AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಾರ್ಟ್​ಫೋನ್​​ಗಳ ತೀವ್ರ ಪೈಪೋಟಿಯ ನಡುವೆ ಅಂಬಾನಿ ಲಾಂಚ್ ಮಾಡುತ್ತಿದ್ದಾರೆ ಜಿಯೋಫೋನ್ ನೆಕ್ಸ್ಟ್

ಸ್ಮಾರ್ಟ್​ಫೋನ್​​ಗಳ ತೀವ್ರ ಪೈಪೋಟಿಯ ನಡುವೆ ಅಂಬಾನಿ ಲಾಂಚ್ ಮಾಡುತ್ತಿದ್ದಾರೆ ಜಿಯೋಫೋನ್ ನೆಕ್ಸ್ಟ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Aug 30, 2021 | 8:01 PM

Share

ಜಿಯೋ ಪೋನ್ ಲೈನಪ್​​ನಲ್ಲಿ ಜಿಯೋಪೋನ್ ನೆಕ್ಸ್ಟ್ ಹೊಸ ಸೇರ್ಪಡೆಯಾಗಲಿದೆ. ಕೈಗೆಟುವ ಬೆಲೆಯಲ್ಲಿ ಸಿಗಲಿರುವ ಈ ಸ್ಮಾರ್ಟ್​ಫೋನನ್ನು ಗೂಗಲ್ ಸಹಯೋಗದಲ್ಲಿ ಉತ್ಪಾದಿಸಲಾಗುತ್ತಿದೆ

ಜಿಯೋಫೋನ್ ನೆಕ್ಸ್ಟ್​ಗಾಗಿ ಕಾಯ್ತಾ ಇದ್ದೀರಾ? ಕಾಯುವುದು ಮುಗಿದು ಅದನ್ನು ಪಡೆದುಕೊಳ್ಳುವ ಸಮಯ ಹತ್ತಿರವಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಭಾರತದ ಅತಿದೊಡ್ಡ ಟೆಲಿಕಾಮ್ ಆಪರೇಟರ್ ಆಗಿರುವ ರಿಲಯನ್ಸ್ ಜಿಯೋ ಈಗಾಗಲೇ ತನ್ನ ರಿಟೇಲ್ ಪಾಲುದಾರರ ಜೊತೆ ಮಾತುಕತೆ ನಡೆಸಿದ್ದು ಮುಂಗಡ ಬುಕ್ಕಿಂಗ್ ಆರಂಭಿಸುವಂತೆ ಅವರಿಗೆ ತಿಳಿಸಿದೆ.

ಜಿಯೋ ಪೋನ್ ಲೈನಪ್​​ನಲ್ಲಿ ಜಿಯೋಪೋನ್ ನೆಕ್ಸ್ಟ್ ಹೊಸ ಸೇರ್ಪಡೆಯಾಗಲಿದೆ. ಕೈಗೆಟುವ ಬೆಲೆಯಲ್ಲಿ ಸಿಗಲಿರುವ ಈ ಸ್ಮಾರ್ಟ್​ಫೋನನ್ನು ಗೂಗಲ್ ಸಹಯೋಗದಲ್ಲಿ ಉತ್ಪಾದಿಸಲಾಗುತ್ತಿದೆ. ಆಗಸ್ಟ 28 ರಂದು ವರ್ಚ್ಯುಯಲ್ ಅಗಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ 44 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯ ಚೇರ್ಮನ್ ಮುಕೇಶ್ ಅಂಬಾನಿ ಅವರು ಜಿಯೋಫೋನ್ ನೆಕ್ಸ್ಟ್ ಸೆಪ್ಟೆಂಬರ್ 10 ರಂದು ಅಂದರೆ ಗಣೇಶ್ ಚತುರ್ಥಿಯ ಮುನ್ನಾ ದಿನ ಮಾರುಕಟ್ಟೆಯಲ್ಲಿ ಸಿಗಲಿದೆ ಎಂದು ಘೋಷಿಸಿದರು.

ಜಿಯೋಪೋನ್ ನೆಕ್ಸ್ಟ್ ಬೆಲೆ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲವಾದರೂ ವಾರ್ಷಿಕ ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಅದರ ಬೆಲೆ 3,499 ಆಗಿರಲಿದೆ.

ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಸಿಗಲಿರುವ ಸ್ಮಾರ್ಟ್​ಫೋನ್ ಅಂದರೆ ಜಿಯೋಪೋನ್ ನೆಕ್ಸ್ಟ್ ಆಗಲಿದೆ ಎಂದು ಅಂಬಾನಿ ಸಭೆಯಲ್ಲಿ ಘೋಷಿಸಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ:  6,522 ಮೀಟರ್ ಎತ್ತರದಲ್ಲಿ ಎರಡು ಏರ್ ಬಲೂನ್​ಗಳ ನಡುವಿನ ಹಲಗೆಯ ಮೇಲೆ ನಡೆದು ಸಾಗಿದ ವ್ಯಕ್ತಿ; ಮೈ ಜುಂ ಎನ್ನಿಸುವ ವಿಡಿಯೋ ವೈರಲ್

Published on: Aug 30, 2021 07:17 PM