ಟಾಲಿವುಡ್ನಿಂದ ಬಾಲಿವುಡ್ಗೆ ಹಾರಿದ ದಿಶಾ ಪಟಾನಿ ಸೌಂದರ್ಯ ಮತ್ತು ನಟನೆಯಿಂದ ಮುಂಬೈಯಲ್ಲಿ ಭದ್ರವಾಗಿ ತಳವೂರಿದ್ದಾಳೆ!
ದಿಶಾ ಎಲ್ಲ ಉಡುಗೆಗಳಲ್ಲಿ ಅಂದವಾಗಿ ಕಾಣುತ್ತಾಳೆ ಅಂತ ಆಕೆಯನ್ನು ಹುಚ್ಚರಂತೆ ಆರಾಧಿಸುವವರು ಹೇಳುತ್ತಾರೆ. ಆದರೆ ಭಾರತದ ಒಬ್ಬ ಹೆಸರಾಂತ ವಸ್ತ್ರ ವಿನ್ಯಾಸಕ, ಅಕೆಗೆ ಮಾಡ್ ಉಡುಪು ಮಾತ್ರ ಸೂಟ್ ಆಗುತ್ತವೆ ಅಂತ ಹೇಳಿದ್ದಾರೆ.
ಈಗಿನ ಬಾಲಿವುಡ್ ನಟಿಯರಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟಿಯರಲ್ಲಿ ದಿಶಾ ಪಟಾನಿ ಕೂಡ ಒಬ್ಬಳು. ಗ್ಲಾಮರ್ ಮತ್ತು ಪ್ರತಿಭೆಯ ಅದ್ಭುತ ಸಂಗಮ ಈಕೆ ಅಂದರೆ ತಪ್ಪಾಗಲಾರದು. ಇಲ್ಲಿರುವ ವಿಡಿಯೋ ಈಕೆಯ ಫೋಟೋಗಳನ್ನು ನೋಡಿ. ಯುವಕರ ಹೃದಯಗಳಿಗೆ ದಿಶಾ ಲಗ್ಗೆಯಿಟ್ಟಿದ್ದಾಳೆ ಅಂತ ಬೇರೆ ಹೇಳಬೇಕೇ? ಈಕೆ ಗ್ಲಾಮರ್ ಗೊಂಬೆ ನಟನೆ ಮಾತ್ರ ಸೊನ್ನೆ ಅಂತ ಸಿನಿಕರು ಹೇಳುವುದುಂಟು. ಗಮನಿಸಬೇಕಾದ ಅಂಶವೆಂದರೆ ಈಕೆ ತನ್ನ ಜನ ಮಾಡುವ ಕಾಮೆಂಟ್ಗಳಿಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಪ್ರತಿಭೆ ಇಲ್ಲದೆ ಹೋದರೆ ಅತ್ಯತ್ತುಮ ಪಾದಾರ್ಪಣೆ-ಸ್ಟಾರ್ ಡೆಬ್ಯು ಆಫ್ ದಿ ಈಯರ್ ಪ್ರಶಸ್ತಿ ಪಡೆಯುವುದು ಈಕೆಗೆ ಸಾಧ್ಯವಾಗುತ್ತಿತ್ತೇ?
ದಿಶಾ ಎಲ್ಲ ಉಡುಗೆಗಳಲ್ಲಿ ಅಂದವಾಗಿ ಕಾಣುತ್ತಾಳೆ ಅಂತ ಆಕೆಯನ್ನು ಹುಚ್ಚರಂತೆ ಆರಾಧಿಸುವವರು ಹೇಳುತ್ತಾರೆ. ಆದರೆ ಭಾರತದ ಒಬ್ಬ ಹೆಸರಾಂತ ವಸ್ತ್ರ ವಿನ್ಯಾಸಕ, ಅಕೆಗೆ ಮಾಡ್ ಉಡುಪು ಮಾತ್ರ ಸೂಟ್ ಆಗುತ್ತವೆ ಅಂತ ಹೇಳಿದ್ದಾರೆ. ಆಕೆಯ ಮೈಮಾಟ, ಕಟೆದು ಮಾಡಿಸಿದಂತಿರುವ ಫಿಗರ್ ಮತ್ತು ಸೌಂದರ್ಯ ನೋಡುತ್ತಿದ್ದರೆ ಸಾಂಪ್ರದಾಯಿಕ ಉಡುಗೆಯಲ್ಲೂ ಆಕೆ ಸುಂದರವಾಗಿ ಕಾಣುತ್ತಾಳೆ.
29 ವರ್ಷ ವಯಸ್ಸಿನ ದಿಶಾಳ ಸಿನಿಪಯಣ ಶುರುವಾಗಿದ್ದು ತೆಲುಗು ಚಿತ್ರದಿಂದ. ವರುಣ್ ತೇಜ್ ನಾಯಕನಾಗಿ ನಟಿಸಿದ್ದ ‘ಲೋಫರ್’ ಚಿತ್ರದಲ್ಲಿ ಆಕೆ ಫೀಮೇಲ್ ಲೀಡ್ನಲ್ಲಿದ್ದಳು. ಹಿಂದಿಯಲ್ಲಿ ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಅವರ ಬಯೋಪಿಕ್ ‘ಎಮ್ ಎಸ್ ದೋನಿ: ದಿ ಅನ್ಟೋಲ್ಡ್ ಸ್ಟೋರಿ’ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದ ನಿರ್ದೇಶಕ ನೀರಜ್ ಪಾಂಡೆಗೆ ಧೋನಿಯ ಪಾತ್ರ ನಿರ್ವಹಿಸಿದ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಜೊತೆ ಇಬ್ಬರು ನಾಯಕಿಯರು ಬೇಕಿದ್ದರು. ಕಿಯಾರಾ ಅದ್ವಾನಿಯನ್ನು ಅವರು ಸಾಕ್ಷಿಯ ಪಾತ್ರಕ್ಕೆ ಅರಿಸಿಕೊಂಡಿದ್ದರು, ಅದರೆ ಧೋನಿಯ ಗರ್ಲ್ಫ್ರೆಂಡ್ ಪಾತ್ರಕ್ಕೆ ಸ್ನಿಗ್ಧ ಸೌಂದರ್ಯ ಮತ್ತು ತಾಜಾತನ ಸೂಸುವ ಯುವತಿಯ ತಲಾಷ್ನಲ್ಲಿದ್ದಾಗ ಅವರಿಗೆ ಕಣ್ಣಿಗೆ ಬಿದ್ದಿದ್ದು ದಿಶಾ. ಈ ಚಿತ್ರ 2016ರಲ್ಲಿ ಬಿಡುಗಡೆಯಾಗಿತ್ತು. ಇದು ಮೂವರಿಗೂ-ದಿಶಾ, ಸುಶಾಂತ್ ಮತ್ತು ಕಿಯಾರಾಗೆ ದೊಡ್ಡ ಬ್ರೇಕ್ ನೀಡಿತು.
ಅಂದಹಾಗೆ, ದಿಶಾ ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್ ಜೊತೆ ಬಿಸಿ ಬಿಸಿ ಅಫೇರ್ ಇಟ್ಟುಕೊಂಡಿದ್ದಾಳೆ. ಇಷ್ಟರಲ್ಲೇ ಅವರು ಮದುವೆಯಾಗಲಿದ್ದಾರೆಂಬ ವದಂತಿ ದಟ್ಟವಾಗಿದೆ.
ಇದನ್ನೂ ಓದಿ: ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್ ಮಾಡು’ ಎಂದ ಶಮಿತಾ ವಿಡಿಯೋ ವೈರಲ್