Shocking Video: ಬಸ್ಸನ್ನು ಓವರ್ ​ಟೇಕ್​ ಮಾಡೋಕೆ ಹೋಗಿ ಆಗಿದ್ದೇ ಬೇರೆ! ಒಂದು ಸೆಕೆಂಡ್​ ತಡವಾಗಿದ್ರೂ ವ್ಯಕ್ತಿಯ ಮೈಮೇಲೆ ಹತ್ತುತ್ತಿತ್ತು ಬಸ್

TV9 Digital Desk

| Edited By: shruti hegde

Updated on:Sep 16, 2021 | 9:41 AM

Viral Video: ಬೈಕ್​ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ರಸ್ತೆಯಲ್ಲಿ ಸರ್ಕಾರಿ ಬಸ್ಸೊಂದನ್ನು ಓವರ್​ ಟೇಕ್​ ಮಾಡಲು ನೋಡುತ್ತಿರುತ್ತಾನೆ. ಬಸ್ಸಿಗಿಂತ ಮುಂದೆ ಹೋಗುವ ಆತುರದಲ್ಲಿ ರಸ್ತೆ ತಿರುವನ್ನೂ ಗಮನಿಸದೇ ಮುನ್ನುಗ್ಗಿದ್ದಾನೆ.

Shocking Video: ಬಸ್ಸನ್ನು ಓವರ್ ​ಟೇಕ್​ ಮಾಡೋಕೆ ಹೋಗಿ ಆಗಿದ್ದೇ ಬೇರೆ! ಒಂದು ಸೆಕೆಂಡ್​ ತಡವಾಗಿದ್ರೂ ವ್ಯಕ್ತಿಯ ಮೈಮೇಲೆ ಹತ್ತುತ್ತಿತ್ತು ಬಸ್
ಬಸ್ಸನ್ನು ಓವರ್ ​ಟೇಕ್​ ಮಾಡೋಕೆ ಹೋಗಿ ಆಗಿದ್ದೇ ಬೇರೆ!
Follow us

ಇದೀಗ ಸಾಮಾಜಿಕ ಜಾಲತಾಣದಲ್ಲಿ ಶಾಕಿಂಗ್ ವಿಡಿಯೋವೊಂದು ಹರಿದಾಡುತ್ತಿದೆ. ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಮೈ ಜುಂ ಅನಿಸುವಂತಿದೆ. ಟೈಮ್ಸ್​ ಆಫ್​ ಇಂಡಿಯಾ ವರದಿಯ ಪ್ರಕಾರ, ಸೋಮವಾರ ಮಧ್ಯಾಹ್ನದ ಸಮಯದಲ್ಲಿ ಈ ಘಟನೆ ನಡೆದಿದೆ. ಗುಜರಾತ್​ನ ಹೈವೇಯಲ್ಲಿ ಘಟನೆ ನಡೆದಿರುವಾಗಿ ವರದಿಗಳಿಂದ ಮಾಹಿತಿ ಲಭ್ಯವಾಗಿದೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಬೈಕ್​ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ರಸ್ತೆಯಲ್ಲಿ ಸರ್ಕಾರಿ ಬಸ್ಸೊಂದನ್ನು ಓವರ್​ ಟೇಕ್​ ಮಾಡಲು ನೋಡುತ್ತಿರುತ್ತಾನೆ. ಬಸ್ಸಿಗಿಂತ ಮುಂದೆ ಹೋಗುವ ಆತುರದಲ್ಲಿ ರಸ್ತೆ ತಿರುವನ್ನೂ ಗಮನಿಸದೇ ಮುನ್ನುಗ್ಗಿದ್ದಾನೆ. ಬಸ್ಸಿನ ಹಿಂಭಾಗಕ್ಕೆ ಗುದ್ದಿದ ಪರಿಣಾಮ ಬಸ್​ನ ಮುಂದಿನ ಚಕ್ರದಡಿಯಲ್ಲಿ ವ್ಯಕ್ತಿ ಸಿಲುಕಿಕೊಂಡಿದ್ದಾನೆ. ಬಸ್​ ಚಾಲಕ ತಕ್ಷಣ ಬ್ರೇಕ್​ ಹಾಕಿ ವಾಹನ ನಿಲ್ಲಿಸಿದ್ದರಿಂದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾನೆ. ವಿಡಿಯೋ ಭಯಾನಕವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಓವರ್​ ಟೇಕ್​ ಮಾಡಲು ಮುಂದಾದ ವ್ಯಕ್ತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ಬಸ್ಸಿನ ಅಡಿಯಿಂದ ಎದ್ದು ಬರುತ್ತಿರುವ ದೃಶ್ಯ ಸೆರೆಯಾಗಿದೆ. ಕೆಳಗೆ ಬಿದ್ದ ವ್ಯಕ್ತಿ ಮೇಲಕ್ಕೆದ್ದು ಬಂದು ಬೈಕ್ ಸರಿಯಾಗಿದೆಯೇ ಎಂದು ನೋಡುಕೊಳ್ಳುತ್ತಿದ್ದಾನೆ ಎಂದು ಬರೆಯಲಾಗಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತುಂಬಾ ಭಯಾನಕವಾಗಿದೆ ಅಪಘಾತ ಎಂದು ಹೇಳಿದ್ದಾರೆ. ಅಜಾಗರೂಕತೆಯ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಮತ್ತೋರ್ವರು ಹೇಳಿದ್ದಾರೆ. ಆತನ ಅದೃಷ್ಟ ಚೆನ್ನಾಗಿತ್ತು ಎಂಬ ಪ್ರತಿಕ್ರಿಯೆಗಳೂ ಕೇಳಿ ಬಂದಿವೆ.

ಇದನ್ನೂ ಓದಿ:

Shocking Video: ಕುದಿಯುತ್ತಿರುವ ನೀರಿನಲ್ಲಿ ಕುಳಿತು ಧ್ಯಾನಸ್ಥನಾದ ಬಾಲಕ; ಶುರುವಾಯ್ತು ಚರ್ಚೆ

Shocking Video: ಪೊಲೀಸ್ ಎದುರೇ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ; ವಿಡಿಯೋ ವೈರಲ್

(Shocking Video Man escape after getting run over take bus in Gujarat)

ತಾಜಾ ಸುದ್ದಿ

Related Stories

Click on your DTH Provider to Add TV9 Kannada