ಜ್ಯೂ.ಎನ್ಟಿಆರ್ ಕಾರು ರಾಮ್ಚರಣ್ ಕಾರಿಗಿಂತ ಮುಂದೆ ಹೋಗಿದ್ದೇ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾಯ್ತು!
RRR: ಟಾಲಿವುಡ್ನ ಖ್ಯಾತ ನಟರಾದ ಜ್ಯೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಆರ್ಆರ್ಆರ್ ಚಿತ್ರದ ಶೂಟಿಂಗ್ ಮುಗಿಸಿ ತಮ್ಮ ಐಷಾರಾಮಿ ಕಾರುಗಳಲ್ಲಿ ಮನೆಗೆ ತೆರಳಿದ್ದಾರೆ. ಅವರಲ್ಲಿ ಮುಂದೆ ತೆರಳಿದ ಜ್ಯೂ.ಎನ್ಟಿಆರ್ ಕಾರನ್ನೇ ಮುಂದಿಟ್ಟುಕೊಂಡು ಅಭಿಮಾನಿಗಳು ಕಾಲೆಳೆದುಕೊಳ್ಳುತ್ತಿದ್ದಾರೆ.

ಟಾಲಿವುಡ್ ನಟರಾದ ರಾಮ್ಚರಣ್ ಹಾಗೂ ಜ್ಯೂನಿಯರ್ ಎನ್ಟಿಆರ್ ಆರ್ಆರ್ಆರ್(RRR) ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಬಹು ನಿರೀಕ್ಷಿತ ಚಿತ್ರದ ಕೊನೆಯ ದೃಶ್ಯದ ಚಿತ್ರೀಕರಣದ ನಂತರ ಈ ತಾರೆಗಳು ತಮ್ಮ ಐಷಾರಾಮಿ ಕಾರುಗಳಲ್ಲಿ ಮನೆಗೆ ತೆರಳುತ್ತಿರುವ ವಿಡಿಯೊವೊಂದನ್ನು ಆರ್ಆರ್ಆರ್ ತಂಡ ಬಿಡುಗಡೆಗೊಳಿಸಿದೆ. ಈ ವಿಡಿಯೊ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದು, ನೆಚ್ಚಿನ ನಟರ ರೇಸಿಂಗ್ ಪ್ರೀತಿ ನೋಡಿ ಅಚ್ಚರಿಪಟ್ಟಿದ್ದಾರೆ.
ಆರ್ಆರ್ಆರ್ ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಟ್ವೀಟನ್ನು ಹಂಚಿಕೊಳ್ಳಲಾಗಿದ್ದು, ‘ಟೈಗರ್ ಮತ್ತು ಚೀತಾ’ ಎಂದು ಕ್ಯಾಪ್ಶನ್ ನೀಡಲಾಗಿದೆ. ಅದಕ್ಕೆ ತಕ್ಕಂತೆ ಭರ್ಜರಿ ಶಬ್ಧ ಮಾಡುತ್ತಾ, ರೇಸ್ ಸ್ಪರ್ಧೆಯಲ್ಲಿರುವಂತೆ ಎರಡೂ ಕಾರುಗಳು ತೆರಳಿವೆ. ಸ್ಥಳದಲ್ಲಿರುವವರು ಅಚ್ಚರಿಯಿಂದ ನಟರ ಕಾರುಗಳನ್ನು ನೋಡುತ್ತಾ ನಿಂತಿದ್ದಾರೆ. ಈ ವಿಡಿಯೊ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಜ್ಯೂ.ಎನ್ಟಿಆರ್ ಹಾಗೂ ರಾಮ್ಚರಣ್ ತೆರಳುತ್ತಿರುವ ವಿಡಿಯೊ:
TIGER and CHEETAH…?? Leaving the set after wrapping up their last shot for the movie today!#RRRMovie @tarak9999 @alwaysramcharan pic.twitter.com/ttpthr8ifn
— RRR Movie (@RRRMovie) August 26, 2021
ಜ್ಯೂನಿಯರ್ ಎನ್ಟಿಆರ್ ತಮ್ಮ ಲ್ಯಾಂಬೊರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಕಾರನ್ನು ಮೊದಲು ಚಲಾಯಿಸಿಕೊಂಡು ಹೋಗಿದ್ದು, ಅವರ ಹಿಂದೆ ರಾಮ್ ಚರಣ್ ಅವರ ಸ್ವಾಂಕಿ ರೆಡ್ ಕಾರು ತೆರಳಿದೆ. ವಿಡಿಯೊ ನೋಡಿದ ಅಭಿಮಾನಿಗಳು ಅದರಲ್ಲೂ ಕಿತ್ತಾಡುವುದಿಕ್ಕೆ ತೊಡಗಿದ್ದಾರೆ. ಕಾರಣ, ಜೂನಿಯರ್ ಎನ್ಟಿಆರ್ ಕಾರು ರಾಮ್ ಚರಣ್ ಕಾರಿಗಿಂತ ಮುಂದೆ ತೆರಳಿದೆ. ಇದನ್ನೇ ಇಟ್ಟುಕೊಂಡಿರುವ ಎನ್ಟಿಆರ್ ಅಭಿಮಾನಿಗಳು, ನಾಯಕನಾದವನು ಮುಂದೆ ನಿಂತು ನಡೆಸುತ್ತಾನೆ ಎಂದು ಕಾಮೆಂಟ್ ಮಾಡಿ ಕುಟುಕಿದ್ದಾರೆ. ಇದಕ್ಕೆ ರಾಮ್ ಚರಣ್ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಮುಂದೆ ತೆರಳುವುದು ಬಾಡಿಗಾರ್ಡ್ ವಾಹನ, ಹಿಂದೆ ತೆರಳುವುದು ಹೀರೊ ಎಂದು ಜ್ಯೂನಿಯರ್ ಎನ್ಟಿಆರ್ ಅಭಿಮಾನಿಗಳ ಕಾಲೆಳೆದಿದ್ದಾರೆ.
ಟಾಲಿವುಡ್ನಲ್ಲಿ ನಟರಿಗೆ ಅಭಿಮಾನಿ ಬಳಗ ಹೆಚ್ಚು. ಆದ್ದರಿಂದಲೇ ಮಲ್ಟಿ ಸ್ಟಾರರ್ ಸಿನಿಮಾಗಳಲ್ಲಿ ನಟರಿಗೆ ಸ್ಕ್ರೀನ್ ಸ್ಪೇಸ್ ನೀಡುವುದನ್ನು ಬಹಳ ಎಚ್ಚರದಿಂದ ನಿರ್ವಹಿಸುತ್ತಾರೆ. ಸ್ವತಃ ನಟರು ಅನ್ಯೋನ್ಯವಾಗಿದ್ದರೂ, ಅಭಿಮಾನಿಗಳು ಕಿತ್ತಾಡುವುದು ಅಲ್ಲಿ ಮಾಮೂಲು. ಇದನ್ನು ತಿಳಿದಿರುವ ನಿರ್ದೇಶಕ ರಾಜಮೌಳಿ, ಆರ್ಆರ್ಆರ್ ಚಿತ್ರದಲ್ಲಿ ಅಭಿಮಾನಿಗಳಿಗೂ ಬೇಸರವಾಗದಂತೆ, ಖ್ಯಾತ ನಟರಿಬ್ಬರನ್ನೂ ನಿರ್ವಹಿಸಿದ್ದಾರೆ. ಆರ್ಆರ್ಆರ್ ಚಿತ್ರವು ಅಕ್ಟೋಬರ್ 13ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ:
RGV: ಆರ್ಜಿವಿ ನೃತ್ಯದ ಮತ್ತೊಂದು ವಿಡಿಯೊ ವೈರಲ್; ಸ್ವತಃ ವಿಡಿಯೊ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ ಇನಯಾ
(Ram Charan and Jr NTR left with their luxury cars from RRR sets video viral)




