ಒಸಾಮಾನನ್ನು ಮನೆಹೊಕ್ಕು ಕೊಂದಿದ್ದ ಅಮೇರಿಕನ್ನರು ಕ್ಷುದ್ರ ತಾಲಿಬಾನಿಗಳಿಗೆ ಹೆದರಿ ತಮ್ಮ ನಾಯಿಗಳನ್ನು ಬಿಟ್ಟು ಓಡಿಹೋದರು!

ಅವರು ತೆರಳಿದಾಕ್ಷಣ ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ರಣಕೇಕೆ ಹಾಕುತ್ತಿದ್ದಾರೆ. ಅಮೇರಿಕನ್ನರ ಈ ಕ್ರಮವನ್ನು ಆಫ್ಘನ್ನರು ಯಾವತ್ತೂ ಕ್ಷಮಿಸಲಾರರು.

ಅಮೆರಿಕಾದ ಸೈನಿಕರಿಗೆ ಅಧಿಕಾರಿಗಳಿಗೆ ಅಫ್ಘಾನಿಸ್ತಾನದಿಂದ ಯಾವಾಗ ಕಾಲು ಕಿತ್ತೇವು ಅನಿಸಿತ್ತೇನೋ? ತಾಲಿಬಾನಿಗಳಿಗೆ ಕೈಗೆ ಸಿಕ್ಕು ಆಫ್ಘನ್ನರ ಸ್ಥಿತಿ ನರಕಕ್ಕಿಂತ ಕೀಳಾಗಲಿದೆ ಎಂಬ ಮಾನವೀಯ ಕಳಕಳಿ ಅವರಲ್ಲಿ ಹುಟ್ಟಲಿಲ್ಲ. ನೀವೊಮ್ಮೆ ಯೋಚನೆ ಮಾಡಿನೋಡಿ. ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದ ಒಸಮಾ ಬಿನ್ ಲಾಡೆನ್ ನಂಥ ಜಾಗತಿಕ ಭಯೋತ್ಪಾದಕನನ್ನು ಪಾಕಿಸ್ತಾನ ಹೊಕ್ಕು ಕೊಂದು ಹಾಕಿದ ಅಮೇರಿಕನ್ನರು ಜುಜುಬಿ ತಾಲಿಬಾನಿಗಳಿಗೆ ಹೆದರಿ ಅವರು ನೀಡಿದ ಗಡುವಿನೊಳಗೆ ಬಿದ್ದೆನೋ ಸತ್ತೆನೋ ಅಂತ ಜಾಗ ಖಾಲಿಮಾಡಿಕೊಂಡು ತಮ್ಮ ದೇಶಕ್ಕೆ ಹಾರಿಹೊಗಿದ್ದಾರೆ. ತಾಲಿಬಾನಿಗಳು ನೀಡಿದ ಗಡುವಿಗಿಂತ ಒಂದು ದಿನ ಮೊದಲೇ ಅವರು ವಾಪಸ್ಸು ಹೊಗಿದ್ದಾರೆಂದರೆ ಒಂದೆರಡು ಅಂಶಗಳು ಸ್ಪಷ್ಟವಾಗುತ್ತವೆ. ಒಂದು, ಅವರಿಗೆ ತಾಲಿಬಾನಿಗಳು ತಮ್ಮ ಅಕ್ರಮಣ ನಡೆಸಿಯಾರೆಂಬ ಭಯವಿತ್ತು ಅಥವಾ ಅವರಿಗೆ ತಮ್ಮ ದೇಶ ಸೇರಿಕೊಳ್ಳುವ ತವಕ ಜಾಸ್ತಿಯಾಗಿತ್ತು. ಅವರು ತಾಲಿಬಾನಿಗಳೊಂದಿಗೆ ಮಾತುಕತೆ ನಡೆಸಿದ್ದು, ಒಪ್ಪಂದ ಮಾಡಿಕೊಂಡಿದ್ದು ಏನು ಅನ್ನೋದು ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ.

ಅವರು ತೆರಳಿದಾಕ್ಷಣ ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ರಣಕೇಕೆ ಹಾಕುತ್ತಿದ್ದಾರೆ. ಅಮೇರಿಕನ್ನರ ಈ ಕ್ರಮವನ್ನು ಆಫ್ಘನ್ನರು ಯಾವತ್ತೂ ಕ್ಷಮಿಸಲಾರರು. ಅದರಲ್ಲೂ ಆಮೇರಿಕ ಸೇನೆ ರವಿವಾರದಂದು ಶಂಕಿತ ಐಸಿಸ್-ಕೆ ಉಗ್ರರಿದ್ದ ವಾಹನದೆಡೆ ಕ್ಷಿಪಣಿ ಹಾರಿಸಿದಾಗ ಅದು ಮಿಸ್ಫೈರ್ ಆಗಿ ಒಂದೇ ಕುಟುಂದದ 10 ಜನ ಸಾಯುವಂತಾಯಿತು. ಸತ್ತವರಲ್ಲಿ 2-12 ವಯಸ್ಸಿನ 6 ಮಕ್ಕಳಿದ್ದರು.

ಅಮೇರಿಕನ್ನರಿಗೆ ಹೊರಡುವ ಧಾವಂತ ಯಾವ ಪರಿ ಇತ್ತೆಂದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಅವರು ಅಫ್ಘಾನಿಸ್ತಾದಲ್ಲಿರುವವರೆಗೆ ಅವರ ನೆರಳಿನಂತಿದ್ದು ಅಪಾಯಗಳ ಮುನ್ಸೂಚನೆ ನೀಡಿ ಅವರನ್ನು ರಕ್ಷಿಸುತ್ತಿದ್ದ ಹಲವಾರು ನಾಯಿಗಳನ್ನು ವಿಮಾನ ನಿಲ್ದಾಣದಲ್ಲಿ ಅವರು ಬಿಟ್ಟು ಹೋಗಿದ್ದಾರೆ. ಅಮೇರಿಕನ್ನರಿಗೆ ತೋರಿದ ಸ್ವಾಮಿನಿಷ್ಠೆಗಾಗಿ ಈ ನಾಯಿಗಳು ಪರಿತಪಿಸುತ್ತರಿಬಹುದು.

ತಾಲಿಬಾನಿಗಳ ಕೈಗೆ ಸಿಕ್ಕಿರುವ ಈ ನಾಯಿಗಳ ಪಾಡು ಇನ್ನು ನಾಯಿ ಪಾಡೇ. ಇಂದಲ್ಲ ನಾಳೆ ಅವುಗಳನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ. ಜನರನ್ನೇ ಅಲ್ಲಿ ಕೇಳುವವರಿಲ್ಲ, ಇನ್ನು ನಾಯಿಗಳ ಗತಿಯೇನು?

ಇದನ್ನೂ ಓದಿ:  Viral Video: ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ಆನೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಚಾಲಕರು; ವಿಡಿಯೋ ನೋಡಿ

Click on your DTH Provider to Add TV9 Kannada