ಹೊಸ 2021 ಅಪಾಚೆ ಆರ್ ಆರ್ 310 ಮಾರ್ಕೆಟ್ ಪ್ರವೇಶಿಸಿದೆ, ನಿಮ್ಮ ವಾಹನವನ್ನು ಬುಕ್ ಮಾಡಿಲ್ಲವಾದರೆ ಇಂದೇ ಮಾಡಿ

ಹೊಸ 2021 ಅಪಾಚೆ ಆರ್ ಆರ್ 310 ಮಾರ್ಕೆಟ್ ಪ್ರವೇಶಿಸಿದೆ, ನಿಮ್ಮ ವಾಹನವನ್ನು ಬುಕ್ ಮಾಡಿಲ್ಲವಾದರೆ ಇಂದೇ ಮಾಡಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 30, 2021 | 4:02 PM

ಹೊಸ 2021 ಅಪಾಚೆ ಆರ್ ಆರ್ 310 ವಾಹನದಲ್ಲಿ ಹೊಸ ಫೀಚರ್​​ಗಳನ್ನು ನಾವು ಕಾಣಬಹುದಾದರೂ ಅದರ ಮೇನ್ ಲುಕ್ ಮತ್ತು ವಿನ್ಯಾಸಗಳು ಈ ಮೊದಲ ಅಪಾಚೆಗಳಿಗಿಂತ ಭಿನ್ನವಾಗಿರಲಾರದು.

ಟಿವಿಎಸ್ ಅಪಾಚೆ ಹೊಸ ಮಾಡೆಲ್ಗಾಗಿ ಕಾಯುತ್ತಿರುವವರಿಗಾಗಿ ಒಂದು ಶುಭ ಸಮಾಚಾರ. ಹೊಸ ಮಾಡೆಲ್ 2021 ಅಪಾಚೆ ಆರ್ ಆರ್ 310 ಸಿದ್ಧವಾಗಿದೆ ಮತ್ತು ಇಂದು ಅಂದರೆ ಸೋಮವಾರ 30, ಆಗಸ್ಟ್ ರಂದು ಮಾರ್ಕಟ್ಗೆ ಎಂಟ್ರಿಯಾಗುತ್ತಿದೆ. ವಾಹನವನ್ನು ಬಿಡುಗಡೆ ಮಾಡುವ ಮೊದಲು ಟಿವಿಎಸ್ ಕಂಪನಿ ಅದರ ವಿಶೇಷತೆಗಳ ವಿವರ ಬಹಿರಂಗಗೊಳಿಸಿಲ್ಲವಾದರೂ ಹೊಸ ಮಾಡೆಲ್ ಹಲವಾರು ಹೊಸ ಫೀಚರ್​​ಗಳೊಂದಿಗೆ ಲಾಂಚ್ ಅಗಲಿದೆ ಎಂಬ ಸುದ್ದಿಯಿದೆ. ಹಳೆಯ ಅಪಾಚೆ ವಾಹನಕ್ಕೆ ಹೋಲಿಸಿದರೆ, 2021 ಅಪಾಚೆ ಆರ್ ಆರ್ 310 ವಾಹನದಲ್ಲಾಗಿರುವ ಪ್ರಮುಖ ಅಪ್​ಗ್ರೇಡ್​​​​ಗಳಲ್ಲಿ  ಪ್ರಮುಖವಾದದ್ದು ಎಂದರೆ ಪರಿಷ್ಕೃತ ಸಸ್ಪೆನ್ಷನ್ ಸೆಟಪ್. ಟಿವಿಎಸ್ ಮೋಟಾರ್ ಸಂಸ್ಥೆಯು ಈಗಾಗಲೇ ಅಪಾಚೆ ಆರ್‌ಟಿಆರ್ 200 4 ವಿಯಲ್ಲಿ ಮುಂಚಿತವಾಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಫೋರ್ಕ್‌ಗಳನ್ನು ಅಳವಡಿಸಿದೆ, ಮತ್ತು 2021 ಅಪಾಚೆ ಆರ್‌ಆರ್ 310 ನಲ್ಲಿ ನಾವು ಇದೇ ರೀತಿಯ ನವೀಕರಣವನ್ನು ನೋಡಬಹುದಾದ ಸಾಧ್ಯತೆಯಿದೆ.

ಸಸ್ಪೆನ್ಷನ್ ಸೆಟಪ್ ಹೊರತಾಗಿ, ಕಂಪನಿಯು ಹೆಚ್ಚಿನ ಶಕ್ತಿಗಾಗಿ ಎಂಜಿನ್ ಅನ್ನು ಮರು-ಟ್ಯೂನ್ ಮಾಡಬಹುದು. ಹೊಸೂರು ಮೂಲದ ದ್ವಿಚಕ್ರ ವಾಹನ ತಯಾರಕರು ಈಗಾಗಲೇ ಅಪಾಚೆ ಆರ್‌ಟಿಆರ್ 160 4 ವಿ ಮತ್ತು ಎನ್‌ಟಿಒಆರ್‌ಕ್ಯು 125 ಅನ್ನು ನವೀಕರಿಸಿದ್ದಾರೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಹೊಸ ಹೊಸ ಮಾಡೆಲ್ 2021 ಅಪಾಚೆ ಆರ್ ಆರ್ 310 ನಲ್ಲಿ ರೇಸ್ ಇಸಿಯು ಅನ್ನು ಬಳಸಲಾಗಿದೆ ಎನ್ನವ ಅಂಶ ಬಹಿರಂಗಗೊಂಡಿದ್ದು ಅದು ಉತ್ತಮ ಥ್ರೊಟಲ್ ಪ್ರತಿಕ್ರಿಯೆ ಮತ್ತು ವೇಗ ಒದಗಿಸುತ್ತದೆ ಅಂತ ಹೇಳಲಾಗುತ್ತಿದೆ.

ಹೊಸ 2021 ಅಪಾಚೆ ಆರ್ ಆರ್ 310 ವಾಹನದಲ್ಲಿ ಹೊಸ ಫೀಚರ್​​ಗಳನ್ನು ನಾವು ಕಾಣಬಹುದಾದರೂ ಅದರ ಮೇನ್ ಲುಕ್ ಮತ್ತು ವಿನ್ಯಾಸಗಳು ಈ ಮೊದಲ ಅಪಾಚೆಗಳಿಗಿಂತ ಭಿನ್ನವಾಗಿರಲಾರದು. ಹಳೆ ಬೈಕ್​​ಗಳಲ್ಲಿದ್ದ ಟ್ವಿನ್ಪಾಡ್ ಹೆಡ್ಲೈಟ್, ಫುಲ್-ಫೇರಿಂಗ್ ಡಿಸೈನ್, ಸೆಟಪ್ ಸ್ಯಾಡಲ್ ಮತ್ತು ಸೈಡ್ ಸ್ಲಂಗ್ ಎಕ್ಸಾಸ್ಟ್ ಮೊದಲಾದವು ಹೊಸ ಬೈಕ್​​ನಲ್ಲೂ ಮುಂದುವರಿಯಲಿವೆ. ಅಂದಹಾಗೆ, 2021 ಅಪಾಚೆ ಆರ್ ಆರ್ 310 ಎಕ್ಸ್ ಶೋರೂಮ್ ಬೆಲೆ ರೂ. 2.65 ಲಕ್ಷ ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ:  Viral Video: ಇಷ್ಟವಾದ ತಿಂಡಿಯನ್ನು ಎಗರಿಸಲು ಈ ನಾಯಿ ಮಾಡಿದ ಖತರ್ನಾಕ್ ಪ್ಲಾನ್ ಏನು?; ವಿಡಿಯೊ ನೋಡಿ