ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯ ನೀರು! ಇದು ಇಂದು ನಿನ್ನೆಯ ಕಥೆಯಲ್ಲ

ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿದಂತೆ ಆಂಧ್ರದ ಕೆಲ ಜಿಲ್ಲೆಗಳಿಗೆ ತುಂಗಭದ್ರಾ ಜಲಾಶಯದ ನೀರೇ ಆಧಾರ. ರೈತರ ಜೀವನಾಡಿಯ ಜೊತೆಗೆ ಕುಡಿಯುವ ನೀರನ್ನಾಗಿ ಇದನ್ನೆ ಬಳಸಲಾಗುತ್ತಿದೆ.

ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯ ನೀರು! ಇದು ಇಂದು ನಿನ್ನೆಯ ಕಥೆಯಲ್ಲ
ಹಸಿರು ಬಣ್ಣಕ್ಕೆ ತಿರುಗಿದ ನೀರು
Follow us
TV9 Web
| Updated By: sandhya thejappa

Updated on:Aug 28, 2021 | 3:05 PM

ಬಳ್ಳಾರಿ: ನೀರು ಜೀವ ಜಲ ಎಂಬ ಮಾತು ಸವಕಲು ಎದ್ದು ಹೋಗಿದೆ. ಇಂತಹದೊಂದು ಭಾವನೆ ಬರಲು ಕಾರಣ ಜಲಮೂಲಗಳನ್ನು ರಕ್ಷಿಸಿಕೊಳ್ಳಲು ವಿಫಲರಾಗಿರುವುದು. ಕಳೆದ ಹಲವು ವರ್ಷಗಳಿಂದ ಕಲ್ಯಾಣ ಕರ್ನಾಟದ ಜಲಾಶಯವೊಂದರ ನೀರು ವಿಷಕಾರಿಯಾಗುತ್ತಿದೆ. ಈ ಭಾಗದ ಜನರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗುವುದು ಜನರ ಆತಂಕಕ್ಕೆ ಕಾರಣವಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯ, ಕರ್ನಾಟಕ ಆಂಧ್ರ ಸೇರಿದಂತೆ ಏಳೆಂಟು ಜಿಲ್ಲೆಗಳ ಜೀವನಾಡಿ. ಗಂಗಾ ಸ್ನಾನ ತುಂಗಾ ಪಾನ ಎಂಬ ಮಾತಿದೆ. ಆದರೆ ತುಂಗಭದ್ರಾ ಜಲಾಶಯದ ನೀರೇ ಈಗ ವಿಷವಾಗಿದೆ. ಇದು ಇಂದು ನಿನ್ನೆಯ ಕಥೆಯಲ್ಲ. ಜಲಾಶಯ ತುಂಬುವುದೊಂದೇ ತಡ ಒಂದು ತಿಂಗಳು ಕಳೆಯುತ್ತಿದ್ದಂತೆ ಇಡೀ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರೆಲ್ಲಾ ಹಸಿರು ಬಣ್ಣಕ್ಕೆ ತಿರುಗಿ ನೀರು ಸಂಪೂರ್ಣವಾಗಿ ವಿಷಕಾರಿಯಾಗುತ್ತಿದೆ. ಪ್ರತಿ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಜಲಾಶಯ ನೀರು ಹಸಿರಾಗುತ್ತಿತ್ತು. ಆದರೆ ಈ ವರ್ಷ ಆಗಸ್ಟ್ ತಿಂಗಳಲ್ಲಿಯೇ ನೀರು ಹಸಿರು ಬಣ್ಣಕ್ಕೆ ತಿರುಗಿದೆ.

ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿದಂತೆ ಆಂಧ್ರದ ಕೆಲ ಜಿಲ್ಲೆಗಳಿಗೆ ತುಂಗಭದ್ರಾ ಜಲಾಶಯದ ನೀರೇ ಆಧಾರ. ರೈತರ ಜೀವನಾಡಿಯ ಜೊತೆಗೆ ಕುಡಿಯುವ ನೀರನ್ನಾಗಿ ಇದನ್ನೆ ಬಳಸಲಾಗುತ್ತಿದೆ. ಆದರೆ ಜಲಾಶಯದ ಕುಡಿಯುವ ನೀರು ಈಗ ವಿಷಕಾರಿಯಾಗುತ್ತಿದೆ. ಪ್ರತಿ ವರ್ಷ ನೀರು ಹಸಿರು ಬಣ್ಣಕ್ಕೆ ತಿರುಗುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ವಿಷಕಾರಿ ನೀರು ಕೇವಲ ಮನುಷ್ಯರಿಗೆ ಮಾತ್ರ ಅಲ್ಲ, ನೀರಿನಲ್ಲಿರುವ ಜಲಚರಗಳಿಗೂ ಹಸಿರು ಬಣ್ಣದ ನೀರು ಕುತ್ತು ತಂದಿದೆ.

ಪಶ್ಚಿಮ ಘಟ್ಟದಲ್ಲಿ ಜನ್ಮ ತಾಳಿ ಅಲ್ಲಿಂದ ಹಲವು ಜಿಲ್ಲೆಗಳ ಮೂಲಕ ಹರಿದು ನೀರು ಜಲಾಶಯವನ್ನು ಸೇರುತ್ತದೆ. ಈ ನಿಟ್ಟಿನಲ್ಲಿ ಅಲ್ಲಿಂದ ಇಲ್ಲಿವರೆಗೆ ಸಾಕಷ್ಟು ಕಾರ್ಖಾನೆಗಳು ಇವೆ. ಜೊತೆಗೆ ತುಂಗಭದ್ರಾ ನದಿ ಪಾತ್ರದಲ್ಲಿ ಕೃಷಿ ಜಮೀನುಗಳಿವೆ. ಕಾರ್ಖಾನೆಗಳಿಂದ ನದಿಗೆ ಬಿಡುವ ವಿಷಕಾರಿ ತ್ಯಾಜ್ಯ, ಮತ್ತೊಂದೆಡೆ ಜಲಾನಯನ ಪ್ರದೇಶದಲ್ಲಿ ಕೃಷಿ ಭೂಮಿಯಲ್ಲಿ ಅತಿಹೆಚ್ಚು ರಸಗೊಬ್ಬರ ಹಾಗೂ ಔಷಧಿ ಬಳಕೆ ಮಾಡುವುದರಿಂದ ಇದರ ತ್ಯಾಜ್ಯದ ನೀರು ನೇರವಾಗಿ ನದಿಗೆ ಹರಿದು ಬರುತ್ತಿದೆ. ರಸಗೊಬ್ಬರ, ಕ್ರಿಮಿನಾಶಕ ಹಾಗೂ ಕೈಗಾರಿಕೆಗಳ ತ್ಯಾಜ್ಯದಿಂದ ಸಯನೋ ಬ್ಯಾಕ್ಟೀರಿಯಾ (blue green algae) ಉತ್ಪತ್ತಿಯಾಗುತ್ತದೆ.

ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಮೋಡ ಕವಿದ ವಾತವಾರಣವಿದ್ದು, ಈ ವೇಳೆ ಬಿರುಬಿಸಿಲು ಬಂದಾಗ ಅತಿಹೆಚ್ಚು ಸಯಾನೋ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಆಗ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಈ ನೀರನ್ನ ನೇರವಾಗಿ ಜಾನುವಾರು, ಜನರು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಈ ನೀರನ್ನ ಬಳಕೆ ಮಾಡಿದರೆ ಚರ್ಮರೋಗ ಬರುತ್ತದೆ. ಪ್ರತಿ ವರ್ಷ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಕೈಗಾರಿಕೆಗಳ ತ್ಯಾಜ್ಯ ಹಾಗೂ ಜಲಾನಯನ ಕೃಷಿ ಪ್ರದೇಶದ ರಸಗೊಬ್ಬರ, ಕ್ರಿಮಿನಾಶಕ ತ್ಯಾಜ್ಯದ ನೀರು ನದಿಗೆ ಸೇರುವುದೇ ಇದಕ್ಕೆ ಕಾರಣ ಅಂತ ಪರಿಸರ ಹಾಗೂ ವನ್ಯಜೀವಿ ತಜ್ಞ ಡಾ.ಸಮದ್ ಕೊಟ್ಟೂರು ಹೇಳಿದರು.

ಇದನ್ನೂ ಓದಿ

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮುಂಬೈಗೆ ತೆರಳಿದ ಸಂತ್ರಸ್ತೆ; ಮೈಸೂರಿನತ್ತ ಹೊರಟ ಡಿಐಜಿ ಪ್ರವೀಣ್ ಸೂದ್

‘ಮಹಿಳೆ ಧರಿಸುವ ಉಡುಪುಗಳು ರೇಪ್​ಗೆ ಕಾರಣ ಅಲ್ಲ’: ಗ್ಯಾಂಗ್​ ರೇಪ್​ ಪ್ರಕರಣಕ್ಕೆ ಕವಿತಾ ಲಂಕೇಶ್​ ಪ್ರತಿಕ್ರಿಯೆ

(water of the Tungabhadra Reservoir has turned green)

Published On - 10:57 am, Sat, 28 August 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ