ಅಮೆರಿಕ ಬಿಟ್ಟು ಹೋಗಿರುವ ಯುದ್ಧ ವಿಮಾನ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಕೇಡಿ ತಾಲಿಬಾನಿಗಳ ಕೈಸೇರಿವೆ!
ಅಮೆರಿಕನ್ನರು ಅಫ್ಘಾನಿಸ್ತಾನದಲ್ಲಿ ಬಿಟ್ಟು ಹೋಗಿರುವ ಸಾಮಗ್ರಿಗಳಲ್ಲಿ 75,000 ಮಿಲಿಟರಿ ವಾಹನಗಳು, 200 ಯುದ್ಧ ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ಗಳು, 6 ಲಕ್ಷಕ್ಕಿಂತ ಜಾಸ್ತಿ ಚಿಕ್ಕ ಮತ್ತು ಹಗುರ ಪ್ರಮಾಣದ ಆಯುಧಗಳು ಸೇರಿವೆ.
ಈ ವಿಡಿಯೋ ನೋಡಿ. ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಈ ಹೆಲಿಕ್ಯಾಪ್ಟರ್ಗಳು ಅಮೆರಿಕ ಮತ್ತು ಬೇರೆ ದೇಶಗಳ ಸೇನೆಗೆ ಸೇರಿರುವಂಥವು. ಇವೆಲ್ಲ ಈಗ ತಾಲಿಬಾನಿಗಳ ಕೈವಶವಾಗಿವೆ. ಕೇವಲ ಈ ಚಾಪರ್ಗಳಷ್ಟೇ ಅಲ್ಲದೆ ಇನ್ನೂ ಚಿಕ್ಕ ಪ್ರಮಾಣದ ಸೇನಾ ವಿಮಾನಗಳು, ಲೆಕ್ಕಕ್ಕೆ ಸಿಗದಷ್ಟು ಶಸ್ತ್ರಾಸ್ತ್ರ, ಮಿಲಿಟರಿ ಉಪಕರಣಗಳು ತಾಲಿಬಾನ್ ವಶವಾಗಿವೆ. ಒಂದು ಅಂದಾಜಿನ ಪ್ರಕಾರ ಅಮೇರಿಕ ಮತ್ತು ಅದರ ಮಿತ್ರಪಡೆಗಳ ಸುಮಾರು ರೂ. 6 ಲಕ್ಷ ಕೋಟಿ ಬೆಲೆಬಾಳುವ ಹೆಲಿಕ್ಯಾಪ್ಟರ್ಗಳು, ಯುದ್ಧ ಸಾಮಗ್ರಿಗಳು ತಾಲಿಬಾನಿಗಳ ಕೈಗೆ ಸಿಕ್ಕಿವೆ!
ಆಫ್ಘನ್ನರ ರಕ್ಷಣೆಗಾಗಿ ತಮ್ಮ ಜೀವಗಳನ್ನು ಒತ್ತೆಯಿಟ್ಟು ತಾಲಿಬಾನಿಗಳೊಂದಿಗೆ ಹೋರಾಡಿದ ಅಫ್ಘಾನಿಸ್ತಾನದ ನಿವೃತ್ತ ಯೋಧರು, ಪೊಲೀಸರು ಈ ಬೆಳವಣಿಗೆಯಿಂದ ಕಂಗಾಲಾಗಿ ಹೇಳಿಕೊಳ್ಳಲಾಗದ ಹಿಂಸೆ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರೆಲ್ಲ ಅಮೆರಿಕದ ನಿರ್ಲಕ್ಷ್ಯ ಧೋರಣೆಯನ್ನು ಶಪಿಸುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಅವರು ಅಷ್ಟೆಲ್ಲ ಶಸ್ತ್ರಾಸ್ತ್ರ, ಹೆಲಿಕ್ಯಾಪ್ಟರ್ ಮತ್ತು ಇನ್ನೂ ನೂರೆಂಟು ಬಗೆಯ ಯುದ್ಧ ಸಾಮಗ್ರಿಗಳನ್ನು ತಾಲಿಬಾನಿಗಳಿಗೆ ಬಿಟ್ಟು ಹೋಗಿದ್ದಾರೆ? ಅತ ಅವರು ಪ್ರಶ್ನಿಸುತ್ತಿದ್ದಾರೆ.
ಅಮೆರಿಕನ್ನರು ಅಫ್ಘಾನಿಸ್ತಾನದಲ್ಲಿ ಬಿಟ್ಟು ಹೋಗಿರುವ ಸಾಮಗ್ರಿಗಳಲ್ಲಿ 75,000 ಮಿಲಿಟರಿ ವಾಹನಗಳು, 200 ಯುದ್ಧ ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ಗಳು, 6 ಲಕ್ಷಕ್ಕಿಂತ ಜಾಸ್ತಿ ಚಿಕ್ಕ ಮತ್ತು ಹಗುರ ಪ್ರಮಾಣದ ಆಯುಧಗಳು ಸೇರಿವೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ವಿಶ್ವದ ಶೇಕಡಾ 85 ರಾಷ್ಟ್ರಗಳು ಹೊಂದಿರುವ ಬ್ಲ್ಯಾಕ್ ಹಾಕ್ ಹೆಲಿಕ್ಯಾಪ್ಟರ್ಗಳು ಈಗ ತಾಲಿಬಾನ್ ವಶದಲ್ಲಿವೆ!
ಇವೆಲ್ಲವುಗಳ ಜೊತೆ, ರಾತ್ರಿ-ವಿಶನ್ ಗಾಗಲ್, ಯುದ್ಧ ಕವಚಗಳು ಮತ್ತು ವೈದ್ಯಕೀಯ ದಾಸ್ತಾನು ತಾಲಿಬಾನಿಗಳ ಕೈ ಸೇರಿದೆ. ಪಂಜಶೀರ್ ಮೇಲೆ ದಾಳಿ ನಡೆಸಲು ತಾಲಿಬಾನಿಗಳು ಇವನ್ನೆಲ್ಲ ಬಳಸುವುದು ನಿಶ್ಚಿತ. ಆದರೆ ಅಮೇರಿಕ ಬಿಟ್ಟು ಹೋಗಿರುವ ವಸ್ತುಗಳಲ್ಲಿ ಬಹಳಷ್ಟು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಾಮಗ್ರಿಗಳಾಗಿವೆ. ಅವುಗಗಳನ್ನು ಬಳಸುವ ವಿಧಾನ ಅದೃಷ್ಟವಶಾತ್ ತಾಲಿಬಾನಿಗಳಿಗೆ ಗೊತ್ತಿಲ್ಲ.
ಇದನ್ನೂ ಓದಿ: Yakshagana: ಬರೆದದ್ದರಲ್ಲಿ ಏನೂ ಇಲ್ಲ ಅನಿಸಿದರೆ ಒಂದು ವಿಡಿಯೋ ಹಾಕಿದ್ದೇನೆ; ಅದನ್ನು ನೋಡಿ ನಕ್ಕುಬಿಡಿ