AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತಾಷ ಅಫ್ಘನ್ನರು ಕಾಲ್ನಡಿಗೆಯಲ್ಲೇ ಇರಾನ್ ಇಲ್ಲವೇ ಪಾಕಿಸ್ತಾನಕ್ಕೆ ಹೋಗುತ್ತಿದ್ದಾರೆ; ಅವರ ಉದ್ದೇಶ ಈಡೇರುವುದೇ?

ಹತಾಷ ಅಫ್ಘನ್ನರು ಕಾಲ್ನಡಿಗೆಯಲ್ಲೇ ಇರಾನ್ ಇಲ್ಲವೇ ಪಾಕಿಸ್ತಾನಕ್ಕೆ ಹೋಗುತ್ತಿದ್ದಾರೆ; ಅವರ ಉದ್ದೇಶ ಈಡೇರುವುದೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 31, 2021 | 12:43 AM

Share

ನೂರಾರು ಮೈಲಿ ನಡೆದ ನಂತರವೂ ಅವರು ಬೇರೆ ದೇಶಗಳನ್ನು ಸೇರಿಕೊಳ್ಳುವುದು ಖಾತರಿಯಿಲ್ಲ. ಯಾಕೆಂದರೆ, ಪಾಕಿಸ್ತಾನ ಮತ್ತು ಇರಾನ್, ಈ ಜನರನ್ನು ದೇಶದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿವೆ

ಈ ಜನರ ಹತಾಷೆಯನ್ನು ಗಮನಿಸಿ. ಇಷ್ಟು ದಿನ ಇವರೆಲ್ಲ ಕಾಬೂಲ್ ನಿಲ್ದಾಣದ ಹೊರಗಡೆ ಜಮಾಯಿಸಿ ಬೇರೆ ದೇಶಕ್ಕೆ ಹಾರುವ ತಮ್ಮ ಅವಕಾಶಕ್ಕಾಗಿ ಕಾಯುತ್ತಿದ್ದರು. ಆದರೆ, ವಿಮಾನ ನಿಲ್ದಾಣವನ್ನು ತಾಲಿಬಾನಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಅಲ್ಲಿ ನೆರೆದ ಜನಗಳ ಮೇಲೆ ಐಸಿಸ್-ಕೆ ಉಗ್ರರು ಬಾಂಬ್ ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಡೆದುಕೊಂಡೇ ಅಫ್ಫಾನಿಸ್ತಾನದ ಗಡಿ ದಾಟಿ ಪಾಕಿಸ್ತಾನ ಇಲ್ಲವೇ ಇರಾನ್ ದೇಶಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಎರಡು ದಶಕಗಳ ತಮ್ಮ ದೇಶದಲ್ಲಿ ಬೀಡು ಬಿಟ್ಟಿದ್ದ ವಿದೇಶೀ ಸೇನೆಗಳಿಂದ ತಮಗೇನೂ ಪ್ರಯೋಜನವಾಗಿಲ್ಲ ಅಂತ ಶಪಿಸುತ್ತಾ ಅವರು ಮುಂದೆ ಸಾಗುತ್ತಿದ್ದಾರೆ.

ಅಮೆರಿಕ ಮತ್ತು ಅದರ ಮಿತ್ರಪಡೆಗಳು ಆಫ್ಘಾನಿಸ್ತಾನದಿಂದ ವಾಪಸ್ಸು ಹೋದ ನಂತರ ಮತ್ತು ಅಪ್ಘಾನಿಸ್ತಾನಕ್ಕೆ ವಿದೇಶಿ ವಿಮಾನಗಳ ವಾಣಿಜ್ಯ ಸಂಚಾರ ಆರಂಭವಾದ ಮೇಲೆ, ತಕ್ಕ ವೀಸಾ ಮತ್ತು ಪಾಸ್ಪೋರ್ಟ್ ಹೊಂದಿರುವವರಿಗೆ ಅವರು ಹೋಗಬಯಸುವ ದೇಶಕ್ಕೆ ಹೋಗಲು ಅಡಚಣೆ ಉಂಟು ಮಾಡುವುದಿಲ್ಲವೆಂದು ತಾಲಿಬಾನ್ ಆಫ್ಘನ್ ಜನರಿಗೆ ಭರವಸೆ ನೀಡಿದೆ. ಆದರೆ ಈ ಜನರಿಗೆ ತಾಲಿಬಾನಿನ ಮಾತಿನ ಮೇಲೆ ವಿಶ್ವಾಸವಿಲ್ಲ. ಹಾಗಾಗೇ, ನಡೆದಾದರೂ ಚಿಂತೆಯಿಲ್ಲ, ಬೇರೆ ದೇಶ ಸೇರಿಕೊಳ್ಳೋಣ ಅಂತ ಅವರು ಗುಂಪು ಗುಂಪಾಗಿ ಹೊರಟಿದ್ದಾರೆ.

ಆದರೆ, ನೂರಾರು ಮೈಲಿ ನಡೆದ ನಂತರವೂ ಅವರು ಬೇರೆ ದೇಶಗಳನ್ನು ಸೇರಿಕೊಳ್ಳುವುದು ಖಾತರಿಯಿಲ್ಲ. ಯಾಕೆಂದರೆ, ಪಾಕಿಸ್ತಾನ ಮತ್ತು ಇರಾನ್, ಈ ಜನರನ್ನು ದೇಶದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿವೆ. ಅದು ಇವರಿಗೂ ಗೊತ್ತಿದೆ. ಆದರೂ ಎಂಥದ್ದೋ ಒಂದು ಆಶಾಕಿರಣ ಅವರ ಮನಸ್ಸಿನಲ್ಲಿ ಮೂಡಿರಬಹುದು ಅಂತ ಹೇಳುವುದಕ್ಕಿಂತಲೂ, ತಾಲಿಬಾನಿಗಳ ನರಕದಿಂದ ಪಾರಾದರೆ ಸಾಕು ಅನ್ನುವ ಭಾವನೆ ಅವರಲ್ಲಿ ಗಟ್ಟಿಯಾಗಿರುವಂತಿದೆ.

ಇದನ್ನೂ ಓದಿ:  ಹಾಸನದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಮೇಲೆ ಮಚ್ಚಿನಿಂದ ಹಲ್ಲೆ; ವಿಡಿಯೋ ವೈರಲ್