Viral Video: ಅಮೆರಿಕಾ ಪಡೆ ಜಾಗ ಖಾಲಿ ಮಾಡುತ್ತಿದ್ದಂತೆಯೇ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು

Viral Video: ಅಮೆರಿಕಾ ಪಡೆ ಜಾಗ ಖಾಲಿ ಮಾಡುತ್ತಿದ್ದಂತೆಯೇ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು

TV9 Web
| Updated By: Skanda

Updated on: Aug 31, 2021 | 9:30 AM

ಅಮೆರಿಕಾ ಸೇನೆ ಹೊರಡುತ್ತಿದ್ದಂತೆಯೇ ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. ಉಗ್ರರ ಸಂಭ್ರಮಾಚರಣೆಯ ವಿಡಿಯೋ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ.

ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ಜಾಗ ಖಾಲಿ ಮಾಡಿದೆ. ತಾಲಿಬಾನ್​ ಉಗ್ರರು ನೀಡಿದ್ದ ಗಡುವಿಗಿಂತ 24 ತಾಸು ಮುಂಚಿತವಾಗಿ ಅಮೆರಿಕಾ ಸೇನೆ ಕಾಬೂಲ್ ಏರ್‌ಪೋರ್ಟ್‌ನಿಂದ ತೆರಳಿದ್ದು, ನಿನ್ನೆ ರಾತ್ರಿ ಅಮೆರಿಕದ 3 ವಿಮಾನಗಳಲ್ಲಿ ಯೋಧರನ್ನು ಶಿಫ್ಟ್ ಮಾಡಲಾಗಿದೆ. ಅಮೆರಿಕಾ ಸೇನೆ ಹೊರಡುತ್ತಿದ್ದಂತೆಯೇ ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. ಉಗ್ರರ ಸಂಭ್ರಮಾಚರಣೆಯ ವಿಡಿಯೋ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ.

ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾದ ಹಿನ್ನೆಲೆ ಅಫ್ಘಾನಿಸ್ತಾನದಿಂದ 79 ಸಾವಿರ ನಾಗರಿಕರ ಏರ್‌ಲಿಫ್ಟ್ ಮಾಡಲಾಗಿದೆ. 6 ಸಾವಿರ ಅಮೆರಿಕನ್ ನಾಗರಿಕರು ಇದರಲ್ಲಿದ್ದು, ಅಫ್ಘಾನಿಸ್ತಾನದ ನಾಗರಿಕರೂ ಸೇರಿದಂತೆ ವಿವಿಧ ದೇಶಗಳ 73,500 ನಾಗರಿಕರ ಏರ್‌ಲಿಫ್ಟ್ ಕೂಡಾ ಆಗಿದೆ. ಆ ಮೂಲಕ ಅಮೆರಿಕಾ, ತಾಲಿಬಾನ್ ನಡುವಿನ 20 ವರ್ಷಗಳ ಸಂಘರ್ಷ ಒಂದು ಹಂತದಲ್ಲಿ ಅಂತ್ಯವಾದಂತಾಗಿದ್ದು, ಅಮೆರಿಕಾ ಸೇನೆ ಕಾಬೂಲ್ ಏರ್‌ಪೋರ್ಟ್‌ ಖಾಲಿ ಮಾಡಿ ತೆರಳಿದ ನಂತರ ಏರ್‌ಪೋರ್ಟ್‌ ಮೂಲೆಮೂಲೆಯನ್ನೂ ತಾಲಿಬಾನ್ ಉಗ್ರರು ಶೋಧಿಸಿದ್ದಾರೆ. ಅಮೆರಿಕಾ ಸೇನೆ ಬಿಟ್ಟು ಹೋಗಿರಬಹುದಾದ ಶಸ್ತ್ರಾಸ್ತ್ರಕ್ಕೆ ಹುಡುಕಾಟ ನಡೆಸಿದ್ದು, ಆಫ್ಘನ್‌ನ ಕಾಬೂಲ್ ಏರ್‌ಪೋರ್ಟ್ ಇದೀಗ ಸಂಪೂರ್ಣ ತಾಲಿಬಾನ್ ವಶದಲ್ಲಿದೆ.

ಏತನ್ಮಧ್ಯೆ, ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ವಾಪಸ್ ವಿಚಾರಕ್ಕೆ ಸಂಬಂಧಿಸಿದಂತೆ ಜೋ ಬೈಡನ್ ನಿರ್ಧಾರಕ್ಕೆ ಅಮೆರಿಕಾದ ಶೇ.51ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಶೇ.40ರಷ್ಟು ಜನರಿಂದ ಮಾತ್ರ ಬೈಡನ್ ನಿರ್ಧಾರಕ್ಕೆ ಬೆಂಬಲ ವ್ಯಕ್ತವಾಗಿದೆ.

ಇದನ್ನೂ ಓದಿ:
ಡೆಡ್‌ಲೈನ್‌ಗೂ 24 ತಾಸು ಮುನ್ನವೇ ಜಾಗ ಖಾಲಿ ಮಾಡಿದ ಅಮೆರಿಕಾ ಸೇನೆ, ಕಾದುಕುಳಿತಿದ್ದ ತಾಲಿಬಾನಿಗಳ ಕಬ್ಜಾಗೆ ಆಫ್ಘನ್​