ಕೋಲಾರದ ಕಲ್ಲು ಕುಟುಕರ ಸವಾಲಿನಂತಹ ಕಷ್ಟದ ಕೆಲಸಕ್ಕೆ ಬೇಕಿದೆ ಕಾನೂನಾತ್ಮಕ ಪರಿಹಾರ

ಹೊರ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತಮಿಳುನಾಡಿಗೂ ಕೂಡಾ ಇಲ್ಲಿಂದ ಕಲ್ಲುಗಳನ್ನು ಕಳಿಸಲಾಗುತ್ತದೆ. ನಿತ್ಯ ಕನಿಷ್ಠವೆಂದರೂ 50 ರಿಂದ 100 ಲಾರಿ ಲೋಡ್ ಕಲ್ಲುಗಳನ್ನು ಸರಬರಾಜು ಮಾಡಲಾಗುತ್ತದೆ.

ಕೋಲಾರದ ಕಲ್ಲು ಕುಟುಕರ ಸವಾಲಿನಂತಹ ಕಷ್ಟದ ಕೆಲಸಕ್ಕೆ ಬೇಕಿದೆ ಕಾನೂನಾತ್ಮಕ ಪರಿಹಾರ
ಕಟೆದ ಕಲ್ಲು
Follow us
TV9 Web
| Updated By: preethi shettigar

Updated on: Aug 28, 2021 | 7:42 AM

ಕೋಲಾರ: ನೆತ್ತಿಯ ಮೇಲೆ ಸುಡುವ ಸೂರ್ಯನ ಬಿಸಿಲು, ಬಂಡೆಯ ಮೇಲೂ ಕಾಯುತ್ತಿರುವ ಬೆಂಕಿ. ಇವುಗಳ ನಡುವೆ ಸುತ್ತಿಗೆ-ಉಳಿ ಹಿಡಿದು ಕಲ್ಲು ಕಡಿಯುತ್ತಿರುವ ಕಾರ್ಮಿಕರು. ಈ ಸವಾಲಿನಂತಹ ಕೆಲಸ ಮಾಡುವ ಜನರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿ ಸುತ್ತಮುತ್ತ ಕಂಡುಬರುತ್ತಾರೆ. ಟೇಕಲ್ ಹೋಬಳಿಯ ಓಬಟ್ಟಿ, ಜಂಗಾಲಹಳ್ಳಿ, ಅನಿಗಾನಹಳ್ಳಿ, ವೀರಕಪುತ್ರ, ಹಳೇಪಾಳ್ಯ ಸೇರಿದಂತೆ ಸುಮಾರು ಹತ್ತಾರು ಗ್ರಾಮಗಳ ಜನರು ಹಲವಾರು ವರ್ಷಗಳಿಂದ ಇಲ್ಲಿರುವ ಬೆಟ್ಟವನ್ನೇ ನಂಬಿ ಬದುಕುತ್ತಿರುವ ಜನ. ಇಲ್ಲಿ ಕಲ್ಲು ಕುಟುಕ ಕೆಲಸ ನಿರ್ವಹಿಸುವವರೇ ಹೆಚ್ಚಾಗಿ ವಾಸಿಸುತ್ತಾರೆ. ದಿನಪೂರ್ತಿ ತಮ್ಮ ಗ್ರಾಮದ ಬಳಿ ಇರುವ ಬೆಟ್ಟದಲ್ಲಿ ಚಪ್ಪಡಿ ಕಲ್ಲುಗಳು, ಸೈಜ್ ಕಲ್ಲುಗಳು, ಪಾಯದ ಕಲ್ಲುಗಳನ್ನು ಒಡೆದು ಮಾರಾಟ ಮಾಡುತ್ತಾರೆ. ಇನ್ನು ಬೆಟ್ಟದಲ್ಲಿ ಕಲ್ಲು ಹೊಡೆಯೋದು ಅಷ್ಟು ಸುಲಭದ ಕೆಲಸವಲ್ಲ. ಬಂಡೆಯನ್ನು ಒಡೆಯಲು ಬೆಂಕಿ ಹಾಕಿ ಕಾಯಿಸಿ ಆ ನಂತರ ಕಲ್ಲು ಬಂಡೆಯಿಂದ ಚಪ್ಪಡಿ ಕಲ್ಲುಗಳನ್ನು ಬಿಡಿಸುತ್ತಾರೆ. ಅಪಾರ ಅನುಭವವಿದ್ದವರಿಗೆ ಮಾತ್ರ ಸಾಧ್ಯವಾಗುವ ಕೆಲಸವಿದು. ಈ ವೃತ್ತಿ ನಿರ್ವಹಿಸುತ್ತಿರುವವರು ತಲೆತಲಾಂತರಗಳಿಂದ ಇದೇ ವೃತ್ತಿ ಮಾಡಿಕೊಂಡು ಬಂದಿದ್ದಾರೆ.ಆದರೆ ಕಲ್ಲನ್ನೇ ನೆಚ್ಚಿಕೊಂಡಿದ್ದ ಈ ಮಂದಿಗೆ ಇದೀಗ ಸಂಕಷ್ಟವೊಂದು ಎದುರಾಗಿದ್ದು ಈಕುರಿತ ವಿಶೇಷ ವರದಿ ಇಲ್ಲಿದೆ.

ಕಲ್ಲು ಒಡೆದು ಜೀವನ ನಡೆಸುತ್ತಿರುವ ಇಲ್ಲಿಯ ಜನರಿಗೆ ಜಿಲ್ಲಾಡಳಿತ ಕಲ್ಲು ಕೆಲಸ ಮಾಡದಂತೆ ನಿರ್ಬಂಧ ವಿಧಿಸಿದೆ. ಅನುಮತಿ ಪಡೆದು ಕಲ್ಲು ಕೆಲಸ ಮಾಡುವಂತೆ ಆದೇಶ ಹೊರಡಿಸಿದೆ. ಹೀಗಾಗಿ, ಈ ಗ್ರಾಮಗಳ ನೂರಾರು ಕುಟುಂಬಗಳು ಇಂದು ಕೆಲಸ ಇಲ್ಲದೇ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ಹಾಗಾಗಿ ನಮಗೆ ಕಲ್ಲು ಕೆಲಸ ಮಾಡಲು ಕಾನೂನಿನ ಪ್ರಕಾರವೇ ಅವಕಾಶ ಮಾಡಿಕೊಡಿ, ನಾವು ಸರ್ಕಾರಕ್ಕೂ ಬೇಕಾದರೆ ರಾಜಧನ ಕಟ್ಟಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎನ್ನುತ್ತಿದ್ದಾರೆ ಇಲ್ಲಿನ ಕಲ್ಲು ಕುಟುಕರು.

ಹೊರ ರಾಜ್ಯಗಳಲ್ಲೂ ಇದೆ ಬೇಡಿಕೆ ಕಲ್ಲು ಕೆಲಸ ಮಾಡಿ ತೆಗೆದ ಚಪ್ಪಡಿ ಕಲ್ಲುಗಳು, ಪಾಯದ ಕಲ್ಲುಗಳು ಇದೆಲ್ಲವೂ ಕೋಲಾರ ಜಿಲ್ಲೆಯಷ್ಟೇ ಹೊರ ಜಿಲ್ಲೆಗಳಿಂದಲೂ ಬಂದು ಕಲ್ಲು ಖರೀದಿ ಮಾಡಿ ಹೋಗುತ್ತಾರೆ. ಅಷ್ಟೇ ಅಲ್ಲದೆ ಹೊರ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತಮಿಳುನಾಡಿಗೂ ಕೂಡಾ ಇಲ್ಲಿಂದ ಕಲ್ಲುಗಳನ್ನು ಕಳಿಸಲಾಗುತ್ತದೆ. ನಿತ್ಯ ಕನಿಷ್ಠವೆಂದರೂ 50 ರಿಂದ 100 ಲಾರಿ ಲೋಡ್ ಕಲ್ಲುಗಳನ್ನು ಸರಬರಾಜು ಮಾಡಲಾಗುತ್ತದೆ. ಸರ್ಕಾರದ ಅನುಮತಿ ಇಲ್ಲದೆ ಕಲ್ಲು ಕೆಲಸ ಮಾಡುವಂತಿಲ್ಲ ಎಂಬ ಇತ್ತೀಚಿಗೆ ಜಿಲ್ಲಾಡಳಿತವೇನೋ ಆದೇಶಿಸಿದೆ. ನಾವು ಸರ್ಕಾರದ ಕಾನೂನಿನ ಅಡಿಯಲ್ಲೇ ಕೆಲಸ ಮಾಡಲು ಸಿದ್ದ, ಆದರೆ ಸರ್ಕಾರ ಇದನ್ನು ನಮಗೆ ಕಾನೂನಾತ್ಮಕವಾಗಿ ಮಾಡಿ ಕೊಡುತ್ತಿಲ್ಲ ಎಂದು ಇಲ್ಲಿಯ ಕಲ್ಲು ಕುಟುಕರು ಆರೋಪಿಸುತ್ತಿದ್ದಾರೆ.

ಪಕ್ಷಾತೀತವಾಗಿ ನಿಂತ ಜನಪ್ರತಿನಿಧಿಗಳು ಇನ್ನು ಯಾವಾಗ ಸಾವಿರಾರು ಜನರು ತಮಗೆ ಊಟಕ್ಕೂ ತೊಂದರೆಯಾಗುತ್ತಿದೆ ಎಂದು ಕಣ್ಣೀರು ಹಾಕುತ್ತಿದ್ದಂತೆ ಜಿಲ್ಲೆಯ ಜನಪ್ರತಿನಿಧಿಗಳು ನಾಮುಂದು ತಾಮುಂದು ಎಂದು ಸಹಾಯ ಮಾಡಲು ಮುಂದಾಗಿದ್ದಾರೆ. ಸಂಸದ ಮುನಿಸ್ವಾಮಿ ಅವರ ನೇತೃತ್ವದಲ್ಲಿ ಒಂದಷ್ಟು ಜನರು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ನಮಗೆ ಮೊದಲಿನಂತೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಕೂಡಾ ಸ್ಥಳೀಯ ಕಲ್ಲು ಕುಟುಕ ಕುಟುಂಬಗಳು ಹಾಗೂ ಅವರ ಮುಖಂಡರುಗಳು ಸಮಸ್ಯೆ ಆಲಿಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿಗಳಿಗೆ ಆದಷ್ಟು ಬೇಗ ಕಲ್ಲು ಕುಟುಕರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

Kolar Rock Workers Problem

ಕಲ್ಲು ಕಟೆಯುತ್ತಿರುವ ಕಾರ್ಮಿಕ

ಸದ್ಯ ಕಲ್ಲು ಕುಟುಕರ ಸಮಸ್ಯೆಗಳಿಗೆ ಸ್ಪಂದಿಸಿರುವ ಕೋಲಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕಾನೂನಾತ್ಮಕವಾಗಿ ಈ ಸಾವಿರಾರು ಕುಟುಂಬಗಳಿಗೆ ಕಲ್ಲು ಕೆಲಸ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಸೆಕ್ಷನ್ 3ಎಫ್ ಪ್ರಕಾರ ಅವರಿಗೆ ಯಾವುದೇ ಸಿಡಿಮದ್ದು ಬಳಸದೆ, ದೊಡ್ಡ ದೊಡ್ಡ ಯಂತ್ರಗಳನ್ನು ಬಳಸದೇ ಕಲ್ಲು ಕೆಲಸ ಮಾಡಲು ಅವಕಾಶವಿದೆ. ಅದಕ್ಕೆ ಬೇಕಾದ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ದಿನದ ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಕಿಯ ಮೇಲೆ ನಿಂತು ಬೆವರು ಹರಿಸುತ್ತಿದ್ದ ಜನರಿಗೆ ಸರ್ಕಾರದ ಕಾನೂನುಗಳು ಮತ್ತಷ್ಟು ಸುಡುತ್ತಿದ್ದು, ಜನರು ಕೆಲಸವಿಲ್ಲ ಹಸಿವಿನಿಂದ ಸಾಯುವ ಮೊದಲು ಈ ಕೂಲಿ ಮಾಡಿ ಬದುಕುವ ಜನರು ತಮ್ಮ ಪಾಡಿಗೆ ತಾವು ಬದುಕಲು ಅವಕಾಶ ಮಾಡಿಕೊಡಬೇಕಿದೆ.

ವಿಶೇಷ ವರದಿ: ರಾಜೇಂದ್ರ ಸಿಂಹ ಟಿವಿ9 ಕನ್ನಡ, ಕೋಲಾರ

ಇದನ್ನೂ ಓದಿ: 

ಕೋಲಾರ: ಚಿನ್ನದ ನಾಡಿನಲ್ಲಿವೆ ಅಪರೂಪದ ಕೃಷ್ಣಮೃಗಗಳು!; ಬೇಕಿದೆ ಜವಾಬ್ದಾರಿಯುತ ರಕ್ಷಣೆಯ ಹೊಣೆ

ಕಲಬುರಗಿಯಲ್ಲಿ ತಯಾರಾಗುತ್ತಿವೆ ಗೋಮಯ ರಾಖಿಗಳು; ಪರಿಸರದ ಕಾಳಜಿಯಲ್ಲಿ ಮತ್ತೊಂದು ಮೈಲಿಗಲ್ಲು

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ