AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ಯುವಕನ ಅಂಗಾಂಗ ದಾನ; ಜಿರೋ ಟ್ರಾಫಿಕ್​ನಲ್ಲಿ ಹೈದರಾಬಾದ್​ಗೆ ರವಾನೆ

ಹತ್ತೊಂಬತ್ತು ವರ್ಷದ ಯುವಕನೋರ್ವ ಮಹಡಿ ಮೇಲಿಂದ ಕಾಲು ಜಾರಿ ಬಿದ್ದಿದ್ದ. ಆತನನ್ನು ಕಲಬುರಗಿ ನಗರದ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನದ ಹಿಂದೆ ಆತನ ಮೆದುಳು ನಿಷ್ಕ್ರಿಯವಾಗಿತ್ತು.

ಕಲಬುರಗಿ ಯುವಕನ ಅಂಗಾಂಗ ದಾನ; ಜಿರೋ ಟ್ರಾಫಿಕ್​ನಲ್ಲಿ ಹೈದರಾಬಾದ್​ಗೆ ರವಾನೆ
ಅಂಗಾಂಗ ರವಾನೆಗೆ ಜಿರೋ ಟ್ರಾಫಿಕ್
Follow us
TV9 Web
| Updated By: sandhya thejappa

Updated on:Aug 28, 2021 | 9:41 AM

ಕಲಬುರಗಿ: ಇತ್ತೀಚೆಗೆ ಅಂಗಾಗ ದಾನದ ಪರಿಕಲ್ಪನೆ ಹೆಚ್ಚಾಗುತ್ತಿದೆ. ಮೃತ ವ್ಯಕ್ತಿಯ ಕೆಲ ಅಂಗಾಗಗಳನ್ನು ನಿಗದಿತ ಸಮಯದಲ್ಲಿ ತೆಗೆದು, ಬೇರೆಯವರಿಗೆ ಹಾಕಿದರೆ ಅನೇಕರ ಜೀವ ಉಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಲಬುರಗಿ ನಗರದ ಚಿರಾಯು ಆಸ್ಪತ್ರೆಯ ವೈದ್ಯರು ಕೆಲಸ ಮಾಡಿದ್ದು, ಇಂದು (ಆಗಸ್ಟ್ 28) ಕಲಬುರಗಿಯಿಂದ ಜಿರೋ ಟ್ರಾಫಿಕ್ ಮೂಲಕ ಮೃತ ಯುವಕನ ಅಂಗಾಗವನ್ನು ಹೈದರಾಬಾದ್​ಗೆ ಕಳಿಸಿ, ಅಲ್ಲಿಂದ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕಳುಹಿಸಲಾಗಿದೆ.

ಘಟನೆ ವಿವರ ಹತ್ತೊಂಬತ್ತು ವರ್ಷದ ಯುವಕನೋರ್ವ ಮಹಡಿ ಮೇಲಿಂದ ಕಾಲು ಜಾರಿ ಬಿದ್ದಿದ್ದ. ಆತನನ್ನು ಕಲಬುರಗಿ ನಗರದ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನದ ಹಿಂದೆ ಆತನ ಮೆದುಳು ನಿಷ್ಕ್ರಿಯವಾಗಿತ್ತು. ಈ ಬಗ್ಗೆ ವೈದ್ಯರು ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಜೊತೆಗೆ ಅಂಗಾಗ ಧಾನದ ಬಗ್ಗೆಯೂ ಮಾಹಿತಿ ನೀಡಿದ್ದರು. ವೈದ್ಯರ ಮಾತಿಗೆ ಯುವಕನ ಕುಟುಂಬದವರು ಗ್ರೀನ್ ಸಿಗ್ನಲ್ ನೀಡಿದ್ದರು. ಹೀಗಾಗಿ ಕಳೆದ ಎರಡು ದಿನಗಳಿಂದ ಅನೇಕ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಯುವಕನ ಮೆದುಳು ನಿಷ್ಕ್ರಿಯವಾಗಿದ್ದನ್ನು ಖಚಿತಪಡಿಸಿಕೊಂಡು, ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬರಿಗೆ ಲಿವರ್ ಅವಶ್ಯಕತೆ ಇತ್ತು. ಹೀಗಾಗಿ ಇಂದು ಮುಂಜಾನೆ ಮೃತ ಯುವನಕ ಲಿವರ್​ನ ತೆಗೆದು ಹೈದರಾಬಾದ್​ಗೆ ಕಳುಹಿಸಲಾಗಿದೆ. ನಂತರ ಹೈದರಾಬಾದ್​ನಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುತ್ತಿದೆ.

ಜಿರೋ ಟ್ರಾಫಿಕ್ ವ್ಯವಸ್ಥೆ ಮೃತರ ಅಂಗಾಗಳನ್ನು ತೆಗೆದು ಬೇರೆಯವರಿಗೆ ಹಾಕಬೇಕಾದರೆ ನಿಗದಿತ ಸಮಯದಲ್ಲಿಯೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಬೇಕು. ಹೀಗಾಗಿ ವಿಳಂಬವನ್ನು ತಪ್ಪಿಸಲು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಕಲಬುರಗಿಯಿಂದ ಹೈದರಾಬಾದ್ ವರಗೆ ಕಲಬುರಗಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಮುಂದೆ ತೆಲಂಗಾಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಕೂಡಾ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. 221 ಕಿಲೋಮೀಟರ್ ವರಗೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯವಾಗಿ ಹೈದರಾಬಾದ್ ವಿಮಾನ ನಿಲ್ದಾಣ ಮುಟ್ಟಲು ನಾಲ್ಕು ಗಂಟೆ ಸಮಯಬೇಕು. ಆದರೆ ಜಿರೋ ಟ್ರಾಫಿಕ್​ನಿಂದಾಗಿ ಕೇವಲ ಎರಡುವರೆ ಗಂಟೆಯಲ್ಲಿ ಹೈದರಾಬಾದ್ ತಲುಪಬಹುದಾಗಿದೆ.

ಮಹಡಿ ಮೇಲಿಂದ ಬಿದ್ದಿದ್ದ ಯುವಕನ ಮೆದುಳು ನಿಷ್ಕ್ರಿಯ ಆಗಿತ್ತು. ಕುಟುಂಬದವರು ಅಂಗಾಗ ದಾನ ಮಾಡಲು ಒಪ್ಪಿಕೊಂಡಿದ್ದರು. ಹೀಗಾಗಿ ಇಂದು ಬೆಂಗಳೂರನಿಂದ ಬಂದಿದ್ದ ನುರಿತ ವೈದ್ಯರ ತಂಡ, ಯುವಕನ ಲಿವರ್ನ ತಗೆದು ಅದನ್ನು ಬೆಂಗಳೂರಿಗೆ ತಗೆದುಕೊಂಡು ಹೋಗಿದ್ದಾರೆ. ಲಿವರ್ ಸಾಗಿಸಲು ಪೊಲೀಸರು ಮತ್ತು ರಾಜ್ಯ ಸರ್ಕಾರ ಸಹಾಯ ಮಾಡಿದೆ ಎಂದು ಚಿರಾಯು ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಹೇಳಿದರು.

ನಮ್ಮ ಮಗನನ್ನು ಉಳಿಸಿಕೊಳ್ಳಲು ನಾವು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಆತನಿಂದ ಬೇರೆಯವರಿಗೆ ಅನಕೂಲವಾಗಲೆಂದು ಅಂಗಾಗ ದಾನ ಮಾಡಿದ್ದೇವೆ ಅಂತ ಯುವಕನ ಕುಟುಂಬಸ್ಥರು ತಿಳಿಸಿದರು.

ಇದನ್ನೂ ಓದಿ

ಹಾಸನದಲ್ಲಿ ಪುರಾತನ ಕಾಲದ ಶಿವಲಿಂಗವನ್ನು ಅಗೆದು ತೆಗೆದ ಆರೋಪಿಗಳ ವಿರುದ್ಧ ಕೇಸ್!

ಕೋಲಾರದ ಕಲ್ಲು ಕುಟುಕರ ಸವಾಲಿನಂತಹ ಕಷ್ಟದ ಕೆಲಸಕ್ಕೆ ಬೇಕಿದೆ ಕಾನೂನಾತ್ಮಕ ಪರಿಹಾರ

(young man organs were transported From Kalaburagi to Hyderabad by Zero traffic)

Published On - 9:39 am, Sat, 28 August 21

ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ