Viral Video: ಇಷ್ಟವಾದ ತಿಂಡಿಯನ್ನು ಎಗರಿಸಲು ಈ ನಾಯಿ ಮಾಡಿದ ಖತರ್ನಾಕ್ ಪ್ಲಾನ್ ಏನು?; ವಿಡಿಯೊ ನೋಡಿ
ತನಗಿಷ್ಟವಾದ ತಿಂಡಿಯನ್ನು ಹೇಗಾದರೂ ಮಾಡಿ ಪಟಾಯಿಸಬೇಕೆಂದು ತೀರ್ಮಾನಿಸಿದ ಈ ಸೀಕ್ರೆಟ್ ಏಜೆಂಟ್, ಒಂದು ಖತರ್ನಾಕ್ ಉಪಾಯ ಮಾಡಿತು. ಅದೇನು? ನಾಯಿಯ ಮುದ್ದಾದ ವಿಡಿಯೊ ಇಲ್ಲಿದೆ ನೋಡಿ.

ಕೆಲವು ಸಾಕು ಪ್ರಾಣಿಗಳು ತಮ್ಮ ಚುರುಕು ಬುದ್ಧಿಮತ್ತೆಯಿಂದ ಎಲ್ಲರ ಗಮನ ಸೆಳೆಯುತ್ತವೆ. ಅದರಲ್ಲೂ ಶ್ವಾನಗಳು ತಮ್ಮ ತುಂಟಾಟದಿಂದ ಮನೆ ಮಂದಿಯನ್ನು ರಂಜಿಸುತ್ತಿರುತ್ತವೆ. ತುಸುವೇ ಪ್ರೀತಿ ತೋರಿದರೂ ಸಾಕು, ಬೆಟ್ಟದಷ್ಟು ಪ್ರೀತಿಯನ್ನು ಅವು ನಮಗೆ ಮರಳಿ ನೀಡುತ್ತವೆ ಎಂದು ಪ್ರಾಣಿ ಪ್ರಿಯರು ಶ್ವಾನಗಳ ಕುರಿತಾಗಿ ಹೆಮ್ಮೆಯಿಂದ ನುಡಿಯುವುದನ್ನು ಕೇಳಿಯೇ ಇರುತ್ತೀರಿ. ಅಂತಹವುಗಳ ತುಂಟಾಟಗಳು ಸಾಮಾಜಿಕ ಜಾಲತಾಣದಲ್ಲೂ ಸಖತ್ ಸುದ್ದಿಯಾಗುತ್ತವೆ. ಅವನ್ನು ಹಂಚಿಕೊಂಡು ಪ್ರಾಣಿಪ್ರಿಯರು ಮನಸಾರೆ ನಗುತ್ತಾರೆ, ಸಂತಸಪಡುತ್ತಾರೆ. ಕೆಲಸದ ಒತ್ತಡದ ಮಧ್ಯೆ ಮನಸ್ಸು ಹಗುರಾಗಲು ಇಂಥವುಗಳು ಸಹಕಾರಿ ಎಂಬುದು ಅವರ ಅಂಬೋಣ.
ಅಂಥದ್ದೇ ಒಂದು ವಿಡಿಯೊ ಇಲ್ಲಿದೆ. ಬಾಯಲ್ಲಿ ನೀರೂರಿಸುವ ತಿಂಡಿಯನ್ನು ಎದುರಿನ ಟೇಬಲ್ ಮೇಲಿಟ್ಟು, ತಿನ್ನಲು ತಯಾರಾಗಿರುವ ಯುವತಿಗೆ ಒಂದು ನಾಯಿ ಬಂದು ಪ್ರೀತಿಯಿಂದ ಮಾತನಾಡಿಸುತ್ತದೆ. ಆಕೆಯೂ ಅದನ್ನು ಮುದ್ದು ಮಾಡಲು ತೊಡಗಿದಾಗ, ಚಾಕಚಕ್ಯತೆಯಿಂದ ಟೇಬಲ್ ಮೇಲಿದ್ದ ತಿಂಡಿಯನ್ನು ಎಗರಿಸಿಕೊಂಡ ನಾಯಿ ಪರಾರಿಯಾಗುತ್ತದೆ. ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿರುವ ಈ ವಿಡಿಯೊಕ್ಕೆ ಸುಂದರ ಅಡಿಬರಹವನ್ನೂ ನೀಡಲಾಗಿದೆ.
ನಾಯಿಗೆ ಸೀಕ್ರೆಟ್ ಏಜೆಂಟ್ ಎಂದು ಕರೆಯಲಾಗಿದ್ದು, ಅದು ತನ್ನ ಮಿಷನ್ ಸಾಧನೆಗೋಸ್ಕರ ಏನು ಮಾಡುತ್ತದೆ ನೋಡಿ ಎಂಬರ್ಥದಲ್ಲಿ ಕ್ಯಾಪ್ಶನ್ ನೀಡಿ ವಿಡಿಯೊ ಹಂಚಿಕೊಳ್ಳಲಾಗಿದೆ.
ವಿಡಿಯೊ ಇಲ್ಲಿದೆ:
View this post on Instagram
ವಿಡಿಯೊವನ್ನು ಡಾಗೊಸ್ ಬೀಯಿಂಗ್ ಡಾಗೋಸ್ ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ, ಈಗಾಗಲೇ 1.4 ಲಕ್ಷಕ್ಕೂ ಅಧಿಕ ವೀಕ್ಷಣೆ ಈ ವಿಡಿಯೊಗೆ ಲಭ್ಯವಾಗಿದ್ದು, ನೆಟ್ಟಿಗರು ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ‘ಈ ವಿಡಿಯೊ ನೋಡುತ್ತಲೇ ಇರಬೇಕು ಎನಿಸುತ್ತಿದೆ’ ಎಂದು ಒಬ್ಬರು ಬರೆದಿದ್ದರೆ, ಮತ್ತೊಬ್ಬರು, ‘ಈ ನಾಯಿಗೆ ಅದ್ಭುತವಾಗಿ ತರಬೇತಿ ನೀಡಲಾಗಿದೆ’ ಎಂದ ಹೊಗಳಿದ್ದಾರೆ.
ಇದನ್ನೂ ಓದಿ:
ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯ ನೀರು! ಇದು ಇಂದು ನಿನ್ನೆಯ ಕಥೆಯಲ್ಲ
ಕಲಬುರಗಿ ಯುವಕನ ಅಂಗಾಂಗ ದಾನ; ಜಿರೋ ಟ್ರಾಫಿಕ್ನಲ್ಲಿ ಹೈದರಾಬಾದ್ಗೆ ರವಾನೆ
(A dog distracts woman and steal food got netizens attention watch video)