವಿ ಹಾಗೂ ಇನಯಾ ನೃತ್ಯದ ವಿಡಿಯೊ
TV9 Web
| Edited By: |

Updated on:Aug 27, 2021 | 4:15 PM

Share

ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ನಟಿ ಇನಯಾ ಸುಲ್ತಾನಾ ಅವರೊಂದಿಗೆ ಯದ್ವಾ ತದ್ವಾ ನರ್ತಿಸಿ, ನಂತರ ಆಕೆಯ ಕಾಲಿಗೆ ಬಿದ್ದ ವಿಡಿಯೊ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೊಮ್ಮೆ ಕುಚೇಷ್ಟೆ ಮಾಡುವ ಆರ್​ಜಿವಿ, ಈ ವಿಡಿಯೊ ಬಿಡುಗಡೆಯಾದ ನಂತರ ಅಂಥದ್ದೇ ಒಂದು ಟ್ವೀಟ್ ಮಾಡಿ, ಅಮೇರಿಕಾ ಪ್ರೆಸಿಡೆಂಟ್ ಜೋ ಬಿಡೆನ್ ಆಣೆಯಾಗಿ ವಿಡಿಯೊದಲ್ಲಿರುವುದು ತಾನಲ್ಲ ಎಂದಿದ್ದರು. ಮತ್ತೆ ಕೆಲ ಸಮಯದ ನಂತರ ನಟಿ ಇನಯಾ ಅವರೊಂದಿಗಿರುವ ಚಿತ್ರವನ್ನು ಟ್ವೀಟ್ ಮಾಡಿ, ‘ನೋಡಿ, ಇವರೇ ನನ್ನ ಡಾನ್ಸ್ ಪಾರ್ಟ್ನರ್’ ಎಂದು ಬರೆದುಕೊಂಡಿದ್ದರು. ನಟಿ ಇನಯಾ ಸುಲ್ತಾನಾ ತಾವೇನು ಕಡಿಮೆ ಇಲ್ಲ ಎನ್ನುವಂತೆ, ಆರ್​ಜಿವಿಯೊಂದಿಗೆ ನೃತ್ಯ ಮಾಡುತ್ತಿರುವ ಮತ್ತೊಂದು ವಿಡಿಯೊವನ್ನು ಸ್ವತಃ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರದ್ದೇ ನಿರ್ದೇಶನದ ‘ರಂಗೀಲಾ’ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದ ಆರ್​​ಜಿವಿ, ತಮ್ಮ ನೃತ್ಯ ಶೈಲಿಯಿಂದ ವಿವಾದಕ್ಕೀಡಾಗಿದ್ದರು. ಪ್ರಸ್ತುತ ಇನಯಾ ಸುಲ್ತಾನಾ ಸ್ವತಃ ಮತ್ತೊಂದು ವಿಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ನೃತ್ಯದ ಮತ್ತೊಂದು ಭಾಗವಿದೆ. ‘ನಾನು ಅಧಿಕೃತವಾಗಿ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ನೃತ್ಯ ಮಾಡಿದ ವಿಡಿಯೊ ಹಂಚಿಕೊಳ್ಳುತ್ತಿದ್ದೇನೆ’ ಎಂದು ಅವರು ಬರೆದುಕೊಂಡು ವಿಡಿಯೊ ಶೇರ್ ಮಾಡಿದ್ದಾರೆ. ಈ ವಿಡಿಯೊದಲ್ಲೂ ಆರ್​ಜಿವಿ ಮನ ಬಂದಂತೆ ನರ್ತಿಸುವ ದೃಶ್ಯಗಳಿವೆ.

ಇನಯಾ ಸುಲ್ತಾನಾ ಹಂಚಿಕೊಂಡಿರುವ ವಿಡಿಯೊ:

ಆರ್​ಜಿವಿ ಹಾಗೂ ಇನಯಾ ನೃತ್ಯದ ದೃಶ್ಯಗಳು ಇನಯಾ ಅವರ ಜನ್ಮದಿನದ ಸಂದರ್ಭದಲ್ಲಿ ನಡೆದಿದ್ದ ಪಾರ್ಟಿಯ ಸಂದರ್ಭದ ವಿಡಿಯೊಗಳು ಎನ್ನಲಾಗಿದೆ.

ಈ ಹಿಂದೆ ವೈರಲ್ ಆಗಿದ್ದ ಇನಯಾ ಹಾಗೂ ಆರ್​ಜಿವಿ ನೃತ್ಯದ ವಿಡಿಯೊ ಇಲ್ಲಿದೆ:

ಇದನ್ನೂ ಓದಿ:

ನಟಿಯ ಜತೆ ಮನ ಬಂದಂತೆ ಡ್ಯಾನ್ಸ್​ ಮಾಡಿ ಕಾಲಿಗೆ ನಮಸ್ಕರಿಸಿದ ಆರ್​ಜಿವಿ; ವಿಡಿಯೋ ವೈರಲ್

1998ರಲ್ಲಿ ಸತ್ಯ ಸಾಯಿ ಬಾಬಾರ ಭೇಟಿ ಮಾಡಿದ್ದೆ, ಅವರ ಪುಸ್ತಕ ಓದಿ ಮಾಂಸಾಹಾರ ತ್ಯಜಿಸಿದೆ: ಸಿಎಂ ಬೊಮ್ಮಾಯಿ

(Inaya Sulthana shares another dance video with Ram Gopal Varma from her birthday Party)

Published On - 4:14 pm, Fri, 27 August 21